Advertisement

ಆರ್ಕಿಟೆಕ್ಚರ್‌ ಕೋರ್ಸ್‌ಗೆ ನೋಂದಣಿ ಕಡ್ಡಾಯ

11:24 PM May 14, 2019 | Team Udayavani |

ಬೆಂಗಳೂರು: ಆರ್ಕಿಟೆಕ್ಚರ್‌ ಕೋರ್ಸ್‌ಗೆ ಪ್ರವೇಶ ಪಡೆಯಲು ಸಿಇಟಿ-2019ಕ್ಕೆ ನೋಂದಣಿ ಮಾಡಿಸುವುದು ಕಡ್ಡಾಯ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

Advertisement

ಆರ್ಕಿಟೆಕ್ಚರ್‌ ಕೋರ್ಸ್‌ನ ಪ್ರವೇಶಕ್ಕಾಗಿ ಕೇವಲ ನ್ಯಾಷನಲ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಇನ್‌ ಆರ್ಕಿಟೆಕ್ಚರ್‌ (ನಾಟಾ) ಪರೀಕ್ಷೆಯನ್ನು ತೆಗೆದುಕೊಂಡು ಸಿಇಟಿ ನೋಂದಣಿ ಮಾಡಿಸದೇ ಇರುವ ಅಭ್ಯರ್ಥಿಗಳು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು.

ಪರೀಕ್ಷಾ ಪ್ರಾಧಿಕಾದ ವೆಬ್‌ಸೈಟ್‌ //kea.kar.nic.in/ ನಲ್ಲಿ ನಿಗದಿತ ಲಿಂಕ್‌ ಆಯ್ಕೆ ಮಾಡಿಕೊಂಡು ಮೇ 18ರ ಸಂಜೆ 5.30ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ನೋಂದಣಿ ಶುಲ್ಕ ಪಾವತಿಸಬಹುದಾಗಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next