Advertisement

ಹತ್ಯೆಗೂ ಮೊದಲು ಗುಂಡು-ತುಂಡು ಪಾರ್ಟಿ ಮಾಡಿದ್ದರು ರೇಖಾ ಕದಿರೇಶ್ ಹಂತಕರು!

09:58 AM Jul 01, 2021 | Team Udayavani |

ಬೆಂಗಳೂರು: ಮಾಜಿ ಕಾರ್ಪೊರೇಟರ್‌ ರೇಖಾ ಕದಿರೇಶ್‌ ಕೊಲೆ ಪ್ರಕರಣದ ಆರೋಪಿಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನುಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

Advertisement

ಡಿಸೋಜಾ, ರಾಜೇಶ್‌ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳ ಪೈಕಿ ಡಿಸೋಜಾ, ಕೊಲೆಗೈದ ಪೀಟರ್‌, ಸೂರ್ಯನನ್ನು ತನ್ನ ಆಟೋದಲ್ಲಿ ಕರೆದೊಯ್ದು, ನಗರದ ವಿವಿಧೆಡೆ ಸುತ್ತಾಡಿಸಿ ಕೊನೆಗೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಬಜಾಜ್‌ ಮೈದಾನದಲ್ಲಿ ಬಿಟ್ಟು ಹೋಗಿದ್ದ. ಇನ್ನು ಕೃತ್ಯ ಎಸಗಿದ ಬಳಿಕ ಪೀಟರ್‌, ರಾಜೇಶ್‌ಗೆ ಕರೆ ಮಾಡಿ ಸಂಪರ್ಕಿಸಿ ನೆರವು ಕೋರಿದ್ದ. ಹೀಗಾಗಿ ಆತಕೂಡ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ಆಯ್ತು…ಈಗ ಎಲ್ ಪಿಜಿ ಸಿಲಿಂಡರ್ ಬೆಲೆ 25.50 ರೂಪಾಯಿ ಹೆಚ್ಚಳ!

ಹತ್ಯೆಗೂ ಮೊದಲು ಸಭೆ, ಪಾರ್ಟಿ: ಹತ್ಯೆಗೂ ಮೊದಲು ಮಾಲಾ ತನ್ನ ಮನೆಯಲ್ಲಿ ಪೀಟರ್‌, ಸೂರ್ಯ ಹಾಗೂ ಇತರೆ ಆರೋಪಿಗಳನ್ನು ಕರೆಸಿಕೊಂಡು ಸಭೆ ನಡೆಸಿದ್ದಳು. ಹಣದ ಬಗ್ಗೆ ಚಿಂತೆ ಬೇಡ, ಸಾಲ ಮಾಡಿಯಾದರೂ ಹಣ ಕೊಡುತ್ತೇನೆ. ಕೆಲಸ ಮುಗಿಸುವಂತೆ ಸೂಚಿಸಿದ್ದಳು.

ಅನಂತರ ಆಕೆಯ ಪುತ್ರ ಅರುಳ್‌, ಎಲ್ಲ ಆರೋಪಿಗಳನ್ನು ಜತೆ ಮೂರು ಬಾರಿ ಗುಂಡು-ತುಂಡು ಪಾರ್ಟಿ ಮಾಡಿ, ಯಾರು? ಯಾವ ಕೆಲಸ ಮಾಡಬೇಕು. ಯಾರು ಕೊಲೆಗೈಯಬೇಕು? ಅಲ್ಲಿದ್ದ ಜನರನ್ನು ಯಾರು ಹೆದರಿಸಬೇಕು? ಹೀಗೆ ಪ್ರತಿಯೊಂದು ಕೆಲಸವನ್ನು ಅರುಳ್‌ ಹಂಚಿಕೆ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next