Advertisement

ಸನ್ನಡತೆ ಆಧಾರದ ಮೇಲೆ 18 ಮಂದಿ ಬಂಧಿತರ ಬಿಡುಗಡೆ

12:16 PM Mar 13, 2022 | Team Udayavani |

ಕಲಬುರಗಿ: ವಿವಿಧ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಲಬುರಗಿ ಕಾರಾಗೃಹದಲ್ಲಿ 14 ವರ್ಷ ಕಾಲ ಶಿಕ್ಷೆ ಅನುಭವಿಸಿದ 17 ಪುರುಷ, ಒಬ್ಬರು ಮಹಿಳೆ ಸೇರಿ ಒಟ್ಟು 18 ಬಂಧಿತರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು.

Advertisement

ಕೇಂದ್ರ ಕಾರಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆ. ಸುಭ್ರಮಣ್ಯ ಅವರು ಬಂಧಿಗಳಿಗೆ ಬಿಡುಗಡೆ ಪತ್ರ ನೀಡಿ, ಶುಭ ಕೋರಿದರು. ಈ ಸಂದರ್ಭದಲ್ಲಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್‌. ರಮೇಶ, ಸಿಜೆಎಂ ಬಾಳಪ್ಪ ಜರುಗು ಹಾಗೂ ಸಿಬ್ಬಂದಿ ಇದ್ದರು.

ಪಳನಿ ಚಿನ್ನಪ್ಪ, ಭೀಮನಗೌಡ ಸಿದ್ಧನಗೌಡ, ರಾಚಪ್ಪ ಹೊನ್ನಪ್ಪ ಡೊಳ್ಳೆನೋರ, ಜಗನ್ನಾಥ ರಾಮಣ್ಣ ಗೊಲ್ಲ, ಶಂಕ್ರಾನಾಯ್ಕ ರೇಖ್ಯಾನಾಯ್ಕ, ಸುರೇಶ ಚಿನ್ನಿ, ಹನುಮಂತ ಸಿದ್ರಾಮ ಭಜಂತ್ರಿ, ಸಯ್ಯದ್‌ ಜಮೀರ್‌ ಸಯ್ಯದ್‌ ಸರ್ದಾರ್‌, ನಾಮದೇವ ಮಸಾಜಿ ಕಾಂಬ್ಳೆ, ರವಿ ಸಾತಪ್ಪ ಸಾತಲಿಂಗಪ್ಪ ಗಾಣಗಾಪುರ, ಮಲ್ಲಪ್ಪ ಜಕ್ಕಪ್ಪ, ಹಣಮಂತ ಮಾಣಿಕ್‌ ಸಿಂಧೆ, ಚಂದ್ರಯ್ಯ ಶರಣಯ್ಯ, ಬಸವರಾಜ ಶಿವರಾಯ ನಾಟಿಕಾರ, ಸಂತೋಷ ಶಿವರಾಯ ನಾಟಿಕಾರ, ಮೆಹೆಬೂಬ್‌ ಅಲಿ ಮಹೆಬೂಬ್‌ಸಾಬ್‌, ಮಹಾದೇವಿ ಸಂಜು ಭಡನೋರ್‌, ರಾಜೇಂದ್ರ ರಾಜಪ್ಪ ನಾಗಯ್ಯ ಬಿಡುಗಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next