Advertisement

ದುಬೈನಲ್ಲಿದ್ದವರಿಗೆ ಸ್ವದೇಶಕ್ಕೆ ಬರಲು ನೋಂದಣಿಗೆ ಅವಕಾಶ

06:52 PM May 02, 2020 | Team Udayavani |

ಕೋವಿಡ್ 19 ವೈರಸ್ ನಿಂದಾಗಿ ದುಬೈನಲ್ಲಿ ಸಿಕ್ಕಿ ಹಾಕಿಕೊಂಡಿರುವವರಿಗೆ ಸ್ವದೇಶಕ್ಕೆ ಮರಳಲು ಅವಕಾಶ ಕಲ್ಪಿಸಲಾಗಿದೆ. ಅಬುದಾಭಿಯಲ್ಲಿರುವ ಭಾರತದ ರಾಯಭಾರ ಕಚೇರಿ ಈ ವ್ಯವಸ್ಥೆ ಮಾಡಿದೆ.

Advertisement

ಆನ್‌ಲೈನ್‌ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ದುಬೈನಲ್ಲಿರುವ ರಾಯಭಾರ ಕಚೇರಿ ವೆಬ್‌ಸೈಟ್‌ www.indianembassyuae.gov.in ಅಥವಾ ದೂತಾವಾಸ ಕಚೇರಿ ವೆಬ್‌ಸೈಟ್‌ www.cgidubai.gov.inಗೆ ಲಾಗ್‌ಇನ್‌ ಆಗಿ ಕೋವಿಡ್ ಸ್ಥಿತಿಯಿಂದ ಭಾರತಕ್ಕೆ ವಾಪಸಾಗಲು ಬಯಸುವರ ವಿಭಾಗದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು.

ಇದರ ಜತೆಗೆ www.cgidubai.gov.in/covid_register ಎಂಬ ಲಿಂಕ್‌ ಮೂಲಕವೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ದುಬೈನಿಂದ ಭಾರತಕ್ಕೆ ಸುಮಾರು 10 ಸಾವಿರ ಮಂದಿ ಆಗಮಿಸುವ ಸಾಧ್ಯತೆ ಇದೆ.

ವಲಸಿಗರ ಗೃಹ ಯಾನ ಬಿರುಸು
ಲಾಕ್‌ಡೌನ್‌ ಕಾರಣದಿಂದಾಗಿ ಭಾರತದ ವಿವಿಧೆಡೆ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಅಂತೂ ನಿಟ್ಟುಸಿರು ಬಿಟ್ಟಿದ್ದಾರೆ.

ಗುರುವಾರ ನಸುಕಿನಿಂದಲೇ ರಾಜಸ್ಥಾನವು 40 ಸಾವಿರ ವಲಸಿಗರ ಸಾಗಾಟ ನಡೆಸಿದೆ. ರಾಜ್ಯದಲ್ಲಿ ಸಿಲುಕಿದ್ದ 26 ಸಾವಿರ ಕಾರ್ಮಿಕರನ್ನು ಮಧ್ಯಪ್ರದೇಶದ ಗಡಿಗೆ ದಾಟಿಸಿದೆ.

Advertisement

10 ಲಕ್ಷ ಕ್ವಾರಂಟೈನ್‌: ಉ.ಪ್ರ. ಸರಕಾರ ಕೂಡ ಸಾರಿಗೆ ವ್ಯವಸ್ಥೆ ಕಲ್ಪಿಸಿ, ಹರ್ಯಾಣದಿಂದ 12 ಸಾವಿರ ಕಾರ್ಮಿಕರನ್ನು ಕರೆಸಿಕೊಳ್ಳುತ್ತಿದೆ. ಒಟ್ಟಾರೆ 10 ಲಕ್ಷ ಮಂದಿಗೆ ಕ್ವಾರಂಟೈನ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next