Advertisement

ಚಿನ್ನದ ನಾಡಿನೊಂದಿಗಿತ್ತುಅನಂತ ಸಂಬಂಧ

02:14 PM Nov 13, 2018 | |

ರಾಯಚೂರು: ಅನಂತಕುಮಾರ್‌ ಅವರಿಗೂ ಚಿನ್ನದ ನಾಡು ರಾಯಚೂರಿಗೂ ಅವಿನಾಭಾವ ನಂಟಿತ್ತು. ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ ಸಂಘಟನೆಗಾಗಿ ಇಲ್ಲಿಗೆ ಬಂದಾಗ ಬಾಡಿಗೆ ಸೈಕಲ್‌ ಪಡೆದು ಸುತ್ತಾಡುತ್ತಿದ್ದರು.

Advertisement

ಅದು 80ರ ದಶಕ. ಆಗ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದ ಅನಂತಕುಮಾರ್‌ ಅವರು ಹಲವು ಬಾರಿ ಸಂಘಟನೆ ಬಲಗೊಳಿಸಲು ರಾಯಚೂರಿಗೂ ಬಂದಿದ್ದರು. ಆದರೆ, ಆ ಕಾಲದಲ್ಲಿ ಯಾವುದೇ ಬೈಕ್‌, ಕಾರುಗಳನ್ನು ಬಳಸುವಷ್ಟು ಶಕ್ತರಿರಲಿಲ್ಲ. ಹೀಗಾಗಿ ಸ್ಥಳೀಯ ಮುಖಂಡರೇ ಬಾಡಿಗೆ ಸೈಕಲ್‌ ಕೊಡಿಸುತ್ತಿದ್ದರು. ಅದರ ಮೇಲೆಯೇ ಅವರು ಎಲ್ಲೆಡೆ ಸುತ್ತಾಡಿ ಸಂಘಟನೆ ಮಾಡುತ್ತಿದ್ದರು. ಜಿಲ್ಲೆಯಲ್ಲಿ ಎಬಿವಿಪಿ ಬಲಗೊಳ್ಳಲು ಶ್ರಮಿಸಿದ್ದರು.

ಎಬಿವಿಪಿ ಅಖೀಲ ಭಾರತೀಯ ಅಧ್ಯಕ್ಷರಾದ ಬಳಿಕವೂ ಅವರು ರಾಯಚೂರಿಗೆ ಬಂದಿದ್ದರು. ಆ ಬಾಂಧವ್ಯ ಅವರು ಬಿಜೆಪಿ
ಸೇರಿದ ಬಳಿಕವೂ ಮುಂದುವರಿಯಿತು. ಜಿಲ್ಲೆಗೆ ಸಾಕಷ್ಟು ಬಾರಿ ಬರುತ್ತಿದ್ದರು. ಜಿಲ್ಲೆಯ ಸಮಸ್ಯೆಗಳನ್ನು ಹೊತ್ತೂಯ್ದ ಮುಖಂಡರಿಗೆ ಸದಾ ಸ್ಪಂದಿಸುತ್ತಿದ್ದರು.

ರಾಜಧಾನಿ ಎಕ್ಸಪ್ರಸ್‌ ರೈಲು ಜಿಲ್ಲೆಯ ಮೂಲಕ ಹಾದು ಹೋಗುವುದನ್ನು ರದ್ದುಗೊಳಿಸಲಾಗಿತ್ತು. ಗುಂತಕಲ್‌ನಿಂದ
ನೇರ ಹೈದರಾಬಾದ್‌ ಮಾರ್ಗವಾಗಿ ಕಳುಹಿಸಲಾಗುತ್ತಿತ್ತು. ಇದರಿಂದ ಜಿಲ್ಲೆಯ ಜನರಿಗೆ ತೊಂದರೆಯಾಗಿತ್ತು. ಹೀಗಾಗಿ
ಮೊದಲಿದ್ದ ಮಾರ್ಗವಾಗಿಯೇ ರೈಲು ಓಡಿಸಬೇಕೆಂದು ಜಿಲ್ಲೆಯ ನಿಯೋಗ ರೈಲ್ವೆ ಸಚಿವರಿಗೆ ಮನವಿ ಮಾಡಿತ್ತು. ಅದಕ್ಕೆ ದನಿಗೂಡಿಸಿದ್ದ ಅನಂತಕುಮಾರ್‌ ರೈಲ್ವೆ ಸಚಿವರಾಗಿದ್ದ ನಿತೀಶ್‌ಕುಮಾರ್‌ ಅವರಿಗೆ ಮನವರಿಕೆ ಮಾಡಿ ರೈಲು ಪುನಃ ರಾಯಚೂರು ಮಾರ್ಗವಾಗಿ ತೆರಳುವಂತೆ ಮಾಡಿದ್ದರು. ಜಿಲ್ಲೆಗೆ ಐಐಐಟಿ ಬರುವಂತೆ ಮಾಡುವಲ್ಲೂ ಸಾಕಷ್ಟು ಒತ್ತಡ ಹೇರಿದ್ದರು. ಇನ್ನು ದೇವದುರ್ಗ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲೂ ಶಿವನಗೌಡ ನಾಯಕ ಪರ ಪ್ರಚಾರಕ್ಕೆ ಆಗಮಿಸಿದ್ದರು.  ಅವರು ಭೌತಿಕವಾಗಿ ಅಗಲಿದರೂ ಅವರ ಹೆಜ್ಜೆಗಳು ಇಲ್ಲಿವೆ ಎನ್ನುತ್ತಾರೆ ಬಿಜೆಪಿ ಮುಖಂಡ ಎನ್‌.ಶಂಕ್ರಪ್ಪ.

Advertisement

Udayavani is now on Telegram. Click here to join our channel and stay updated with the latest news.

Next