Advertisement
ತಾಲೂಕಿನ ಯಮಗುಂಬದಲ್ಲಿ ಯೋಜನೆ ವತಿಯಿಂದ ಪುನಶ್ಚೇತನಗೊಳಿಸಿರುವ ಹಳೆಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿ, ತುಂಬಿದ ಕೆರೆಗೆ ಬಾಗಿನ ಅರ್ಪಿಸಿ, ನಾಮಪಲಕ ಅನಾವರಣಗೊಳಿಸಿದ ನಂತರ ಮಾತನಾಡಿದರು.
Related Articles
Advertisement
97 ಸಾವಿರ ವಿದ್ಯಾರ್ಥಿಗಳಿಗೆ ವೇತನ:
ವಿದ್ಯಾನಿಧಿ ಯೋಜನೆಯಡಿ ರಾಜ್ಯಾದ್ಯಂತ 97 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, 18 ಸಾವಿರ ಅನಾಥರಿಗೆ ತಲಾ ಸಾವಿರ ರೂ. ಮಾಶಾಸನ, 500 ಕ್ಕೂ ಹೆಚ್ಚು ಮಂದಿ ನಿರ್ಗತಿಕರಿಗೆ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣ, ಸಮುದಾಯ ಅಭಿವೃದ್ದಿ ಕಾರ್ಯಕ್ರಮದಡಿ ಡೇರಿ ಕಟ್ಟಡ, ದೇವಾಲಯ, ಸಮುದಾಯ ಭವನ ನಿರ್ಮಾಣಕ್ಕೆ ನೆರವು ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಕೊತ್ತೇಗಾಲ ಗ್ರಾ.ಪಂ. ಕಾರ್ಯದರ್ಶಿ ಆನಂದ್ ಪುನಶ್ಚೇತನಗೊಳಿಸಿರುವ ಈ ಕೆರೆಯ ಸುತ್ತ ವಾಕಿಂಗ್ ಪಾಥ್ ನಿರ್ಮಿಸಲಾಗುವುದೆಂದರು. ನಿವೃತ್ತ ಶಿಕ್ಷಕ ಎಸ್.ಎಲ್. ಮಹದೇವಪ್ಪ ಯೋಜನೆ ವತಿಯಿಂದ ಗ್ರಾಮದ ಕೊಳವನ್ನು ಪುನಶ್ಚೇತನಗೊಳಿಸುವಂತೆ ಮನವಿ ಮಾಡಿದರು.
ಕೆರೆ ಸಮಿತಿ ಅಧ್ಯಕ್ಷ ಬಸವರಾಜಪ್ಪ ಕೆರೆ ಅಭಿವೃದ್ದಿಯಿಂದ ಬರಗಾಲ ಬಂದರೂ ನೀರಿಗೆ ತೊಂದರೆ ಇಲ್ಲವೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಮುರಳೀಧರ್, ನಿರ್ದೇಶಕ ಶಿವಾನಂದ ಆಚಾರ್ಯ, ಕೆರೆ ಇಂಜಿನಿಯರ್ ಪುಷ್ಪರಾಜ್, ತಾಲೂಕು ಯೋಜನಾಧಿಕಾರಿ ನಾರಾಯಣ ಶೆಟ್ಟಿ, ಗ್ರಾ.ಪಂ .ಸದಸ್ಯರಾದ ಸುಂದರಾಚಾರ್ಯ, ಮಹದೇವ ಶೆಟ್ಟಿ, ಯಜಮಾನ್ ಚಂದ್ರಶೆಟ್ಟಿ, ಕೃಷಿ ಮೇಲ್ವಿಚಾರಕ ಅಣ್ಣಪ್ಪ, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ರೂಪಾ, ಸೇವಾ ಪ್ರತಿನಿಧಿ ಮಂಜುಳ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.