Advertisement
ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಹಮ್ಮಿಕೊಂಡಿರುವ ಭೀಮಪಲಾಸ ಸಂಗೀತೋತ್ಸವವು 2021ರ ಫೆಬ್ರವರಿಯಿಂದ ಆರಂಭಗೊಂಡು ಕೋವಿಡ್-19 ಮಧ್ಯದಲ್ಲಿಯೂ ರಾಜ್ಯಾದ್ಯಂತ ವರ್ಷಪೂರ್ತಿ ಯಶಸ್ವಿ ನಡೆಸಿದವು.
Related Articles
Advertisement
ಮಾ.20 ಹಾಗೂ 27 ರವಿವಾರ ದಿನದಂದು ದಿನಪೂರ್ತಿ, ಶನಿವಾರ ಸಂಜೆ 5:00 ಗಂಟೆಗೆ ಇನ್ನುಳಿದ ದಿನ ಸಂಜೆ 6:00 ಗಂಟೆಗೆ ನಡೆಯಲಿದೆ. ಮಾ.20ರಂದು ನವದೆಹಲಿಯ ಪಂ|ರಾಜೇಂದ್ರ ಪ್ರಸನ್ನ ಅವರ ಬಾನ್ಸುರಿಯ ನಿನಾದದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ಸಿಗಲಿದೆ.
ನಂತರ ಮಧ್ಯಾಹ್ನ 2:30 ಗಂಟೆಗೆ ಪಂ|ಜಯತೀರ್ಥ ಮೇವುಂಡಿಯವರ ಗಾಯನ ಸಂಜೆ 4:30 ಗಂಟೆಗೆ ಪುಣೆಯ ರಾಮದಾಸ ಫಳಸುಲೆ ಅವರ ತಬಲಾ ಸೋಲೋ, ಸಂಜೆ 6:00 ಗಂಟೆಗೆ ಪುಣೆಯ ನಿಷಾದ ಬಾಕ್ರೆ, 7:30 ಗಂಟೆಗೆ ವಿದುಷಿ ಅನುರಾಧಾ ಕುಬೇರ ಅವರ ಗಾನಲಹರಿ ಹೊರಹೊಮ್ಮಲಿದೆ.
ಮಾ.21ರಂದು ಸಂಜೆ 6:00 ಗಂಟೆಗೆ ಅಲಿಬಾಗ್ ಯುವ ಗಾಯಕಿ ಮುಗಾœ ವೈಶಂಪಾಯನ, 7:30 ಗಂಟೆಗೆ ಮುಂಬೈನ ಪಂ|ಶೌನಕ ಅಭಿಷೇಕಿ ಅವರ ಗಾನಸುಧೆ ಹರಿದು ಬರಲಿದೆ. ಮಾ.22ರಂದು ಸಂಜೆ 6:00 ಗಂಟೆಗೆ ಪುಣೆಯ ವಿನಯ ರಾಮದಾಸನ್, ವಿದುಷಿ ಮಂಜೂಷಾ ಪಾಟೀಲ ಕುಲಕರ್ಣಿಯವರ ಗಾಯನ ಕಾರ್ಯಕ್ರಮ ನಡೆಯಲಿದೆ.
ಮಾ.23ರಂದು ಸಂಜೆ 6:00 ಗಂಟೆಗೆ ಕೋಲತ್ತಾದ ಟ್ರೋಯಿಲಿ, ಮೊಯ್ಸಿಲಿ ದತ್ತಾ ಸಹೋದರಿಯರಿಂದ ಸರೋದ ತಂತುಗಳ ನಿನಾದ ಹರಿದು ಬರಲಿದ್ದು, ಸಂಜೆ 7:30 ಗಂಟೆಗೆ ಕೋಲ್ಕತ್ತಾದ ಬ್ರಿಜೇಶ್ವರ ಮುಖರ್ಜಿ ಅವರಿಂದ ಗಾಯನ ಮೂಡಿ ಬರಲಿದೆ.
ಮಾ.24 ರಂದು ಸಂಜೆ 6:00 ಗಂಟೆಗೆ ಕೋಲ್ಕತಾದ ಕಲ್ಯಾಣಜೀತ ದಾಸ ಅವರ ಸಿತಾರ ವಾದನ, ವಿದುಷಿ ಮನಾಲಿ ಬೋಸ್ ಅವರಿಂದ ಗಾನಲಹರಿ ಹೊರಹೊಮ್ಮಲಿದೆ. ಮಾ.25 ರಂದು ಸಂಜೆ 6:00 ಗಂಟೆಗೆ ಕೋಲ್ಕತ್ತಾದ ಐವಿ ಬ್ಯಾನರ್ಜಿ, 7:30 ಗಂಟೆಗೆ ಅರ್ಷದ ಅಲಿ ಖಾನರ ಗಾಯನ ಕಾರ್ಯಕ್ರಮ ನಡೆಯಲಿದೆ. ಮಾ.26ರಂದು ಸಂಜೆ 5:00 ಗಂಟೆಗೆ ಕೋಲ್ಕತ್ತಾದ ಶಾಶ್ವತಿ ಚೌಧರಿ, 6:00 ಗಂಟೆಗೆ ಬೆಂಗಳೂರಿನ ಪೂರ್ಣಿಮಾ ಭಟ್ ಕುಲಕರ್ಣಿ, 7:30 ಗಂಟೆಗೆ ಉ. ಫಯಾಜ್ ಖಾನರಿಂದ ಗಾನಸುಧೆ ಹರಿದು ಬರಲಿದೆ. ಮಾ.27 ರವಿವಾರ ದಿನಪೂರ್ತಿಯಾಗಿ ನಡೆಯುವ ಸಂಗೀತೋತ್ಸವದಲ್ಲಿ ಬೆಳಿಗ್ಗೆ 10:00 ಗಂಟೆಗೆ ಸೋಲಾಪುರದ ಭೀಮಣ್ಣ ಜಾಧವ ಅವರಿಂದ ಸುಂದರಿ ವಾದನ, 11:15 ರಿಂದ ಗಾನಪಂಡಿತ ಎಂ. ವೆಂಕಟೇಶಕುಮಾರ ಅವರಿಂದ ಗಾನಲಹರಿ ಮೊಳಗಲಿದೆ. ಮಧ್ಯಾಹ್ನ 2:30 ಗಂಟೆಗೆ ಕಿರಾನಾ ಘರಾಣೆಯ ಪಂ|ಕೈವಲ್ಯಕುಮಾರ ಗುರವ ಅವರ ಗಾಯನ ಮೂಡಿ ಬಂದರೆ, 4:15 ಗಂಟೆಗೆ ಪೊವೈನ ಹರ್ಷನಾರಾಯಣ ಅವರ ಸಾರಂಗಿ ವಾದನದ ನಿನಾದ ಹರಿದು ಬರಲಿದೆ. ಸಂಜೆ 6:00 ಗಂಟೆಗೆ ಮುಂಬೈನ ಚೇತನಾ ಪಾಠಕ ಅವರಿಂದ ಗಾಯನ, 7:30 ರಿಂದ ರುಚಿರಾ ಕೇದಾರ ಮತ್ತು ತಂಡದವರಿಂದ ಗಾಯನ-ವಾದನ-ನರ್ತನಗಳ ಕಲಾವಂತಿಕೆ ಮೂಡಿ ಬರಲಿದೆ. ಇದರಲ್ಲಿ ರುಚಿರಾ ಕೇದಾರ ಗಾಯನ, ಶೀತಲ ಕೋಳ್ವಲಕರ ಕಥಕ್ ನೃತ್ಯ, ಸಹನಾ ಬ್ಯಾನರ್ಜಿ ಸಿತಾರ ವಾದನ, ಸಾವನಿ ತಳವಲಕರ ತಬಲಾ, ಅದಿತಿ ಗರಡೆ ಹಾರ್ಮೋನಿಯಂ, ಅನುಜಾ ಬುರ್ಡೆ ಪಖಾವಾಜನ ವಿದ್ವತ್ತನ್ನು ಮೆರೆಯಲಿದ್ದಾರೆ.
ಮಾ.28 ರಂದು ಸಂಜೆ 6:00 ಗಂಟೆಗೆ ಉಜ್ಜಯನಿಯ ಸುಧಾಕರ ದೇವಳೆ ಅವರ ಗಾಯನ, ಸಂಜೆ 7:30 ಗಂಟೆಗೆ ಬೆಂಗಳೂರಿನ ಪ್ರವೀಣ ಗೋಡಖೀಂಡಿ ಷಡ್ಜ್ ಗೋಡಖೀಂಡಿಯವರ ದ್ವಂದ್ವ ಕೊಳಲುವಾದನಗಳ ನಿನಾದ ಹರಿಯಲಿದೆ. ಮಾ.29ರಂದು ಸಂಜೆ 6:00 ಗಂಟೆಗೆ ನಾಸಿಕ್‌ನ ಮಂಜರಿ ಅಸ್ನಾರೆ ಕೇಳಕರ ಹಾಗೂ ಸಂಜೆ 7:30 ಗಂಟೆಗೆ ಪುಣೆಯ ಪಂ|ಆನಂದ ಭಾಟೆ ಅವರ ಗಾನಸಿಂಚನ ಮೊಳಗಲಿದೆ. ಭೀಮಪಲಾಸ ಸಂಗೀತೋತ್ಸವದ ಕೊನೆಯ ದಿನ ಮಾ.30 ರಂದು ಮುಂಬೈ ವರದಾ ಗೊಡಬೋಲೆ ಗಾಯನ ಮೂಡಿ ಬರಲಿದೆ.
ಸಂಜೆ 7:30 ಗಂಟೆಗೆ ಮೂಡಿ ಬರುವ ನವದೆಹಲಿ ಪಂ|ಹರೀಶ ತಿವಾರಿ ಅವರ ಗಾಯನದೊಂದಿಗೆ ಪಂ|ಭೀಮಸೇನ ಜೋಶಿ ಜನ್ಮಶತಾಬ್ದಿ ವರ್ಷಾಚರಣೆಗೆ ತೆರೆ ಬೀಳಲಿದೆ. ಪಂ|ರಘುನಾಥ ನಾಕೋಡ, ಪಂ|ರವೀಂದ್ರ ಯಾವಗಲ್, ಪಂ|ರಾಮದಾಸ ಫಳಸುಲೆ, ಪಂ|ರಾಜೇಂದ್ರ ನಾಕೋಡ, ಪಂ|ಸಾತಲಿಂಗಪ್ಪ ದೇಸಾಯಿ ಕಲ್ಲೂರ, ಇಶಾನ್ ಘೋಷ, ಪಾಂಡುರಂಗ ಪವಾರ, ಪ್ರಥಮೇಶ ಅಮ್ರುಲೆ, ಕೇಶವ ಜೋಶಿ, ಉದಯ ಕುಲಕರ್ಣಿ, ಶ್ರೀಧರ ಮಾಂಡ್ರೆ, ದೇಬಜಿತ ಪಟತುಂಡಿ, ಸುಮಿತ ನಾಯಕ, ರೂಪಕ ಕಲ್ಲೂರಕರ, ಅಂಗದ ದೇಸಾಯಿ ತಬಲಾ ಸಾಥ್ ನೀಡಲಿದ್ದಾರೆ. ಡಾ|ಸುಧಾಂಶು ಕುಲಕರ್ಣಿ, ಪಂ|ವ್ಯಾಸಮೂರ್ತಿ ಕಟ್ಟಿ, ಗುರುಪ್ರಸಾದ ಹೆಗಡೆ, ಅಮೇಯ ಬಿಚು, ಜೋತಿರ್ಮಯ ಬ್ಯಾನರ್ಜಿ, ಸತೀಶ ಭಟ್ಟ ಹೆಗ್ಗಾರ, ಭರತ ಹೆಗಡೆ ಅವರು ಹಾರ್ಮೋನಿಯಂ ಸಾಥ್, ಸರಫರಾಜ್ ಖಾನ ಸಾರಂಗಿ ಹಾಗೂ ರಂಜನ ಬ್ಯೂರಾ ವಯೋಲಿನ್ ಸಾತ್ ಸಂಗತ್ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ