Advertisement

ಕೃತಿ ಬಿಡುಗಡೆ ಸಮಾರಂಭ

01:45 PM Aug 07, 2017 | |

ಶಿವಮೊಗ್ಗ: ಅನುಪಯುಕ್ತ ಸಂಶೋಧನಾ ಕೃತಿಗಳೇ ಹೆಚ್ಚಿರುವ ಸಂದರ್ಭದಲ್ಲಿ ದೊಡ್ಡೇರಿ ವೆಂಕಟಗಿರಿ ರಾವ್‌ ಅವರ ಕುರಿತಾದ ಸಂಶೋಧನಾ ಕೃತಿ ಉತ್ತಮವಾಗಿದೆ ಎಂದು ಚಿಂತಕ ಎನ್‌.ಎಸ್‌. ಶ್ರೀಧರಮೂರ್ತಿ ಅಭಿಪ್ರಾಯಪಟ್ಟರು.

Advertisement

ಕಮಲಾ ನೆಹರೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ| ಎಂ. ಹಾಲಮ್ಮ ರಚಿತ ಡಾ| ದೊಡ್ಡೇರಿ ವೆಂಕಟಗಿರಿರಾವ್‌ ಅವರ “ಸೃಜನಶೀಲತೆಯ ವಿಭಿನ್ನ ಆಯಾಮಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. 1980 ಕಾಲದಲ್ಲಿ ದೊಡ್ಡೇರಿ
ಪ್ರಸಿದ್ಧರಾಗಿದ್ದರು. ಅಪಾರ ಓದುಗ ವಲಯ ಹೊಂದಿದ್ದ ಅವರ ಲೇಖನಗಳು ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿತ್ತು. ಈ ಕೃತಿ ಸಂಶೋಧನೆ ಮತ್ತು ವಿಮರ್ಶತ್ಮಾಕ ದೃಷ್ಟಿಯಿಂದಲೂ ಚೆನ್ನಾಗಿ ಮೂಡಿಬಂದಿದೆ. ಹೊಸ ಪೀಳಿಗೆಗೆ ದೊಡ್ಡೇರಿ ಅವರ ಕುರಿತಾಗಿ ತಿಳಿದಕೊಳ್ಳಲು ಕೃತಿ ನೆರವಾಗುತ್ತದೆ ಎಂದು ತಿಳಿಸಿದರು. 

ದೊಡ್ಡೇರಿ ಅವರ ಕೃತಿಗಳಲ್ಲಿ “ಸಂಪ್ರದಾನ’ ಬಹಳ ಪ್ರಸಿದ್ಧಿ ತಂದುಕೊಟ್ಟಿತ್ತು. ಅವರು ಕೃತಿಗಳಲ್ಲಿ ಬಳಸಿರುವ ಅವರೇ ತೆಗೆದ ಛಾಯಚಿತ್ರಗಳು ಕಥೆಯ ವಿಸ್ತಾರ ಹೆಚ್ಚಿಸುತ್ತಿದ್ದವು. ಅವರ ಪ್ರತಿ ಕೃತಿಯಲ್ಲಿ ಅನುಸರಿಸುತ್ತಿದ್ದ ತಂತ್ರಗಾರಿಕೆ ವಿಭಿನ್ನವಾಗಿತ್ತು. ಒಂದೊಂದು ಕೃತಿಯಲ್ಲಿ ಒಂದೊಂದು ಬಗೆಯ ರಚನೆಯಿಂದ ಸಾಹಿತ್ಯ ಎಲ್ಲರಿಗೂ ಇಷ್ಟವಾಗುತ್ತಿತ್ತು. ವೈಜ್ಞಾನಿಕವಾಗಿಯೂ ಕೃತಿ ರಚಿಸುತ್ತಿದ್ದರು. ಭಾವನಾತ್ಮಕವಾಗಿ ಹಿಡಿದಿಡುವ ತಂತ್ರ ಅವರ
ರಚನೆಯಲ್ಲಿತ್ತು ಎಂದರು.

ಸಾಹಿತಿ ಶ್ರೀಕಂಠ ಕೂಡಿಗೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಡಾ| ಹಾಲಮ್ಮ ಗಣೇಶ್‌, ಪ್ರೊ| ಎಚ್‌.ವಿ. ರಾಮಪ್ಪಗೌಡ, ಡಾ| ಕೃಪಾಲಿನಿ, ಪಾರ್ವತಿ ರವೀಂದ್ರನಾಥ್‌ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next