Advertisement

ಟೋಲ್‌ಗೇಟ್‌ನಲ್ಲಿ ನಿತ್ಯ ನರಕ ಯಾತನೆ

10:51 AM Apr 06, 2018 | Team Udayavani |

ತಲಪಾಡಿ: ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸಿದ ಅಂಗವಾಗಿ ತಲಪಾಡಿಯಲ್ಲಿ ವಾಹನಗಳಿಂದ ಸುಂಕ ವಸೂಲಿ ಮಾಡಲು ನಿರ್ಮಿಸಿದ ಟೋಲ್‌ಗೇಟ್‌ನಿಂದಾಗಿ ವಾಹನ ಪ್ರಯಾಣಿಕರಿಗೆ ಪ್ರತಿ ದಿನ ನರಕಯಾತನೆ ಅನುಭವವಾಗುತ್ತಿದೆ. ಈ ಎರಡೂ ರಾಜ್ಯಗಳಿಗೆ ದಿನಾ ಸಾವಿರಾರು ವಾಹನಗಳು ಹಾದು ಹೋಗುವುದರಿಂದ ಟೋಲ್‌ಗೇಟ್‌ನಲ್ಲಿ ಸಾಕಷ್ಟು ಹೊತ್ತು ತಮ್ಮ ವಾಹನಗಳ ಸುಂಕ ಪಾವತಿಸಲು ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಿದೆ.

Advertisement

ಸುಂಕ ವಸೂಲಿ ಮಾಡುವ ಮಂದಿ ಸುಂಕ ಪಾವತಿಸಿದ ರಶೀದಿ ನೀಡಲು ವಿಳಂಬವಾಗುವುದರಿಂದ ಹಿಂದಿನಿಂದ ಬಂದ ವಾಹನಗಳು ಸರದಿಯಲ್ಲಿ ನಿಂತು ತಮ್ಮ ಸರದಿಯಾಗಿ ಕೆಲವು ಹೊತ್ತು ನಿಲ್ಲಬೇಕಾಗುತ್ತದೆ. ಕೆಲವೊಮ್ಮೆ ತುರ್ತು ಕಾರ್ಯಕ್ಕೆ ಹೋಗುವವರು ಇದರಿಂದಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ.

 ತುರ್ತು ಕೆಲಸಕ್ಕೆ ಹೋಗುವವರು ಈ ಟೋಲ್‌ಗೇಟ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುವುದರಿಂದ ನಿಗದಿತ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ತಮ್ಮ ಕೆಲಸಕ್ಕೆ ಅಡ್ಡಿಯಾದ ಬಗ್ಗೆಯೂ ಪ್ರಯಾಣಿಕರು ತಮ್ಮ ಅಳಲು ತೋಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next