Advertisement

Relationship: ಸಮಯದೊಂದಿಗೆ ಬದಲಾಗುವ ಸಂಬಂಧ ಅವಶ್ಯವೇ?

12:39 PM Dec 01, 2023 | Team Udayavani |

ಸಂತೋಷ ಅಥವಾ ದುಃಖವಿರಲಿ ಜತೆಗಿರುವ ಹಾಗೂ ಜತೆಗೂಡುವ ಬಂಧನವೇ ಗೆಳೆತನ. ಗೆಳೆತನ ಎಷ್ಟು ವಿಸ್ಮಯವೆಂದರೆ ಸಮಯ ಬದಲಾದಂತೆ ಗೆಳೆಯ ಗೆಳತಿಯರು ಬದಲಾಗುತ್ತಾರೆ. ಹಲವರಲ್ಲಿ ಕೆಲವರಷ್ಟೇ ಉಳಿಯುತ್ತಾರೆ. ಉಳಿದವರು ನೆನಪುಗಳನ್ನು ಬಿಟ್ಟು ಹೊರಟುಬಿಡುತ್ತಾರೆ.

Advertisement

ಗೆಳೆತನದ ವಿಶೇಷ ಎಂದರೆ ಇದಕ್ಕೊಂದು ಚೌಕಟ್ಟಿಲ್ಲ. ಕೆಲವರು ಜೀವಕ್ಕೆ ಜೀವ ಕೊಡಲು ತಯಾರಿರುತ್ತಾರೆ. ಬದುಕಿನ ಕೊನೆಯವರೆಗೂ ಎಲ್ಲ ಸಂದರ್ಭಗಳಲ್ಲೂ ಜತೆಗೆ ನಿಲ್ಲುತ್ತಾರೆ. ಇನ್ನೂ ಕೆಲವರು, ಗೆಳೆಯರು ಅನಿಸಿಕೊಂಡವರು ಸ್ವಾರ್ಥಿಗಳಾಗಿಬಿಡುತ್ತಾರೆ. ತಮ್ಮ ಲಾಭಕ್ಕಾಗಿ ಜೀವ ಹಿಂಡಲೂ, ಜೀವ ತೆಗೆಯಲೂ ಹೇಸುವುದಿಲ್ಲ. ಹೀಗಾಗಿಯೇ ಕೆಲವರಿಗೆ ಗೆಳೆತನವೊಂದು ಎಲ್ಲ ಸಂಬಂಧಗಳಿಗೂ ಮೀರಿದ ಪವಿತ್ರ ಬಂಧ, ಇನ್ನೂ ಕೆಲವರಿಗೆ ಅರ್ಥವಿಲ್ಲದ ಸಂಬಂಧ.

ಕೆಲವೊಮ್ಮೆ ಗೆಳೆತನವನ್ನು ಗಾಢವಾಗಿ ನಂಬುತ್ತೇವೆ, ಒಂದರ್ಥದಲ್ಲಿ ಅವಲಂಭಿಸಿಬಿಡುತ್ತೇವೆ. ಗೆಳೆತನದÇÉೇ ನೋವು, ನಲಿವು, ಒಲವು ಎಲ್ಲವನ್ನೂ ಕಾಣುತ್ತಾರೆ. ಸ್ನೇಹದಿಂದಲೇ ಜೀವನ ಪಾಠ ಕಲಿಯುತ್ತಾರೆ. ಆದರೆ ಜೀವದ ಗೆಳೆಯರು ದೂರವಾದಾಗ, ಅವರೇ ದ್ರೋಹ ಮಾಡಿದಾಗ ತಡೆದುಕೊಳ್ಳುವುದು ಮಾತ್ರ ತುಂಬಾ ಕಷ್ಟ. ಆದರೆ ಸಂಬಂಧಗಳು ಕಾಲಕ್ಕೆ ತಕ್ಕಂತೆ ಬದಲಾಗುವ ಈ ಆಧುನಿಕ ಕಾಲದಲ್ಲಿ ಇದೂ ಒಂದು ಜೀವನಾನುಭವವೇ! ಅಂದರೆ ಗೆಳೆತನವೆಂಬ ಪವಿತ್ರ ಸಂಬಂಧಕ್ಕೆ ಬೆಲೆಯಿಲ್ಲವೇ, ಕಾಲದೊಂದಿಗೆ ವ್ಯಕ್ತಿಗಳೂ ಬದಲಾಗುತ್ತಾರಾ ಎಂದೆನಿಸುತ್ತದೆ.

ಯಾವುದೇ ವ್ಯಕ್ತಿ ತನಗೆ ನೋವುಂಟಾದಾಗ ಕುಟುಂಬದೊಂದಿಗೆ ಹೇಳದೇ ಇರಬಹುದು ಆದರೆ ಸ್ನೇಹಿತ/ಸ್ನೇಹಿತೆಯೊಂದಿಗೆ ಹೇಳುತ್ತಾನೆ. ಆದರೆ ಕೆಲವು ಸಂಬಂಧಗಳು  ಮೋಜಿಗೆ ಮಾತ್ರ ಸೀಮಿತವಾಗಿರುತ್ತವೆ. ಅಲ್ಲಿ ಸಂಬಂಧ ಕೇವಲ ಭ್ರಮೆಯಾಗಿರುತ್ತದೆ. ಕೆಲವರು ಸ್ನೇಹಕ್ಕಾಗಿ ತಮ್ಮ ಸಂತೋಷವನ್ನು ಬಲಿಕೊಟ್ಟರೆ, ಇನ್ನೂ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಗೆಳೆತನಕ್ಕೆ ಎಳ್ಳು-ನೀರು ಬಿಡುತ್ತಾರೆ. ಗೆಳೆತನದಲ್ಲಿ ಪಾರದರ್ಶಕತೆ, ತ್ಯಾಗ ಮನೋಭಾವ ಇಲ್ಲದಿದ್ದರೆ ಅದಕ್ಕೆ ಬೆಲೆಯಿಲ್ಲ.

ನಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವಲ್ಲಿ ಗೆಳೆಯ / ಗೆಳತಿಯರ ಪಾತ್ರ ಅತಿ ಪ್ರಮುಖವಾಗಿದ್ದರೂ, ಜೀವನ ದೊಡ್ಡದು. ನಮ್ಮನ್ನು ಅವಲಂಭಿಸಿರುವ, ಪ್ರೀತಿಸುವ ಇನ್ನೂ ಅನೇಕ ಜೀವಗಳಿವೆ ಎಂದು ಮರೆಯಬಾರದು. ಸಮಯದೊಂದಿಗೆ ಬದಲಾಗುವ ಗೆಳೆಯರನ್ನು ಬಿಟ್ಟು ಮುಂದೆ ಸಾಗುವುದು ಉತ್ತಮ.

Advertisement

-ನಿವೇದಿತಾ

ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next