Advertisement
ಬಿಜೆಪಿಯ ಕಾಸರಗೋಡು ಜಿಲ್ಲಾ ಅಧ್ಯಕ್ಷ, ನ್ಯಾಯವಾದಿ ಕೆ. ಶ್ರೀಕಾಂತ್ ಈ ವಿಷಯವಾಗಿ ತುರ್ತಾಗಿ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದು, ಹಡಗಿನಲ್ಲಿ ಸಿಲುಕಿರುವವರ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಆಂಗ್ಲೋ ಈಸ್ಟರ್ನ್ ಶಿಪಿಂಗ್ ಕಂಪೆನಿಗೆ ಸೇರಿದ ಎಸ್.ಜಿ. ಪೆಗಾಸಸ್ ಎಂಬ ಹೆಸರಿನ ಹಡಗು ಮಾರ್ಚ್‌ನಲ್ಲಿ ರಾಸಾಯನಿಕ ಪದಾರ್ಥಗಳನ್ನು ಹೇರಿಕೊಂಡು ಮುಂಬಯಿಯಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿತ್ತು. ದಾರಿ ಮಧ್ಯೆ ಮಲಕ್ಕಾ ಪ್ರದೇಶಕ್ಕೆ ತಲುಪಿದಾಗ ಎಂಜಿನ್ ಕೆಟ್ಟು ದಿಕ್ಕು ಬದಲಾವಣೆಗೊಂಡು ಇಂಡೋ ನೇಷ್ಯಾದ ಸಮುದ್ರ ತೀರಕ್ಕೆ ಸಾಗಿತ್ತು, ಅಲ್ಲಿ ಲಂಗರು ಹಾಕಿ ನಿಲ್ಲಿಸಲಾಗಿತ್ತು. ಇಂಡೋನೇಷ್ಯಾ ನೌಕಾಪಡೆ ತನ್ನ ವ್ಯಾಪ್ತಿಗೊಳಪಟ್ಟ ಸಮುದ್ರ ಪ್ರವೇಶಿಸಿದ ಕಾರಣ ನೀಡಿ ಹಡಗನ್ನು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿ, ಅಲ್ಲಿನ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಹಡಗಿನಲ್ಲಿರುವ 22 ಭಾರತೀಯರು ಐದು ತಿಂಗಳಿಂದ ಹಡಗಿನಲ್ಲಿ ಉಳಿದುಕೊಂಡು ಏನು ಮಾಡಬೇಕೆಂದು ತಿಳಿಯದೆ ಅಂಗ ಲಾಚುವ ಸ್ಥಿತಿಗೆ ತಲುಪಿದ್ದಾರೆ.