ರಾಮನಗರ: ಲಾಕ್‌ಡೌನ್‌ನಿಂದಾಗಿ ರೇಷ್ಮೆ ನೂಲು ಮಾರಾಟವಾಗದೆ ತಾವು ಆರ್ಥಿಕ ಸಂಕಷ್ಟದಲ್ಲಿದ್ದು, ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ರೀಲರ್ ಗಳು ಶನಿವಾರ ರೇಷ್ಮೆ ಗೂಡು ಹರಾಜಿ ನಲ್ಲಿ ಭಾಗಿಯಾಗದೆ ಪ್ರತಿಭಟನೆ ನಡೆಸಿ ದರೆ, ಮಾರುಕಟ್ಟೆಗೆ ತಂದ ಗೂಡನ್ನು ಸರ್ಕಾರವೇ ಖರೀದಿಸಲಿ ಇಲ್ಲವೆ ಹರಾಜು ಮಾಡಿ ಎಂದು ಒತ್ತಾಯಿಸಿ ರೈತರು ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆ ಯಲ್ಲಿ ಗೂಡು ಹರಾಜಿಗೆ ತಾವು ಬರೋಲ್ಲ ಎಂದು ರೀಲರ್‌ಗಳು ಒಂದೆರೆಡು ದಿನಗಳ ಹಿಂದೆಯೇ ಇಲಾಖೆಯ ಗಮನವನ್ನು ಸೆಳೆದಿದ್ದರು. ಆದರೆ ಈ ಬಗ್ಗೆ ಅನೇಕ ರೈತರಿಗೆ ಮಾಹಿತಿ ಇರಲಿಲ್ಲ. ಎಂದಿನಂತೆ ಶನಿವಾರ ಬೆಳಿಗ್ಗೆ ಗೂಡು ಹೊತ್ತು ಜಿಲ್ಲೆಯ ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ರೇಷ್ಮೆ ಗೂಡು ಮಾರುಕಟ್ಟೆಗೆ ಬಂದರು.
ಆದರೆ ಪೊಲೀಸರು ಗೂಡು ತಂದ ರೈತರನ್ನು ಮಾರುಕಟ್ಟೆಗೆ ಹೋಗದಂತೆ ತಡೆದರು. ರೀಲರ್‌ಗಳು ಭಾಗವಹಿಸದಿರುವುದ ರಿಂದ ಗೂಡು ಹರಾಜಾಗದೆ ಗೊಂದಲಕ್ಕೆ ಕಾರಣವಾಗುತ್ತದೆ ಎಂಬುದು ಪೊಲೀ ಸರ ವಾದ ಹೀಗಾಗಿ ರೈತರನ್ನ ಅವರು ತಡೆದರು.
ರಸ್ತೆ ತಡೆ ಪ್ರತಿಭಟನೆ: ಈ ಮಧ್ಯೆ ರಾಮನಗರ ರೇಷ್ಮೆ ಗೂಡು ಮಾರು ಕಟ್ಟೆಯಲ್ಲಿ ಅದಾಗಲೇ ನೂರಾರು ರೈತರು ತಮ್ಮ ಗೂಡು ತಂದಿದ್ದರು. ಹರಾಜು ಆರಂಭವಾಗದಿದ್ದರಿಂದ ಮಾರು ಕಟ್ಟೆಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮನವೊಲಿಸುವಲ್ಲಿ ವಿಫಲರಾದರು,
ರೇಷ್ಮೆ ಇಲಾಖೆಯ ಆಯುಕ್ತರು, ಡೀಸಿ ಇತ್ಯಾದಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆಯಲ್ಲಿ ಗೂಡು ಚೆಲ್ಲಿ, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.
ತದ ನಂತರ ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್, ಜಿಲ್ಲಾಧಿಕಾರಿ ಎಂ. ಎಸ್.ಅರ್ಚನಾ, ಎಸ್ಪಿ ಅನೂಪ್ ಶೆಟ್ಟಿ, ರೇಷ್ಮೆ ಇಲಾಖೆಯ ಜೆಡಿ ಕುಮಾರ್ ಮುಂತಾದವರು ಆಗಮಿಸಿ ರೀಲರ್‌ಗಳ ಪ್ರಮುಖ ಮೂರು ಬೇಡಿಕೆ ಈಡೇರಿ ಸಿದ್ದು, ಭಾನುವಾರದಿಂದ ಹರಾಜಿನಲ್ಲಿ ಭಾಗವಹಿಸುತ್ತಾರೆ ಎಂದು ನೀಡಿದ ಭರವಸೆಯನ್ನು ಆಧರಿಸಿ ರೈತರು ಪ್ರತಿಭಟನೆಯನ್ನು ವಾಪಸ್ಸು ಪಡೆದರು.