Advertisement
ಹೊಸದಾಗಿ ಆಡಳಿತಕ್ಕೆ ಬಂದಿರುವ ವಿನೋದ್ ರಾಯ್ ಅವರನ್ನು ಒಳಗೊಂಡ ಆಡಳಿತ ಸಮಿತಿ ಇದುವರೆಗೆ ಬಾಕಿ ಅನುದಾನವನ್ನು ವಿವಿಧ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಡುಗಡೆ ಮಾಡಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಕ್ರಿಕೆಟ್ ಸಂಸ್ಥೆಗಳು ಈ ಹಿಂದೆಯೇ ತಮ್ಮ ಬಹಿರಂಗ ಅಸಮಾಧಾನವನ್ನು ಹೊರಹಾಕಿದ್ದವು. ಇದೀಗ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕೂಡ ಅಸಮಾಧಾನ ಹೊರಹಾಕಿದೆ. ಅಲ್ಲದೆ ಕೋರ್ಟ ಮೆಟ್ಟಿಲೇರಿದೆ. ದೂರಿನಲ್ಲಿ 4ನೇ ಟೆಸ್ಟ್ ಪಂದ್ಯದ ಆತಿಥ್ಯಕ್ಕೆ ಸಂಬಂಧಪಟ್ಟಂತೆ ಬಿಸಿಸಿಐ ರಾಜ್ಯ ಸಂಸ್ಥೆಗೆ ಹಣ ನೀಡಿಲ್ಲ ಎಂದು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ದೂರಿತ್ತು. ಈ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಕೂಡಲೇ ಟೆಸ್ಟ್ ನಡೆಸಲು ನೀಡಬೇಕಿದ್ದ ಹಣವನ್ನು ನೀಡಿ. ಅಲ್ಲದೆ ಮುಂದಿನ ಐಪಿಎಲ್ ಕೂಟಗಳನ್ನು ಯಾವುದೇ ಅಡಚಣೆಗಳಿಲ್ಲದೆ ನಡೆಸಿಕೊಂಡು ಹೋಗಬೇಕು. ಇದಕ್ಕಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. Advertisement
ಐಪಿಎಲ್‌ಗೆ ಅನುದಾನ ಬಿಡುಗಡೆ ಮಾಡಿ: ಬಿಸಿಸಿಐಗೆ ಸುಪ್ರೀಂ ಸೂಚನೆ
10:32 AM Mar 25, 2017 | |
Advertisement
Udayavani is now on Telegram. Click here to join our channel and stay updated with the latest news.