Advertisement
ದೆಹಲಿಯಲ್ಲಿ ರೈಸಿನಾ ಡೈಲಾಗ್‌ನಲ್ಲಿ ಭಾಗವಹಿಸಿ ಅಮೆರಿಕಕ್ಕೆ ವಾಪಸಾಗಿರುವ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ವಿದೇಶಾಂಗ ಇಲಾಖೆ ಸಹಾಯಕ ಸಚಿವೆ(ಹಂಗಾಮಿ) ಅಲೀಸ್ ವೆಲ್ಸ್ ಅವರು ಶನಿವಾರ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಯನ್ನು ಭಾಗಶಃ ಪುನಾರಂಭಿಸಿರುವ ವಿಚಾರ ಕೇಳಿ ಸಂತೋಷವಾಗಿದೆ. ಅಮೆರಿಕ ಸೇರಿದಂತೆ ವಿವಿಧ ದೇಶಗಳ ರಾಯಭಾರಿಗಳಿಗೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಲು ಅವಕಾಶ ಕೊಟ್ಟಿರುವುದೂ ಉತ್ತಮ ಬೆಳವಣಿಗೆಯಾಗಿದೆ. ಆದರೆ, ಯಾವುದೇ ಆರೋಪವಿಲ್ಲದೇ ಬಂಧನದಲ್ಲಿರುವ ರಾಜಕೀಯ ನಾಯಕರಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಅಲೀಸ್ ಹೇಳಿದ್ದಾರೆ.
ಕೇರಳ, ಪಂಜಾಬ್ ಬಳಿಕ ರಾಜಸ್ಥಾನ ವಿಧಾನಸಭೆ ಕೂಡ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಕೇಂದ್ರ ಸರ್ಕಾರ ಕೂಡಲೇ ಈ ಕಾನೂನನ್ನು ವಾಪಸ್ ಪಡೆಯಬೇಕು ಎಂದು ನಿರ್ಣ¿ಏುದಲ್ಲಿ ಕೋರಲಾಗಿದೆ.