ನವದೆಹಲಿ: 15 ವರ್ಷ ಮೇಲ್ಪಟ್ಟ ವಾಹನಗಳ ಮಾಲೀಕರು ಮುಂದಿನ ವರ್ಷದಿಂದ ವಾಹನದ ನೋಂದಣಿ ನವೀಕರಣಕ್ಕೆ ಈಗಿರುವಕ್ಕಿಂತ ಬರೋಬ್ಬರಿ 8 ಪಟ್ಟು ಹೆಚ್ಚು ಹಣ ಪಾವತಿಸಬೇಕಾಗುತ್ತದೆ.
ಈ ಕುರಿತಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
15 ವರ್ಷ ಮೇಲ್ಪಟ್ಟ ಕಾರುಗಳ ನೋಂದಣಿ ನವೀಕರಣಕ್ಕೆ ಈಗ 600 ರೂ. ಶುಲ್ಕ ಕಟ್ಟಿಸಿಕೊಳ್ಳಲಾಗುತ್ತಿದೆ. ಅದು ಮುಂದಿನ ಏ.1ರಿಂದ 5 ಸಾವಿರ ರೂ.ಗೆ ಏರಲಿದೆ. ಬೈಕ್ ನೋಂದಣಿ ನವೀಕರಣಕ್ಕಿರುವ 300ರೂ. ಶುಲ್ಕ 1,000 ರೂ.ಗೆ ಏರಲಿದೆ.
ಇದನ್ನೂ ಓದಿ:ದಾಂಡೇಲಿ:ಯುಜಿಡಿ ಕಾಮಗಾರಿಯಿಂದ ಹದಗೆಟ್ಟ ರಸ್ತೆ
ಅದೇ ರೀತಿ 15 ವರ್ಷ ಮೇಲ್ಪಟ್ಟ ಬಸ್ಸುಗಳ ಫಿಟ್‌ನೆಸ್ ನವೀಕರಣಕ್ಕೆ 1,500ರೂ ಬದಲು 12,500 ರೂ. ಶುಲ್ಕ ವಿಧಿಸಲಾಗುವುದು.
ನೋಂದಣಿ ನವೀಕರಣ ತಡಮಾಡಿದಲ್ಲಿ ಖಾಸಗಿ ವಾಹನಗಳಿಗೆ ತಿಂಗಳಿಗೆ 300 ರೂ., ಸಾರ್ವಜನಿಕ ವಾಹನಕ್ಕೆ ತಿಂಗಳಿಗೆ 500 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ. ರಾಷ್ಟ್ರೀಯ ಆಟೋಮೊಬೈಲ್ ಗುಜಿರಿ ನೀತಿಯ ಭಾಗವಾಗಿ ಇದನ್ನು ಜಾರಿ ಮಾಡಲಾಗುತ್ತಿದೆ.