Advertisement

ಬಂಧು

06:00 AM Dec 24, 2017 | |

ಆಫೀಸು ಮುಗಿಸಿ ಮನೆಗೆ ಬಂದು  ಫ್ರೆಶ್‌ ಆಗಿ ಲಘುವಾಗಿ ಉಪಹಾರ ಸೇವಿಸಿದ ಬಳಿಕ ಮೊಬೈಲ್‌ ಹಿಡಿದು ಕುಳಿತರೆ ಮುಗಿಯಿತು. ಆಮೇಲೆ ತೆರೆದುಕೊಳ್ಳುವುದು ಬೇರೆಯೇ ಜಗತ್ತು. ನಾನು ಅದರಲ್ಲೇ ಮೈಮರೆತು ವಿಲೀನ. ಪತ್ನಿ ತನ್ನ ಮೊಬೈಲ್‌ ಹಿಡಿದು ಕುಳಿತರೆ ಮಗ ಮನೆ ಸೇರುವುದು ರಾತ್ರಿ. ಅವನು ಟ್ವೆಂಟಿ ಫೋರ್‌ ಇಂಟು ಸೆವೆನ್‌ ಆನ್ಲ„ನ್‌ನಲ್ಲಿ ವ್ಯಸ್ತ! ಇಂದು ಪರಿಸ್ಥಿತಿ ಏನಾಗಿದೆ ಎಂದರೆ ನಾವು ಮನೆಯಲ್ಲಿ ಪರಸ್ಪರ ಮಾತನಾಡಿಕೊಳ್ಳುವುದಕ್ಕಿಂತ, ಕಂಡು ಅರಿತಿರದ ಯಾರೊಡನೆಯೋ ಇಲ್ಲದ ಸಂಬಂಧಗಳನ್ನು ಸ್ಥಾಪಿಸಿಕೊಂಡು ಹತ್ತಿರವಾಗತೊಡಗುತ್ತ¤, ನಮ್ಮ ಮನೆಯವರೊಡನೆ ದೂರವಾಗುತ್ತಿರುವುದು ವಿಪರ್ಯಾಸ. 

Advertisement

ಇಂಟರ್ನೆಟ್‌ ಎಂಬ ವ್ಯಸನ, ಹತ್ತಿರದ ಸಂಬಂಧಗಳನ್ನು ದೂರ ಮಾಡುತ್ತಾ,  ಇನ್ನಾರನ್ನೋ ಹತ್ತಿರವಾಗಿಸುತ್ತ ಕನ್ನಡಿಯೊಳಗಿನ ಗಂಟು ಇದ್ದಂತೆ ಆ ಪೊಳ್ಳು ಸ್ನೇಹ, ಅಭಿಮಾನಕ್ಕೆ ಹಾತೊರೆದವರಂತೆ ಮೈಮರೆತುಬಿಡುತ್ತಿದ್ದೇವೆ ಎನಿಸುತ್ತದೆ. ನಮ್ಮ ಮನೆಯವರಿಗಿಂತ ಎಫ್ಬಿ ಸ್ನೇಹಿತರ ವಿಚಾರ ನಮಗೆ ಹೆಚ್ಚು ತಿಳಿದಿರುತ್ತದೆ. ಅವರು, “ಫೀಲಿಂಗ್‌ ಬೋರ್‌x, ಫೀಲಿಂಗ್‌ ಎಕ್ಸೆ„ಟೆಡ್‌, ಫೀಲಿಂಗ್‌ ಆ್ಯಂಗ್ರಿ’ ಎಂದರೆ ಅದಕ್ಕೆ ಕಾರಣ ತಿಳಿಯಲು ಕಾತರಿಸುವ ನಾವು, ನಮ್ಮ ಮನೆಯವರ ಅಳಲು ಕೇಳುವ ವ್ಯವಧಾನ ನಮ್ಮಲ್ಲಿರುವುದಿಲ್ಲ. ಎಫ್ಬಿ ಎಂಬ ಭಾÅಮಕ ಲೋಕದ ನನ್ನ ಸ್ನೇಹ ವಲಯದವರಲ್ಲೊಬ್ಬರು- ವಿಶ್ವೇಶ್ವರ ಸ್ವಯಂಭು! ತುಸು ವಿಶಿಷ್ಟವಾದ ಹೆಸರಿನ ವ್ಯಕ್ತಿಯೊಂದಿಗಿನ ಸ್ನೇಹಕ್ಕೆ ಒಂದು ವರ್ಷವಾಗಿದೆ ಎಂದು ಅಂದು ನನ್ನ ಫೇಸ್‌ಬುಕ್‌ ಖಾತೆ ತೆರೆದಾಗ ಅದು ನೆನಪಿಸಿತು. ಅದರ ವೀಡಿಯೋ ಒಂದು ಎಫ್ಬಿ ಸಿದ್ಧಪಡಿಸಿ, ಅವರ ಜೊತೆಗಿನ  ಸಂಹವನದ ಒಡನಾಟವನ್ನು ಕೆಲವು ಸೆಕೆಂಡುಗಳಲ್ಲಿ  ತೋರಿಸಿತು. 

ನಾನು ಅವರನ್ನು ಮುಖತಃ ಭೇಟಿಯಾಗಿರಲಿಲ್ಲ. ಆದರೆ, ಅವರನ್ನು ತುಂಬಾ ಹತ್ತಿರದಿಂದ ಬಲ್ಲೆನೆಂದರೆ ಅವರ ಸ್ನೇಹಪರ ವ್ಯಕ್ತಿತ್ವಕ್ಕೆ ನಾನು ಹಾಕಿದ ಪ್ರತೀ ಪೋಸ್ಟ್‌ಗೆ ಅವರು ಬೇಕಾಬಿಟ್ಟಿಯಾಗಿ ಮೆಚ್ಚುಗೆ ಸೂಚಿಸುತ್ತಿರಲಿಲ್ಲ, ಬದಲಿಗೆ ಅದಕ್ಕೆ ಒಂದು ಪುಟ್ಟ ಒಕ್ಕಣೆ, ಪ್ರೇರೇಪಣೆಯ ಮಾತುಗಳು ಖಂಡಿತ ಶತಃಸಿದ್ಧವಾಗಿ ನಿರೀಕ್ಷಿಸಬಹುದಿತ್ತು. ಇದು ನನ್ನ ಒಬ್ಬನ ಅನುಭವದ ಮಾತಾಗಿರಲಿಲ್ಲ. ಬದಲಿಗೆ ನಾನು ಸೂಕ್ಷ್ಮವಾಗಿ ಗಮನಿಸಿದಂತೆ ಅವರ ಎಫ್ಬಿ ಸ್ನೇಹಿತರೆಲ್ಲರಿಗೂ ವಿಶ್ವೇಶ್ವರ ಸ್ವಯಂಭು ಎಂದರೆ ತುಸು ಹೆಚ್ಚೇ ಒಲವು. ಏಕೆಂದರೆ, ಅವರು ಎಲ್ಲರನ್ನೂ ಅಷ್ಟೇ ಹಚ್ಚಿಕೊಂಡಿದ್ದರು. ನಾನು ಒಂದು ದಿನ ಫೇಸ್‌ಬುಕ್‌ನಲ್ಲಿ ಕಾಣಿಸಲಿಲ್ಲವೆಂದರೆ ಮರುದಿನ ಬೆಳಿಗ್ಗೆ ಮೆಸೆಂಜರ್‌ನಲ್ಲಿ ಅವರ ಸಂದೇಶ ಸಿದ್ಧವಿರುತ್ತಿತ್ತು, “ಹೇಗಿದ್ದೀರಿ? ಎಲ್ಲಾ ಓಕೆನಾ?’

ಮೊದಮೊದಲು ತುಸು ಅತಿರೇಕವೆನಿಸುತ್ತಿದ್ದ ಅವರ ಕುಶಲೋಪರಿ, ವಿಚಾರಣೆ, ಪ್ರತಿಕ್ರಿಯೆಗಳಿಗೆ ಒಗ್ಗುತ್ತ¤ ನಾವು ಅವರೊಡನೆ ನಮಗರಿವಿಲ್ಲದಂತೆ ಅವರ ಸ್ನೇಹಕ್ಕೆ ಸೋತು ಬಿಟ್ಟಿದ್ಧೆವು. ನಮ್ಮವರಲ್ಲಿ ಅವರೂ ಒಬ್ಬರೆಂಬ ಭಾವನೆ ನಮಗೆಲ್ಲ ಬಂದು ಬಿಟ್ಟಿತ್ತು. ದಿನಕ್ಕೆ ಕಮ್ಮಿಯೆಂದರೆ ಐದಾರಾದರೂ ಸ್ಟೇಟಸ್‌ ಹಾಕುತ್ತಿದ್ದ  ಅವರಿಗೆ ಬಹಳಷ್ಟು ಜನ ಅಭಿಮಾನಿಗಳಿದ್ದರು. 

ಮೊದಮೊದಲು ಅವರಿಗೆ ಸ್ವಪ್ರಶಂಸೆಯ ಗೀಳು ಹತ್ತಿದೆ ಎಂದು ಗೊಣಗಿಕೊಳ್ಳುತ್ತಿದ್ದ ನಾನೇ ಕ್ರಮೇಣ ಅವರ ಬಗ್ಗೆ ಆದರ ಹೊಂದಿದ್ಧೆ. ಕಾರಣ ಫೇಸ್‌ಬುಕ್‌ನ್ನು ಕೇವಲ ಅವರು ತಮ್ಮ ಆತ್ಮರತಿ ಅಥವಾ ತಮ್ಮ ಬಗ್ಗೆ ಡಂಗುರ ಸಾರಿಕೊಳ್ಳಲು ಬಳಸಿಕೊಳ್ಳಲಿಲ್ಲ, ಬದಲಿಗೆ ಅಸಹಾಯಕರ ನೆರವಿಗೂ ತಮ್ಮ ಜನಪ್ರಿಯತೆಯನ್ನು ಬಳಸಿಕೊಂಡರು. ಅವರ ಸ್ನೇಹವಲಯದಲ್ಲಿದ್ದ ಯಾರಿಗೋ ಅಪಘಾತವಾಗಿ ಆತ ಆಸ್ಪತ್ರೆ ಸೇರಿ ಸರ್ಜರಿಯಾಗಿ ಆಸ್ಪತ್ರೆಯ ಬಿಲ್‌ ಕಟ್ಟಲು ಹೆಣಗಾಡುವಾಗ ಈ ಸ್ವಯಂಭುರವರು ಅವರನ್ನು ಕಂಡು, ತಾವು ಯಥಾನುಶಕ್ತಿ ಆರ್ಥಿಕ ನೆರವು ನೀಡಿದ್ದಲ್ಲದೇ, ತಮ್ಮ ಎಫ್ಬಿ ಗೋಡೆಯ ಮೇಲೆ ಅಪಘಾತಕ್ಕೊಳಗಾದವರ ವಿವರಗಳನ್ನು, ಉಳಿತಾಯ ಖಾತೆಯ ವಿವರಗಳನ್ನು ಯಥಾಶಕ್ತಿ ಸಹಾಯ ನೀಡುವಂತೆ ಕೋರಿದ್ದರು. ಅವರ ಕರೆಗೆ ಸ್ಪಂದಿಸಿದ ಜನರ ನೆರವಿನಿಂದ ಆ ಅಪಘಾತಕ್ಕೊಳಗಾದ ವ್ಯಕ್ತಿ, ತನ್ನ ಬಿಲ್‌ ಕಟ್ಟಿ ಗುಣಮುಖನಾದ ಬಳಿಕ ಸಹಾಯ ಮಾಡಿದವರೆಲ್ಲರಿಗೂ ಕೃತಜ್ಞತೆ ಅರ್ಪಿಸಿದ್ದ. ಎಫ್ಬಿಯನ್ನು ಹೀಗೂ ಬಳಸಬಹುದೆಂಬ ಭಾವನೆಯಿಂದ ನನಗೆ ಮೊದಲ ಬಾರಿ ಸ್ವಯಂಭುರವರ ಮೇಲೆ ಗೌರವ ಉಂಟಾಗಿತ್ತು. 

Advertisement

ಆನಂತರ ನಾನು ನಿರಂತರವಾಗಿ ಅವರನ್ನು  ಅಂದರೆ ಅವರ ಚಟುವಟಿಕೆಗಳನ್ನು ಎಫ್ಬಿಯಲ್ಲಿ ಗಮನಿಸುತ್ತ ಬಂದಿದ್ಧೆ. ಯಾರಿಗೋ ರಕ್ತದಾನ ಮಾಡುವಂತೆ ಕರೆ, ಯಾವುದೋ ಸಾಹಿತಿಯ ಪುಸ್ತಕ ಬಿಡುಗಡೆಯ ಬಗ್ಗೆ ಅಭಿಮಾನದ ಬರಹ, ಇನ್ಯಾರಲ್ಲೋ ಹನಿಗವನದ ಬಗ್ಗೆ ಮೆಚ್ಚುಗೆ, ಇನ್ನೆಲ್ಲೋ ಗಿಡ ನೆಡುವ ಕಾರ್ಯಕ್ರಮ, ಕೆಲವು ಸ್ನೇಹಿತರ ಜೊತೆ ಸಮೀಪದ ತಾಣಗಳಿಗೆ ಪ್ರವಾಸ- ಈ ಇಳಿವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಾಗಿ ಸದಾ ಜೀವನ್ಮುಖೀಯಾಗಿ ನಿಜವರ್ಥದಲ್ಲಿ ಬದುಕುವ ಅವರನ್ನು  ಕಂಡು- ಕೆಲಸ, ಸಂಸಾರವೆಂದು ತೊಳಲಾಡುವ ನಾವು ಅವರಂತೆ ಮುಕ್ತವಾಗಿ ಜೀವಿಸಲಾಗುವುದಿಲ್ಲವಲ್ಲ ಎಂದು ಕೆಲವೊಮ್ಮೆ ಈಷ್ಯೆìಯೂ ಮೂಡುತಿತ್ತು. ಅವರಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಮೆಚ್ಚುಗೆಯಾಗುತ್ತಿದ್ದ ಗುಣವೆಂದರೆ ಅವರು ಯಾರನ್ನೂ ನಿಂದಿಸಿ, ದೂಷಿಸಿ ಬರೆದವರಲ್ಲ. 

ಯಾರ ಬಗ್ಗೆಯೂ ಪೂರ್ವಾಗ್ರಹವಿಟ್ಟುಕೊಂಡು ತಾವು ಬರೆದದ್ದು ಸರಿ ಎಂಬಂತೆ ತಮ್ಮ ಅಭಿಪ್ರಾಯವನ್ನು ಹೇರಿದವರಲ್ಲ. ರಾಜಕಾರಣದ ಬಗ್ಗೆ ಒಂದೇ ಒಂದು ಸ್ಟೇಟಸ್‌ ಇಲ್ಲ. ಯಾರದೇ ಜನ್ಮದಿನವೆಂದರೆ ಮೊದಲ ಶುಭಾಶಯ ಇವರದ್ದೇ. ಹೀಗೆ ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಡಿವಿಜಿಯವರ ಕವಿನುಡಿಗೆ ಅನ್ವರ್ಥವಾಗಿದ್ದ ಇಂಥ ವಿಶ್ವೇಶ್ವರ ಸ್ವಯಂಭುರವರನ್ನು, ಬೆಂಗಳೂರಿಗೆ ಹೋದಾಗ ವೈಯಕ್ತಿಕವಾಗಿ ಭೇಟಿಯಾಗಬೇಕು ಎಂಬ ಅಪೇಕ್ಷೆ ನನಗೂ ಇತ್ತು. 

ಈ ಸಲ ಬಂಧುವೊಬ್ಬರ ಮದುವೆ ನಿಮಿತ್ತ ಬೆಂಗಳೂರಿಗೆ ಹೋಗುವುದಿತ್ತು. ಸ್ವಯಂಭು ಅವರನ್ನು ಭೇಟಿಯಾಗಬೇಕೆಂದುಕೊಂಡು ಮೆಸೆಂಜರ್‌ನಲ್ಲಿ ಅವರಿಗೆ ಸಂದೇಶ ಕಳಿಸಿದ್ಧೆ. ಅವರೂ ಭೇಟಿಯಾಗಲು ಒಪ್ಪಿದ್ದರು. ನಿಗದಿತ ದಿನಾಂಕಕ್ಕೆ ಸಂಸಾರ ಸಮೇತ ಬೆಂಗಳೂರು ತಲುಪಿ ಹೋಟೆಲ್‌ ರೂಮ್‌ ಬುಕ್‌ ಮಾಡಿ ನಿತ್ಯಕರ್ಮಗಳನ್ನು ಮುಗಿಸಿ ಕ್ಯಾಬ್‌ ಮಾಡಿ ಮದುವೆ ಛತ್ರ ತಲುಪಿದೆವು. ಸ್ವಯಂಭು, ಮೂರು ಗಂಟೆಗೆ ಚಿಕ್ಕಪೇಟೆ ಸರ್ಕಲ್‌ ಬಳಿ ಸಿಗುವುದಾಗಿ ಮಾರುತ್ತರಿಸಿದ್ದರು. ಹಾಗಾಗಿ, ಮದುವೆ ಊಟ ಮುಗಿಸಿ ಪತ್ನಿ, ಮಗನನ್ನು ಆ ಮದುವೆಗೆ ಆಗಮಿಸಿದ್ದ ಕುಟುಂಬಸ್ಥರೊಡನೆ ಅವರ ಮನೆಗೆ ಕಳಿಸಿ ನಾನು ಚಿಕ್ಕಪೇಟೆ ಸರ್ಕಲ್‌ ಕಡೆ ಹೊರಟೆ. 

ಬಸ್ಸಿನಿಂದಿಳಿದು ಅವರು ಕೊಟ್ಟ ನಂಬರ್‌ಗೆ ಕರೆ ಮಾಡಿದಾಗ ಅವರು ಆಗಲೇ ಬಂದು ನನಗಾಗಿ ಕಾಯುತ್ತಿದ್ದರು. ಖಾದಿ ಕುರ್ತಾ ಪೈಜಾಮ, ಮೇಲೊಂದು ಓವರ್‌ ಕೋಟು ಧರಿಸಿ ಹೆಗಲಿಗೊಂದು ಬಟ್ಟೆಯ ಚೀಲ ನೇತಾಡಿಸಿಕೊಂಡಿದ್ದ ಸ್ವಯಂಭು ನನಗಾಗಿಯೇ ನಿರೀಕ್ಷಿಸುತ್ತಿದ್ದರು. ನನ್ನನ್ನು ಕಂಡೊಡನೆ ಬಂದು ಆತ್ಮೀಯರನ್ನು ಕಂಡಂತೆ ಆಲಂಗಿಸಿಕೊಂಡರು.ನನ್ನ ಕೈಹಿಡಿದು, “”ಇಲ್ಲಿನ ಉಡುಪಿ ಹೊಟೇಲು ಕೇಟಿಗೆ ತುಂಬಾ ಫೇಮಸ್ಸು” ಎಂದು ನನಗೆ ಬಾಯೆ¤ರೆಯಲೂ ಬಿಡದೇ ಎಳೆದೊಯ್ದು ಚಾ ಕುಡಿಸಿದರು.””ಯಾವಾಗ ಹೊರಟಿರಿ ಮಂಗಳೂರಿನಿಂದ?” ಎಂದು ವಿಚಾರಿಸಿದರು. 

“”ನಿನ್ನೆ ರಾತ್ರಿ. ಐರಾವತ ಬಸ್ಸು” ಎಂದೊಡನೆ ಬಸ್ಸಿನ ವೇಳಾಪಟ್ಟಿ, ಸುಖಾಸನದ ವಿವರಗಳ ಬಗ್ಗೆ ಮಾತನಾಡಲು ಶುರುವಿಟ್ಟುಕೊಂಡರು. ಅದರ ನಡುನಡುವೆ ಅವರ ಮೊಬೈಲ್‌ ಪರದೆಯ ಮೇಲಿನ ಎಫ್ಬಿ ಸ್ನೇಹಿತರಿಗೆ ಮಾರುತ್ತರ ನೀಡುತ್ತ ಅದರಲ್ಲೂ ಮಗ್ನರಾಗಿದ್ದರು. “”ನೀವು ಎಫ್ಬಿಯಲ್ಲಿ ತುಂಬಾ ಜನಪ್ರಿಯರು. ಅಲ್ವಾ ಸಾರ್‌?” ಎಂದೆ ನಗುತ್ತ. ನನ್ನ ಪ್ರಶಂಸೆಗೆ ಅವರ ಮುಖವರಳಿತು.””ಹೌದು. ಸಾವಿರಕ್ಕೂ ಮೀರಿ ಫ್ರೆಂಡ್ಸ್‌ ಇದ್ದಾರೆ. 

ಹೊರದೇಶದಲ್ಲೂ ತುಂಬಾ ಜನ. ಅಭಿಮಾನಿಗಳು! ನಾವು ಎಫ್ಬಿ ಸ್ನೇಹಿತರು ಅಂತ ಒಂದು ಸಂಘ ಮಾಡಿಕೊಳ್ತಿದ್ದೇವೆ. ಅದರ ಕುರಿತ ಪ್ರಕಟಣೆ ನಾನು ನನ್ನ ಎಫ್ಬಿ ಗೋಡೆ ಮೇಲೆ ಸದ್ಯದಲ್ಲಿಯೇ ಹಾಕ್ತೇನೆ” ಎಂದು ಇನ್ನು ಹುಟ್ಟು ಹಾಕಲಿರುವ ಆ ಸಂಘದ ಧ್ಯೇಯ-ಉದ್ದೇಶಗಳ ಬಗ್ಗೆ ಹೇಳತೊಡಗಿದರು. ಅವರ ತಡೆಯಿರದ ವಾಗ್ಝರಿಗೆ ಕಿವಿಯಾಗುವುದರ ಹೊರತಾಗಿ ನನಗೆ ಅನ್ಯ ಮಾರ್ಗವಿರಲಿಲ್ಲ. ಅವರನ್ನು ಭೇಟಿಯಾಗಬೇಕೆಂದು ಹಾತೊರೆದು ಬಂದಿದ್ದ ನನಗೆ ಒಂದೇ ತಾಸಿನಲ್ಲಿ ನಿರುತ್ಸಾಹ ಮೂಡತೊಡಗಿತ್ತು. ಅವರ  ಮಾತಿಗೆ ಬ್ರೇಕ್‌ ಹಾಕುತ್ತ ನಾನೇ ವಿಷಯಾಂತರಗೊಳಿಸುವ ಸಲುವಾಗಿ, “”ನಿಮ್ಮ ಮನೆ ಎಲ್ಲಿ ಸಾರ್‌?” ಎಂದೆ.

“”ಬರ್ತಿàರಾ.., ಹೋಗೋಣಾÌ?” ಎಂದವರು ನಾನು ಒಪ್ಪಿ ಗೋಣಾಡಿಸಿದ ತಕ್ಷಣ, ಬರುತ್ತಿದ್ದ  ಅಟೋರಿಕ್ಷಾ ಹಿಡಿದು ನನ್ನನ್ನು ತಮ್ಮ ಜೊತೆ ಕರೆದೊಯ್ದರು. ಆಟೋರಿಕ್ಷಾದಲ್ಲೂ ಅವರು ಮಾತನಾಡುತ್ತ, ನಡುವೆ ಮೊಬೈಲ್‌ನಲ್ಲಿ ಪ್ರತಿಕ್ರಿಯಿಸುತ್ತ ಒಂದು  ನಿಮಿಷವೂ ವಿರಾಮವಿರದವರಂತೆ  ವರ್ತಿಸುತ್ತಿದ್ದರು. ಇದೇಕೋ ತುಸು ಅತಿರೇಕವೆಂದು ನನಗೂ ಅನ್ನಿಸತೊಡಗಿತ್ತು. 
.
ಮೈಸೂರು ಬ್ಯಾಂಕ್‌  ಕಾಲನಿಯ ಒಂದು ಅಡ್ಡರಸ್ತೆಯಲ್ಲಿದ್ದ ಸಾಧಾರಣ ಹಳೇ ಕಾಲದ ಪುಟ್ಟ ಮನೆ. ಇವರೇ ಬೀಗ ತೆಗೆದು ನನ್ನನ್ನು ಆಹ್ವಾನಿಸಿದರು, “”ಬನ್ನಿ… ಒಳಗೆ… ಇದೇ ನನ್ನ ಅರಮನೆ” ಎಂದವರ ಮುಖಭಾವ ಒಮ್ಮೆಗೇ ಕಳೆಗುಂದಿದಂತೆ ನನಗೆ ಭಾಸವಾಯಿತು. ಅದುವರೆಗಿನ ಅವಿರತ ಮಾತಿನ ಪ್ರವಾಹಕ್ಕೆ ತಡೆಯೊಡ್ಡಿದಂತೆ ಬೀಗ ಬಿತ್ತು. 

ನಾನು ಮನೆಯೊಳಗೆ  ಸುತ್ತಲೂ ಕಣ್ಣಾಡಿಸಿದಾಗ ಅವರು ನನ್ನ ನೋಟದ ಭಾವ ಅರಿತವರಂತೆ, “”ಇಲ್ಲಿ ಬೇರೆ ಯಾರೂ ಇಲ್ಲ ರಾಮನಾಥ. ನಾನೊಬ್ನೆ ಇರೋದು. ಕೂತ್ಕೊಳ್ಳಿ” ಎಂದು ಆಸನ ತೋರಿಸಿದರು. ಅವರೂ ಕುಳಿತುಕೊಳ್ಳುತ್ತ, “”ನನ್ನ ಪತ್ನಿ  ತೀರೊRಂಡು ಮೂರು ವರ್ಷಗಳಾಗಿವೆ. ಮಗ, ಸೊಸೆ, ಮೊಮ್ಮಗ ವಿದೇಶದಲ್ಲಿದ್ದಾರೆ. ಇಲ್ಲಿ ನಾನೊಬ್ನೇ ಇರೋದು. ಅಲ್ಲಿಗೆ ಬಾ ಅಂತ ಅವೂ° ಕರೀತಾ ಇರ್ತಾನೆ. ನನಗೆ ಅಲ್ಲಿಗೆ ಹೋಗಿರಲು ಇಷ್ಟವಿಲ್ಲ. ಅವ್ನಿಗೆ ಇಲ್ಲಿ ಬಂದು ಉಳಿಯಲು ಇಷ್ಟವಿಲ್ಲ. ಅದಿಕ್ಕೇ ನಾನು ಇಲ್ಲಿ ಒಂಟಿಯಾಗಿದ್ದೇನೆ. 

ಆಗಾಗ ವೀಡಿಯೋ ಕಾಲ್‌ ಮಾಡ್ತಾನೆ. ಹಾಗಾಗಿ, ಈಗ ನನ್ನ ಸಂಗಾತಿಯೆಂದರೆ ಈ ಫೋನ್‌ ನೋಡಿ. ಮಗ, ಮೊಮ್ಮಗನನ್ನು ಆಗಾಗ ಇದರಲ್ಲಿ ಮಾತನಾಡಿಸ್ತೇನೆ” ಎಂದು ನಿರ್ವಿಕಾರ ಭಾವದಲ್ಲಿ ನುಡಿಯುತ್ತಿದ್ದವರು,  ತುಸುಕ್ಷಣ ಮಾತು ನಿಲ್ಲಿಸಿದರು. ನನಗೆ ಈಗ ನಿಧಾನವಾಗಿ ಅವರ ಅಂತರಂಗದೊಳಗೆ ಹೊಕ್ಕಂತಾಗಿತ್ತು. ಇಲ್ಲಿ ತಮ್ಮವರೆಂದು ಯಾರೂ ಇಲ್ಲದ, ಕಾರಣ ಅವರ ವಾಚಾಳಿತನಕ್ಕೆ ಈ ಏಕಾಂಗಿತನವೇ ಕಾರಣವೆಂದು ನನಗರಿವಾಯಿತು.

ಮನುಷ್ಯನದ್ದು ಅನ್ವೇಷಕ ಪೃವೃತ್ತಿ. ಮನಸ್ಸು ಸದಾ ಏನೋ ಹುಡುಕಾಟದಲ್ಲಿರುತ್ತದೆ.  ಇನ್ನು ಇಲ್ಲಿ ಒಂಟಿಯಾಗಿರುವ ಸ್ವಯಂಭು ಇಲ್ಲಿ ಒಳಗೆ ಇರುವ ಖಾಲಿತನವನ್ನು ತುಂಬಿಕೊಳ್ಳಲು ಹೊರಗಿನ ಫೇಸ್‌ಬುಕ್‌ ಜಗತ್ತಿನಲ್ಲಿ ಅರಸುತ್ತಾರೆ. ಇಲ್ಲಿ ದೊರಕದ ಮೆಚ್ಚುಗೆ, ಅನುಕಂಪ, ಪ್ರೀತಿ-ವಿಶ್ವಾಸ ಎಫ್ಬಿ ಸ್ನೇಹಿತರಲ್ಲಿ ಕಾಣುತ್ತ ತಮಗಿಲ್ಲಿ ಉಂಟಾಗಿರುವ ಕೊರತೆಯನ್ನು ನೀಗಿಸಿಕೊಳ್ಳಲು ಯತ್ನಿಸುತ್ತಾರೆ ಎಂದು ನನಗೆ ಅರ್ಥವಾಗತೊಡಗಿತ್ತು. ಸ್ವಯಂಭು, ಬಾರದ ನಗು ಮುಖದ ಮೇಲೆ ತಂದುಕೊಂಡು, “”ಇಲ್ಲಿ ನಮ್ಮ ಸ್ವಂತದವರು ಯಾರೂ ಇಲ್ಲದಿದ್ದರೇನಂತೆ? ಈ ಫೇಸ್‌ಬುಕ್‌ ಇದ್ಯಲ್ಲ. ಅದು ಸಾವಿರಾರು ಸ್ನೇಹಿತರನ್ನು ಕೊಟ್ಟಿದೆ. ಕೆಲವರಂತೂ ಮನೆಯವರಿಗಿಂತ ಹತ್ತಿರವೆನಿಸಿಬಿಟ್ಟಿದ್ದಾರೆ. 

ಸಂಬಂಧಗಳ ನಡುವಿನ ಗಾಢತೆಗೆ ರಕ್ತ ಹಂಚಿಕೊಂಡೇ ಹುಟ್ಟಬೇಕಾಗಿಲ್ಲ. ಎಷ್ಟೋ ಜನ ನನ್ನಲ್ಲಿ ತಮ್ಮ ಭಾÅತೃವನ್ನು ಕಾಣಾ¤ರೆ. ಕೆಲವರು ಗುರುವಾಗಿ ನನ್ನ ನೋಡ್ತಾರೆ. ಕೆಲವರು ತಂದೆಯಂತೆ ಗೌರವಿಸ್ತಾರೆ. ಹಾಗೇ ಅವರಲ್ಲಿ ನಾನೂ ನನ್ನ ಪ್ರೀತಿ, ಮಮತೆಯನ್ನು ಹಂಚಿಕೊಳ್ತೀನಿ. ಮುಪ್ಪಿನ ಸಮಯ ಕಳೀಬೇಕಲ್ವಾ ರಾಮನಾಥ? ಅದಿಕ್ಕೆ ಏನು ಮಾಡೋದು. 

ನಮ್ಮ ಅನುಕಂಪದ ಗೋರಿಯಲ್ಲಿ ನಾವೇ ಹೂತು ಹೋಗುವ ಬದಲು ಈ ರೀತಿ ವಿಶ್ವಬಂಧುವಾಗಿ ಬಿಟ್ಟಿದ್ದೀನಿ. ವಸುದೈವ ಕುಟುಂಬಕಮ್‌ ಅಂತಾರಲ್ಲ. ನಾವೆಲ್ಲರೂ ಒಂದೇ ಅಂದುಕೊಳ್ಳೋದು. ನನೆY ಸಮಯಾನು ಕಳಿಯುತ್ತೆ. ಕೆಲವರಿಗೆ ಸಹಾಯವಾಗುತ್ತೆ. ಯಾವುದೋ ರೀತಿಯಲ್ಲಿ ಕ್ರಿಯಾಶೀಲವಾಗಿರೋದು. ನಮಗೂ ಒಂಟಿತನ ಶಾಪವೆನಿಸುವುದಿಲ್ಲ. ಅದನ್ನು ನೀಗಿಸಲು ಇದು ನೆರವಾಗಿದೆ”  ಎಂದು ತಮ್ಮ ಮೊಬೈಲ್‌ ಎತ್ತಿ ತೋರಿಸಿದರು. ಅವರ ಇನ್ನೊಂದು ಮುಖದ ಅನಾವರಣವಾಗುತ್ತಿದ್ದಂತೆ ಅವರ ಬಗ್ಗೆ ಅನುಕಂಪ ಮೂಡತೊಡಗಿತ್ತು. ಸಂಬಂಧಗಳಿದ್ದೂ ಒಂಟಿ ದ್ವೀಪದಂತಾಗುತ್ತಿರುವ ನಾವು ಒಂದೆಡೆಯಾದರೆ, ಒಂಟಿಯಾಗಿದ್ದು ಕಾಣದ ಮುಖಗಳಲ್ಲಿ ಸಂಬಂಧಗಳನ್ನು ಹುಡುಕುತ್ತಿರುವ ಈ ಸ್ವಯಂಭುನಂಥವರು ಇಲ್ಲದವರ ನಡುವೆ ನಮ್ಮವರನ್ನು ಹುಡುಕುವ ಇಂಥವರನ್ನು  ಕಾಣುವಾಗ ನನಗೆ ಕೈಯಲ್ಲಿರುವ ಬಾಂಧವ್ಯಗಳ ಬೆಲೆಯರಿತು ಅದನ್ನು ಸರಿಯಾಗಿ ಉಳಿಸಿ, ಬೆಳೆಸಿಕೊಂಡು ಹೋಗುವುದು ಲೇಸೆನಿಸಿತು. ನಾನಲ್ಲಿರುವಾಗಲೇ ಸ್ವಯಂಭುರವರಿಗೆ ಮಗನಿಂದ ಫೋನ್‌ ಬಂದಿತ್ತು. ಅವನ ಮಾತುಗಳಿಗೆ ಮುಖ ದುಮ್ಮಿಸಿಕೊಂಡೇ ಆಲಿಸುತ್ತಿದ್ದಾಗ ಅವರೆದುರು ನಿಂತುಕೊಳ್ಳಲು ಇರುಸುಮುರುಸು ಎನಿಸಿ ನಾನು ಅಲ್ಲಿಂದ ಹೊರ ಬಂದು ಪತ್ನಿಗೆ ಕರೆ ಮಾಡಿದೆ.

“”ನಾವು ಇವತ್ತು ಮಂಗಳೂರಿಗೆ ಹೋಗೋದು ಬೇಡ. ಹೇಗೂ ಬಂದಿದ್ದೀವಲ್ಲಾ, ಬೆಂಗಳೂರು ಸುತ್ತಾಡಿ ಹೋಗೋಣ. ಮಗನಿಗೂ ತಿಳಿಸು” ಎಂದೆ. ನನ್ನ ಹೊಸ ಪರಿಗೆ ಅವಳು ಅಚ್ಚರಿ ಪ್ರಕಟಿಸುತ್ತ, “”ತಿರುಗಾಟ ಬೇಡ ಖರ್ಚು ಅಂದ್ರಿ. ಈಗ ಹೀಗಂತಿದ್ದೀರಾ!” ಎಂದಳು.””ಹಣದ ತಾಪತ್ರಯ ಇದ್ದದ್ದೇ ಬಿಡು. ಹೇಗೂ ಬಂದಿದ್ದೀವಲ್ಲಾ! ಊರು ತಿರುಗಿ ಹೋದರಾಯಿತು” ಎಂದಾಗ ಬದಲಾದ ನನ್ನ ಮನೋಭಾವಕ್ಕೆ ಅವಳಿಂದ ಪ್ರಶಂಸೆ ಉಕ್ಕಿ ಹರಿಯಿತು. 

ಅಲ್ಲಿಗೆ ಬಂದ ಸ್ವಯಂಭು ಪೋನ್‌ ಸಂಪರ್ಕ ಕಡಿದು, “”ಮಗನನ್ನು ಎಫ್ಬಿ ಯಲ್ಲಿ ಬ್ಲಾಕ್‌ ಮಾಡಿಬಿಡಬೇಕು ಅನ್ಸುತ್ತೆ ಕೆಲವೊಮ್ಮೆ. ಎಲ್ಲದಕ್ಕೂ ಆಕ್ಷೇಪ ಅವನದ್ದು. ನನ್ನ ಎಫ್ಬಿಯಲ್ಲಿ ಯಾವುದೋ ಪರಿಚಿತ ಸ್ನೇಹಿತರ ಮಗಳ ಜಾತಕ ಹಾಕಿದ್ಧೆ. ಆಸಕ್ತರು ವಧು ಅನ್ವೇಷಣೆಯಲ್ಲಿರುವವರು ಸರಿ ಹೋಗುವುದಾದರೆ ಸಂಬಂಧ ನೋಡಿಕೊಳ್ಳಲಿ ಅಂತ. ನಾನು ಬರೀ ಸೇತುವೆ ಥರ. ಮುಂದೆ ನೀವೇ ಜವಾಬ್ದಾರರು ಅಂತ ಎಚ್ಚರಿಕೆ ಬೇರೆ ಕೊಟ್ಟಿದ್ದೇನೆ. ನನ್ನ ಮಗ ಅದನ್ನು ನೋಡಿ, ನಿಮಗೇಕೆ ಬೇಕು ಇಲ್ಲದ ಉಸಾಬರಿ ಅಂತ ಬೈದುಬಿಟ್ಟ. ಯಾರಿಗಾದರೂ ಸಹಾಯವಾಗುವುದಾದರೆ ತಪ್ಪೇನು?” 

ಸ್ವಯಂಭುರವರ ಮನಸ್ಥಿತಿ ಅರಿತ ನಾನು ಏನೂ ಪ್ರತಿಕ್ರಿಯಿಸಲು ಹೋಗದೇ ಎದ್ದು ನಿಂತೆ. “”ನಾನಿನ್ನು ಹೊರಡ್ತೀನಿ. ನಿಮ್ಮನ್ನು ಭೇಟಿಯಾಗಿದ್ದು ಸಂತೋಷ” ಎಂದು ಕೈಮುಗಿದೆ. 

“”ಬನ್ನಿ, ನಿಮ್ಮನ್ನು ಬಸ್ಟಾಪ್‌ನವರೆಗೂ ಬಿಡ್ತೀನಿ” ಎಂದು ಮತ್ತೆ ಮನೆಗೆ ಬೀಗ ಹಾಕಿ ಬಸ್‌ಸ್ಟಾಪ್‌ ಸಿಗುವ ತನಕ ನನ್ನೊಂದಿಗೆ ಹೊರಟರು. ಅವರ ಭಾವಕೋಶಕ್ಕೆ ಕೊಂಡಿಯಾಗಿದ್ದ ಅವರ ಮೊಬೈಲ್‌ ಸದ್ದು ಮಾಡುತ್ತಲೇ ಇತ್ತು. ಆನ್‌ಲೈನ್‌ನಲ್ಲಿ ಪ್ರತಿಕ್ರಿಯಿಸುತ್ತಲೇ ಹೆಜ್ಜೆ ಹಾಕುತ್ತಿದ್ದರು. 

– ವಿವೇಕಾನಂದ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next