Advertisement

ಯುವ ಮತದಾರರ ನೋಂದಣಿ ಮಾಡಿಸಿ

12:04 PM Jan 03, 2020 | Suhan S |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿರುವ ಅರ್ಹ ಯುವ ಮತದಾರರನ್ನು ಗುರುತಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ನೋಂದಾಯಿಸುವ ಉದ್ದೇಶದಿಂದ ಜನವರಿ 6, 7 ಮತ್ತು 8 ರಂದು ಮತದಾರರ ಮಿಂಚಿನ ನೋಂದಣಿ ಅಭಿಯಾನವನ್ನು ಜಿಲ್ಲಾದ್ಯಂತ ಆಯೋಜಿಸಬೇಕೆಂದು ಅಪರ ಜಿಲ್ಲಾಧಿಕಾರಿ ಆರತಿ, ಜಿಲ್ಲೆಯ ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿರುವ

Advertisement

ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಮಿಂಚಿನ ನೋಂದಣಿ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳಿಂದ ಮಿಂಚಿನ ನೋಂದಣಿ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಪ್ರಚಾರ ನಡೆಸಿ: ಮಿಂಚಿನ ನೋಂದಣಿ ಅಭಿ ಯಾನಕ್ಕೆ ಅಗತ್ಯ ಇರುವ ಎಲ್ಲಾ ನಮೂನೆಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ಸರಬರಾಜು ಮಾಡಲಾಗುವುದು. ಆಯಾ ತಹಶೀಲ್ದಾರರು ಪೂರ್ವಭಾವಿಯಾಗಿ ತಾಲೂಕಿನಲ್ಲಿ ವ್ಯಾಪಕ ಪ್ರಚಾರ ನಡೆಸಬೇಕೆಂದ ತಿಳಿಸಿದರು.

ಕಾಲೇಜುಗಳಿಗೆ ಗುರಿ ನಿಗದಿ: ಜಿಲ್ಲಾ ಸ್ವೀಪ್‌ ಸಮಿತಿಯು ಮಿಂಚಿನ ನೋಂದಣಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ತಯಾರಿಸಿರುವ ಕ್ರಿಯಾ ಯೋಜನೆಯನ್ನು ಸಲ್ಲಿಸಿರುವಂತೆ ಕಾರ್ಯ ಕ್ರಮವನ್ನು ಅನುಷ್ಠಾನಗೊಳಿಸಬೇಕು. ಜ.1, 2020 ಕ್ಕೆ 18 ವರ್ಷ ತುಂಬಿದ ವಿದ್ಯಾರ್ಥಿಗಳು ನೋಂದಣಿ ಮಾಡಿಸಲು ಕಾಲೇಜುಗಳಿಗೆ ಗುರಿಯನ್ನು ನಿಗದಿಪಡಿಸಲಾಗಿದೆ ಎಂದರು.

ಇ-ಮೇಲ್‌ ಮುಖಾಂತರ ಸಲ್ಲಿಸಬೇಕು: ಪ್ರತಿ ದಿನ ನೋಂದಣಿ ಅಭಿಯಾನದ ಪ್ರಗತಿಯನ್ನು ಜಿಲ್ಲಾಡಳಿತಕ್ಕೆ ವರದಿ ಮಾಡಬೇಕು. ನೋಂದಣಿ ಅಂಕಿ ಅಂಶಗಳನ್ನು ಕಚೇರಿಯಿಂದ ನೀಡಲಾಗಿರುವ ನಮೂನೆಯಲ್ಲಿ ಭರ್ತಿ ಮಾಡಿ, ಸಹಿ ಮಾಡಿದ ಪ್ರತಿಯನ್ನು ಈ ಕಚೇರಿಗೆ ಇ-ಮೇಲ್‌ ಮುಖಾಂತರ ಸಲ್ಲಿಸಬೇಕು.

Advertisement

ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಛಾಯಾಚಿತ್ರ ಮತ್ತು ವಿಡಿಯೋ ಚಿತ್ರೀಕರಣ ಮಾಡಿಸಿ ಸಂಬಂಧಪಟ್ಟ ಮಾಹಿತಿಯನ್ನು ಕ್ರೋಢಿಕರಿಸಿ ಕಡ್ಡಾಯವಾಗಿ ಜಿಲ್ಲಾಡಳಿತಕ್ಕೆ ನೀಡಬೇಕು. ವಿಶೇಷವಾಗಿ ರೈಲ್ವೆ ನಿಲ್ದಾಣ, ಬಸ್‌ ತಂಗುದಾಣಗಳಲ್ಲಿ ಮತದಾರರ ನೋಂದಣಿ ಬಗ್ಗೆ ಆಡಿಯೋ ಕ್ಲಿಪ್‌ಗ್ಳನ್ನು ಅಳವಡಿಸಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ಯಾಂಪಸ್‌ ಅಂಬಾಸಿಡರ್ ಮತ್ತು ಇಲ್‌ಸಿಗಳ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಜ.6 ರಿಂದ 8 ರವರೆಗೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ನಗರಸಭೆಯ ಆಯುಕ್ತ ಎಂ.ಲೋಹಿತ್‌, ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ನೋಮೇಶ್‌ ಕುಮಾರ್‌ ಸೇರಿದಂತೆಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next