Advertisement

ಪದವೀಧರ ಶಿಕ್ಷಕರ ನೇಮಕಾತಿ ದಾಖಲೆ ಪರಿಶೀಲನೆ

06:55 AM Sep 27, 2018 | |

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳ ಪದವೀಧರ ಶಿಕ್ಷಕರ ನೇಮಕ ಸಂಬಂಧ ಹೊರಡಿಸಿದ್ದ 1:3ರ ಅನುಪಾ
ತದ ತಾತ್ಕಾಲಿಕ ಪಟ್ಟಿಯ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡಿದೆ.

Advertisement

ಸರ್ಕಾರಿ ಶಾಲೆಗಳಲ್ಲಿ 6 ರಿಂದ 8ನೇ ತರಗತಿಯಲ್ಲಿ ಖಾಲಿ ಇರುವ 10 ಸಾವಿರ ಹುದ್ದೆಗೆ ಪದವೀಧರ ಶಿಕ್ಷಕರ ನೇಮಕಾತಿ
ಸಂಬಂಧ ಆ.27ರಂದು 1:3 ಅನುಪಾತದ ತಾತ್ಕಾಲಿಕ ಪರಿಶೀಲನಾ ಪಟ್ಟಿ ಪ್ರಕಟಿಸಲಾಗಿತ್ತು. ಪರಿಶೀಲನಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನಾ ಕಾರ್ಯ ಸಂಬಂಧಿತ ಜಿಲ್ಲೆಗಳ ಉಪನಿರ್ದೇಶಕರು ಪೂರ್ಣಗೊಳಿಸಿದ್ದಾರೆ.

ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನಾ ಸಮಯದಲ್ಲಿ ತಿದ್ದುಪಡಿ ಮಾಡಬೇಕಾದ ಅಂಶಗಳನ್ನು ಜಿಲ್ಲಾ ಉಪನಿರ್ದೇಶಕರು,
ಕೇಂದ್ರೀಕೃತ ದಾಖಲಾತಿ ಘಟಕಕ್ಕೆ ಸಲ್ಲಿಸಿ ತಿದ್ದುಪಡಿ ಮಾಡಿಸಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ತಿದ್ದುಪಡಿ ಮಾಡಲಾದ ದಾಖಲೆಗಳನ್ನು ಪುನ: ಪರಿಶೀಲಿಸಿದ ನಂತರ ಪೂರ್ಣ ಪಟ್ಟಿ ಸಿದ್ಧಪಡಿಸಿ 1:2 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜನರೇಟ್‌ ಮಾಡಿದನಂತರ 1:1 ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ಅತ್ಯಂತ ಸೂಕ್ಷ್ಮವಾಗಿದ್ದು, ಹಲವಾರು ಹಂತಗಳಲ್ಲಿ ಅಡ್ಡ ಪರಿಶೀಲನೆಗೆ ಒಳಪಡಿಸ ಬೇಕಾಗುತ್ತದೆ. ಹೀಗಾಗಿ, ಮುಂದಿನ ವಾರದಲ್ಲಿ 1:2 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನುಪ್ರಕಟಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next