Advertisement

ಬಾಲ್ಯ ವಿವಾಹಕ್ಕೆ ಪರೋಕ್ಷ ಅವಕಾಶ? ಗೊಂದಲ ಸೃಷ್ಟಿಸಿದ ರಾಜಸ್ಥಾನ ಸರ್ಕಾರದ ಹೊಸ ವಿಧೇಯಕ

07:03 PM Sep 18, 2021 | Team Udayavani |

ಜೈಪುರ: ರಾಜಸ್ಥಾನ ಸರ್ಕಾರ ಮಂಡಿಸಿ, ವಿಧಾನಸಭೆಯ ಅಂಗೀಕಾರ ಪಡೆದಿರುವ “ರಾಜಸ್ಥಾನ ವಿವಾಹಗಳ ಕಡ್ಡಾಯ ನೋಂದಣಿ ವಿಧೇಯಕ-2021′ ಹೊಸ ಗೊಂದಲವನ್ನು ಸೃಷ್ಟಿಸಿದೆ. ಪ್ರಮುಖ ವಿಪಕ್ಷವಾದ ಬಿಜೆಪಿ, ಇದು ಬಾಲ್ಯವಿವಾಹಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಆರೋಪಿಸಿದೆ.

Advertisement

ವಿಧೇಯಕದ ಪ್ರಕಾರ, ವರನಿಗೆ 21 ವರ್ಷ ಹಾಗೂ ವಧುವಿಗೆ 18 ವರ್ಷ ತುಂಬದೇ ಇದ್ದರೂ ಅವರ ತಂದೆ-ತಾಯಿ, ವಿವಾಹ ನೋಂದಣಾಧಿಕಾರಿಯ ಬಳಿ ತಮ್ಮ ಮಕ್ಕಳ ಮದುವೆಯನ್ನು ನೋಂದಾಯಿಸಬಹುದು.

ಇದು ಬಾಲ್ಯವಿವಾಹಗಳನ್ನು ತಡೆಯಲು ಇರುವ ಕಾನೂನಿಗೆ ವಿರೋಧವಾದದ್ದು. ವಿಧಾನಸಭೆ ಸದಸ್ಯರು ವಿಧೇಯಕವನ್ನು ಪೂರ್ತಿ ಓದದೇ ಇದಕ್ಕೆ ಒಪ್ಪಿಗೆ ನೀಡಿದ್ದಾರೆ” ಎಂದು ವಿಧಾನಸಭೆ ವಿಪಕ್ಷ ನಾಯಕ ಹಾಗೂ ಬಿಜೆಪಿ ಧುರೀಣ ಗುಲಾಬ್‌ ಚಾಂದ್‌ ಕಟಾರಿಯಾ ಹೇಳಿದ್ದಾರೆ.

ಇದನ್ನೂ ಓದಿ :ಸೇನಾ ಪರೇಡ್‌ಗೆ ಸ್ವದೇಶಿ ಗೀತೆ : ಬ್ರಿಟಿಷ್‌ ಗೀತೆಗಳಿಗೆ ಕೊಕ್‌ ನೀಡಲು ಕೇಂದ್ರ ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next