Advertisement

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

12:40 PM May 08, 2024 | Team Udayavani |

ಹುಬ್ಬಳ್ಳಿ: ಲೋಕ ಮತ ಸಮರ ಮುಗಿಸಿರುವ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥ, ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ ಬುಧವಾರ ಕುಟುಂಬ ಸದಸ್ಯರೊಂದಿಗೆ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು.

Advertisement

ಮನೆಯಲ್ಲಿ ಪತ್ನಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಕಾಲ ಕಳೆದರು, ಕೆಲ ಕಾಲ ಮೊಮ್ಮಗಳೊಂದಿಗೆ ಆಟವಾಡಿದರು. ಪಕ್ಷದ ಕೆಲ ಪ್ರಮುಖರು, ಹಿತೈಷಿಗಳು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಮತದಾನ ಮಾಹಿತಿ ಪಡೆದುಕೊಂಡರು.

ಜೋಶಿಯವರ ಪತ್ನಿ ಜ್ಯೋತಿ ಜೋಶಿ ಮಾತನಾಡಿ,’ಸಾಹೇಬರು ಕುಟುಂಬಕ್ಕೆ ಸಮಯ ನೀಡಿದ್ದು ಕಡಿಮೆ. ಫಲಿತಾಂಶ ಬರುವವರೆಗಾದರೂ ಕುಟುಂಬಕ್ಕೆ ಸಮಯ ನೀಡುತ್ತಾರೆ ಎಂದು ಕೊಂಡಿದ್ದೇವೆ. ಸಚಿವರಾಗಿ ದೆಹಲಿಯಲ್ಲಿ ಹೆಚ್ಚು ಕಳೆದರು, ದೇಶದ ಕಾರ್ಯಕ್ಕೆ ಒತ್ತು ಕೊಟ್ಟಿದ್ದರು. ಚುನಾವಣೆ ಘೋಷಣೆ ನಂತರ ಪ್ರಚಾರದಲ್ಲಿ ತೊಡಗಿದವರು ಈ ದಿನ ಇಷ್ಟೊಂದು ಸಮಯ ನಮ್ಮೊಂದಿಗೆ ಇದ್ದಾರೆಂಬ ಖುಷಿ ತಂದಿದೆ.
ಅವರ ಸಣ್ಣ ಮಗಳು ಯಾವ ತರಗತಿ ಎಂಬುದು ಸಹ ಅವರಿಗೆ ಸರಿಯಾಗಿ ತಿಳಿದಿಲ್ಲ.ಅಷ್ಟರ ಮಟ್ಟಿಗೆ ಅವರು ಕೆಲಸ, ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಕುಟುಂಬಕ್ಕೆ ಸಮಯ ನೀಡದಿದ್ದರೂ ದೇಶ ಕಾರ್ಯದಲ್ಲಿ, ಸೇವೆಯಲ್ಲಿ‌ತೊಡಗಿದ್ದರ ಖುಷಿ ಇದೆ‌’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next