Advertisement

ಜಿಲ್ಲೆಯಲ್ಲಿ ಕೋವಿಡ್‌ ನಾಲ್ಕನೇ ಅಲೆ ತಡೆಗೆ ಸನ್ನದ್ಧ

11:06 AM Apr 28, 2022 | Team Udayavani |

ಉಡುಪಿ: ಉಡುಪಿ ಜಿಲ್ಲಾದ್ಯಂತ ಕೋವಿಡ್‌ ನಾಲ್ಕನೇ ಅಲೆಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

Advertisement

ಕೋವಿಡ್‌ 1, 2, 3ನೇ ಅಲೆಯ ಸಂದರ್ಭದಲ್ಲಿ ಉಂಟಾದ ಗೊಂದಲ, ಸಮಸ್ಯೆ ಮರುಕಳಿಸದ ನಿಟ್ಟಿನಲ್ಲಿ ಪೂರಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಉಡುಪಿ, ಹೆಬ್ರಿ, ಕುಂದಾಪುರ, ಕಾರ್ಕಳ, ನಿಟ್ಟೆಯ ಆಕ್ಸಿಜನ್‌ ಘಟಕಗಳಲ್ಲಿ ಆಕ್ಸಿಜನ್‌ ಲಿಕ್ವಿಡ್‌ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ. ಸರಕಾರ ನಿಗದಿಪಡಿಸಿದಷ್ಟು ಬೆಡ್‌ಗಳನ್ನು ಕಾದಿರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಸದಸ್ಯರೊಂದಿಗೆ ಮೊದಲ ಸುತ್ತಿನ ಮಾತುಕತೆಯೂ ನಡೆದಿದೆ.

ಲಸಿಕೆ ಪ್ರಗತಿ ವಿವರ

12ರಿಂದ 14 ವರ್ಷದ 30,228 ಮಂದಿ ಮೊದಲ ಬಾರಿಗೆ ಹಾಗೂ 6,560 ಮಂದಿ ಎರಡನೇ ಬಾರಿಗೆ ಲಸಿಕೆ ಪಡೆದುಕೊಂಡಿದ್ದಾರೆ. 15ರಿಂದ 18 ವರ್ಷದ 48,940 ಮಂದಿ ಮೊದಲ ಬಾರಿಗೆ ಹಾಗೂ 46,987 ಮಂದಿ ಎರಡನೇ ಬಾರಿಗೆ ಲಸಿಕೆ ಪಡೆದುಕೊಂಡಿದ್ದಾರೆ. 18ರಿಂದ 44 ವರ್ಷದ 5,09,415 ಮಂದಿ ಮೊದಲ ಬಾರಿಗೆ ಹಾಗೂ 4,96,083 ಮಂದಿ ಎರಡನೇ ಬಾರಿಗೆ ಲಸಿಕೆ ಪಡೆದುಕೊಂಡಿದ್ದಾರೆ.

Advertisement

13 ಮಂದಿ ಮುನ್ನೆಚ್ಚರಿಕೆ ಲಸಿಕೆ ಪಡೆದುಕೊಂಡಿದ್ದಾರೆ. 45 ವರ್ಷ ಮೇಲ್ಪಟ್ಟವರಲ್ಲಿ 4,62,994 ಮಂದಿ ಮೊದಲ ಬಾರಿಗೆ ಹಾಗೂ 4,52,084 ಮಂದಿ ಎರಡನೇ ಬಾರಿಗೆ ಲಸಿಕೆ ಪಡೆದುಕೊಂಡಿದ್ದಾರೆ. 48,057 ಮಂದಿ ಮುನ್ನೆಚ್ಚರಿಕೆ ಲಸಿಕೆ ಪಡೆದುಕೊಂಡಿದ್ದಾರೆ.

24,289 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಬಾರಿಗೆ ಹಾಗೂ 24,315 ಮಂದಿ ಎರಡನೇ ಬಾರಿಗೆ ಲಸಿಕೆ ಪಡೆದುಕೊಂಡರು. 13,971 ಮಂದಿ ಮುನ್ನೆಚ್ಚರಿಕೆ ಲಸಿಕೆ ಪಡೆದುಕೊಂಡರು. 7,315 ಮಂದಿ ಮುಂಚೂಣಿ ಕಾರ್ಯಕರ್ತರು ಮೊದಲ ಬಾರಿಗೆ ಹಾಗೂ 7,554 ಮಂದಿ ಎರಡನೇ ಬಾರಿಗೆ ಲಸಿಕೆ ಪಡೆದುಕೊಂಡರು.

3,476 ಮಂದಿ ಮುನ್ನೆಚ್ಚರಿಕೆ ಲಸಿಕೆ ಪಡೆದುಕೊಂಡರು. ಜಿಲ್ಲೆಯಲ್ಲಿ ಇದುವರೆಗೆ 10,83,181 ಮಂದಿ ಮೊದಲ ಬಾರಿಗೆ ಹಾಗೂ 10,33,583 ಮಂದಿ ಎರಡನೇ ಬಾರಿಗೆ ಲಸಿಕೆ ಪಡೆದುಕೊಂಡಿ ದ್ದಾರೆ. 65,517 ಮಂದಿ ಮುನ್ನೆಚ್ಚರಿಕೆ ಲಸಿಕೆ ಪಡೆದುಕೊಂಡಿದ್ದಾರೆ.

ಎಲ್ಲ ರೀತಿಯ ಸಿದ್ಧತೆ

ಜಿಲ್ಲಾದ್ಯಂತ ಕೋವಿಡ್‌ ಸೋಂಕು ನಿಯಂತ್ರಣದಲ್ಲಿದೆ. ಕೋವಿಡ್‌ 4ನೇ ಅಲೆ ಸಾಧ್ಯತೆ ಬಗ್ಗೆ ಎಲ್ಲ ರೀತಿಯ ಸಿದ್ಧತೆ ನಮ್ಮಲ್ಲಿದೆ. ಅಗತ್ಯಬಿದ್ದರೆ ಹಿಂದಿನಂತೆಯೇ ಕಾರ್ಯಾಚರಣೆ ಮಾಡಲಾಗುವುದು. ಕೋವಿಡ್‌ ಸಹಿತ ಆರೋಗ್ಯ ತಪಾಸಣೆಯೂ ನಿಯಮಿತ ವಾಗಿ ನಡೆಯುತ್ತಿದೆ. -ಡಾ| ನಾಗಭೂಷಣ ಉಡುಪ, ಜಿಲ್ಲಾ ಆರೋಗ್ಯಾಧಿಕಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next