Advertisement

ಕೆಂಪು ಗ್ರಹಕ್ಕೆ ಹೋಗುವ ಮಿಷನ್ ಮಾರ್ಸ್ ನಲ್ಲಿ ನಿಮ್ಮ ಹೆಸರು ಸೇರಬೇಕೇ..

06:02 PM Sep 13, 2019 | Suhan S |

ನಿಮಗೆ ಮಂಗಳ ಗ್ರಹ ಹೋಗುವ ಕನಸು ಇದೇಯಾ? ಮಂಗಳ ಗ್ರಹಕ್ಕೆ ನಿಮಗೆ ಪಯಣ ಮಾಡೋಕೆ ಆಗದೇ ಇದ್ರು ಪರವಾಗಿಲ್ಲ ನಿಮ್ಮ ಹೆಸರುಗಳು ಪಯಣ ಬೆಳೆಸಬಹುದು.!

Advertisement

ಹೌದು. ಇಂಥದ್ದೊಂದು ಅವಕಾಶ ಕಲ್ಪಿಸಿರುವುದು ನಾಸಾ . 2021 ಕ್ಕೆ ಕೆಂಪು ಗ್ರಹ ತಲುಪುವ ಮಾರ್ಸ್ ರೋವರ್ 2020 ಮಿಷನ್  ಅಲ್ಲಿ ನೀವು ಕಳುಹಿಸಿದ ಹೆಸರುಗಳ  ಮೈಕ್ರೂ ಚಿಪ್ ಇರಲಿದೆ.  ಆ ಮೈಕ್ರೂ ಚಿಪ್ ನಲ್ಲಿ ನಿಮ್ಮ ಹೆಸರನ್ನು ಸಹ ನೋಂದಾಣಿ ಮಾಡಿಕೊಳ್ಳಬಹುದು ಎಂದು ನಾಸಾ ಟ್ವೀಟ್ ಮಾಡಿದೆ. ಆಯ್ಕೆಯಾದ ಹೆಸರುವುಳ್ಳ ಮೈಕ್ರೂ ಚಿಪ್ ಮಾರ್ಸ್ ರೋವರ್ ಮಿಷನ್ ನಲ್ಲಿ ಪಯಣ ಮಾಡುತ್ತವೆ. ಹೆಸರು ನೋಂದಾಣಿ ಮಾಡಿಕೊಳ್ಳಲು ನಿಮಗೆ ಕೇವಲ 20 ದಿನಗಳು ಮಾತ್ರ ಬಾಕಿಯಿದೆ. ನೋಂದಾಯಿತವಾದ ಹೆಸರುಗಳಿಗೆ ಬೋರ್ಡಿಂಗ್ ಪಾಸ್ ಗಳು ದೊರಕಲಿದೆ ಎಂದು ನಾಸಾ ತನ್ನ ಟ್ವೀಟ್ ನಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next