Advertisement
ತಾಲೂಕಿನ ಭೀಮನಹಳ್ಳಿ ಸಮೀಪದ ನೂತನವಾಗಿ ನಿರ್ಮಾಣಗೊಂಡಿದ್ದ ಮಾಸ್ತಿಗುಡಿ ಗಿರಿಜನ ಪುನರ್ವಸತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಹಕಾರದಲ್ಲಿ ರಾಜ್ಯ ಸರ್ಕಾರ ತಲಾ 15 ಲಕ್ಷ ರೂ ವೆಚ್ಚದ ಪ್ಯಾಕೇಜ್‌ನಲ್ಲಿ ಪುನರ್ವಸತಿ ಕಲ್ಪಿಸಿದ್ದು, ಮಾಸ್ತಿಗುಡಿ ಪುನರ್ವಸತಿ ಕೇಂದ್ರದಲ್ಲಿ ಸ್ವಇಚ್ಛೆಯಿಂದ ಕಾಡಿನಿಂದ ಹೊರಬಂದ 210 ಕುಟುಂಬಗಳು ವಾಸವಾಗಿದ್ದು, ನಾವು ಹೊರ ಬಂದ ಮೇಲೆ ಚೆನ್ನಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ, ಇವರುಗಳಂತೆ ಇನ್ನು ಬಹಳಷ್ಟು ಗಿರಿಜನರು ಕಾಡಿನಿಂದ ಹೊರಬರಬೇಕು ಎಂದು ಅಶಯ ವ್ಯಕ್ತಪಡಿಸಿದರು.
Related Articles
Advertisement
ಇದೆ ವೇಳೆ ನನ್ನ ಚಾಮರಾಜ ಲೋಕಸಭಾ ಕ್ಷೇತ್ರದಲ್ಲಿಮೂರ್‍ನಾಲ್ಕು ಹುಲಿ ಸಂರಕ್ಷಿತಾ ಅಭ¿å ಅರಣ್ಯಗಳನ್ನು ಇದ್ದು ಶೇ, 40 ರಷ್ಟು ಕಾಡಿನಿಂದ ತವಾಗಿದೆ, ಈ ಭಾಗದಲ್ಲಿ ಅನೆ ಹಾವಳಿ ಹೆಚ್ಚಾಗಿದ್ದು, ಹಾವಳಿ ತಡೆಗೆ ರೈಲ್ವೆ ಕಂಬಿ ಬೇಲಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಕೋಡಬೇಕು, ಪ್ರಾಣಿಗಳಿಂದ ಪ್ರಾಣ ಹಾನಿಯಾದಾಗ ಇರುವ 5 ಲಕ್ಷ ರೂಗಳನ್ನು 10 ಲಕ್ಷಕ್ಕೆ ಹೆಚ್ಚಿಸಬೇಕು, ಕಾಡು ಪ್ರಾಣಿಗಳಿಂದ ಬೆಳೆ ನಾಶಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಅನಿಲ್‌ಚಿಕ್ಕಮಾದು, ಜಿಪಂ ಅಧ್ಯಕ್ಷೆ ಪರಿಮಳಶ್ಯಾಂ, ಸದಸ್ಯ ವೆಂಕಟಸ್ವಾಮಿ, ತಾಪಂ ಸದಸ್ಯರಾದ ಸುಂದರನಾಯ್ಕ, ಸರೋಜಿನಿ ಬಲರಾಮ್, ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಭೀಮನಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯ ಶಂಕರ್, ಮೈಮುಲ್ ನಿರ್ದೇಶಕ ಹಿರೇಗೌಡ, ಕಾಂಗ್ರೆಸ್ ಮುಖಂಡರಾದ ಚಂದ್ರೇಗೌಡ, ಬಿ.ವಿ.ಬಸವರಾಜು, ಭೀಮನಹಳ್ಳಿ ಮಹದೇವ್,
ಗಿರಿಜನ ಮುಖಂಡರಾದ ಶೆ„ಲೇಂದ್ರ, ವಿಜಯಕುಮಾರ್, ಪುಟ್ಟಬಸವಯ್ಯ, ಕಾಳಕಲ್ಕರ್, ಅರಣ್ಯ ಪಡೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಪುನಾಟಿ ಶ್ರೀಧರ್, ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಯರಾಂ, ನಾಗರಹೊಳೆ ಸಿ.ಎಫ್ ನಾರಾಯಣಸ್ವಾಮಿ, ವಾನಪಾಲಕಿ ಕೃತಿಕಾ ಸೇರಿದಂತೆ ಇನ್ನಿತರರು ಇದ್ದರು.