Advertisement
ಸ್ವಲ್ಪ ದೂರದಲ್ಲಿ ವಾಹನ ನಿಲುಗಡೆನಿಮ್ಮ ಮನೆ ಅಥವಾ ರೂಮ್ ಕಚೇರಿ ಸಮೀಪದಲ್ಲೇ ಇದ್ದರೆ ಕೆಲವೊಮ್ಮೆ ನಡದೇ ಹೋಗುವುದು ಉತ್ತಮ. ಇನ್ನು ವಾಹನ ಬಳಕೆ ಅನಿವಾರ್ಯ ಎಂದಾದರೆ ಕಚೇರಿಯ ಸ್ಪಲ್ಪ ದೂರದಲ್ಲಿ ಪಾರ್ಕ್ ಮಾಡಿ ನಡೆದು ಹೋಗಿ. ಇದರಿಂದ ಶರೀರಕ್ಕೆ ಸ್ಪಲ್ಪವಾದರೂ ವ್ಯಾಯಾಮ ಲಭಿಸಿದಂತಾಗುತ್ತದೆ.
ಕಚೇರಿ ಒಳಗೆ ಮತ್ತು ಹೊರಗೆ ಹೋಗುವಾಗ, ಕ್ಯಾಂಟೀನ್ ಹೋಗುವಾಗ ಅಥವಾ ಕೆಲಸಕ್ಕಾಗಿ ಬೇರೆ ಕಡೆ ಹೋಗಬೇಕಾದಾಗ ಲಿಫ್ಟ್ ಅಥವಾ ಎಸ್ಕಲೇಟರ್ ಬಳಸಬೇಡಿ. ಮೆಟ್ಟಿಲು ಬಳಸಿ. ನಿಮಗೆ ಗೊತ್ತಾ?ಮೆಟ್ಟಿಲು ಹತ್ತುವುದು ಮತ್ತು ಇಳಿಯುವುದು ಉತ್ತಮ ವ್ಯಾಯಾಮ ಇದ್ದಂತೆ. ಜಾಗಿಂಗ್, ವಾಕಿಂಗ್‌ಗಿಂತ ಇದು ಉತ್ತಮ ಎನ್ನುತ್ತಾರೆ ತಜ್ಞರು. ಇನ್ನೊಂದು ಮುಖ್ಯ ವಿಚಾರ ಎಂದರೆ ಮೆಟ್ಟಿಲಿನ ಸಹಾಯದಿಂದ ಮಾಡುವ ವ್ಯಾಯಾಮ ಇತ್ತೀಚೆಗೆ ಟ್ರೆಂಡಿಂಗ್ ಆಗುತ್ತಿದೆ. ಆನ್‌ಲೈನ್ ಬಳಕೆ ಕಡಿಮೆ ಮಾಡಿ
ನಿಮ್ಮ ಸಹದ್ಯೋಗಿಗಳೊಂದಿಗೆ ಮಾತನಾಡಬೇಕೆಂದರೆ, ಸಮಾಲೋಚನೆ ನಡೆಸಲಿದ್ದರೆ ಆನ್‌ಲೈನ್, ಫೋನ್ ಬಳಸುವುದು ಬಿಟ್ಟು ಅವರ ಬಳಿ ಹೋಗಿ ಮಾತನಾಡಿ. ಕುಳಿತುಕೊಂಡೇ ಇರುವ ಸಮಯದಲ್ಲಿ ಇಂತಹ ಸಣ್ಣ ಪುಟ್ಟ ವಾಕಿಂಗ್ ಉತ್ತಮ.
Related Articles
ಪ್ರತಿ ಗಂಟೆಗೊಮ್ಮೆ ಸ್ವಲ್ಪ ವಿಶ್ರಾಂತಿ ಪಡೆಯಿರಿ. ಓಡಾಡಲು ಸಾಧ್ಯವಿಲ್ಲ ಎಂದಾರೆ ಎದ್ದು ನಿಲ್ಲಿ. ಕನಿಷ್ಠ ಹತ್ತು ನಿಮಿಷವಾದರೂ ನಿಂತುಕೊಂಡಿರಿ.
Advertisement
ಸಣ್ಣ ಪುಟ್ಟ ವ್ಯಾಯಾಮ ಇರಲಿಊಟದ ಸಮಯದಲ್ಲಿ ಸಣ್ಣ ಪುಟ್ಟ ವ್ಯಾಯಾಮ ಮಾಡುವುದು ಒಳಿತು ಎನ್ನುತ್ತಾರೆ ಆರೋಗ್ಯ ತಜ್ಞರು. ಉದಾ: ಕೈ, ಕಾಲುಗಳನ್ನು ಒದರುವುದು ಇತ್ಯಾದಿ. ಮೊಬೈಲ್‌ನಲ್ಲಿ ಮಾತನಾಡುವಾಗ ಕುಳಿತುಕೊಳ್ಳದೆ ಅತ್ತ ಇತ್ತ ಓಡಾಡಿ. ನಿಮ್ಮ ಡೆಸ್ಕ್ನಲ್ಲೇ ಊಟ ಮಾಡುವ ಬದಲು ಡೈನಿಂಗ್ ಹಾಲ್ ಅನ್ನು ಬಳಸಿ. ಸಾಕಷ್ಟು ನೀರು ಕುಡಿಯಿರಿ
ಇದು ಬಹಳ ಮುಖ್ಯ. ಸಾಕಷ್ಟು ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು. ಕುಳಿತುಕೊಳ್ಳುವ ಭಂಗಿ ಗಮನಿಸಿ
ಇನ್ನೊಂದು ಪ್ರಧಾನ ಅಂಶವೆಂದರೆ ನೀವು ಕುಳಿತುಕೊಳ್ಳುವ ರೀತಿ ಸಮರ್ಪಕವಾಗಿದ್ದರೆ ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಬಹುದು. ನೆಟ್ಟಗೆ ಕುಳಿತುಕೊಳ್ಳಬೇಕು ಮತ್ತು ಕುತ್ತಿಗೆ ನೇರವಾಗಿರಬೇಕು.