ಹಿರೇಕೆರೂರ: ಅಸಂಘಟಿತ ಕಾರ್ಮಿಕರು ಕಾರ್ಮಿಕ ಸೇವಾ ಕೇಂದ್ರದಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು ಮತ್ತು ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಆರ್.ಎಚ್.ಭಾಗವಾನ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಆವರಣದಲ್ಲಿನ ಸಾಮರ್ಥ್ಯ ಸೌಧದಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆಶ್ರಯದ ನೂತನ ತಾಲೂಕಾ ಕಾರ್ಮಿಕ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
18 ರಿಂದ 60 ವರ್ಷದೂಳಗಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಅರ್ಜಿ ಸಲ್ಲಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸುಮಾರು 51 ಅಸಂಘಟಿತ ವಲಯಗಳಿದ್ದು, ಇವುಗಳಲ್ಲಿ ಯಾವುದಾದರೂ ಒಂದು ಸೇವಾ ಪ್ರಮಾಣ ಪತ್ರ ಸಲ್ಲಿಸಿ ಗುರುತಿನ ಕಾರ್ಡ್ ಪಡೆದುಕೊಳ್ಳಬೇಕು.
ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ, ಶ್ರಮ ಸಾಮರ್ಥ್ಯ, ಕಾರ್ಮಿಕ ಗೃಹ ಭಾಗ್ಯ, ತಾಯಿ ಲಕ್ಷ್ಮಿ ಬಾಂಡ್, ಅಂತ್ಯಕ್ರಿಯೆ ವೆಚ್ಚ, ಕಲಿಕೆ ಭಾಗ್ಯ, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾಪುರಸ್ಕಾರ, ಕಾರ್ಮಿಕ ಆರೋಗ್ಯ ಭಾಗ್ಯ, ಅಪಘಾತ ಪರಿಹಾರ, ಕಾರ್ಮಿಕ ಚಿಕಿತ್ಸಾ ಭಾಗ್ಯ, ಮದುವೆ ಸಹಾಯಧನ, ಎಲ್‌ಪಿಜಿ ಸಂಪರ್ಕ ಸೌಲಭ್ಯ, ಬಸ್‌ಪಾಸ್ ಸೌಲಭ್ಯ ಸೇರಿದಂತೆ ಮುಂತಾದ ಸೌಲಭ್ಯಗಳು ಸದಸ್ಯರಿಗೆ ದೊರೆಯುತ್ತವೆ ಎಂದು ಹೇಳಿದರು.
ತಾಪಂ ಅಧ್ಯಕ್ಷ ಹೇಮಪ್ಪ ಮುದಿರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಮಿಕ ಕಲ್ಯಾಣ ಮಂಡಳಿಯಿಂದ ದೊರೆಯುವ ಸೌಲಭ್ಯಗಳು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಪಡೆದುಕೊಳ್ಳಬೇಕು ಎಂದರು.ಡಿ.ಇಬ್ರಾಹಿಂಸಾಬ್, ಎಲ್.ಸಿ.ಸಿದ್ದಲಿಂಗಪ್ಪ, ಪ್ರದೀಪ ಹಡಪದ, ಚೋಳಪ್ಪ ಬಣಕಾರ, ಪುಟ್ಟರಾಜ ಕುಂಬಳೂರು, ಮಾರುತಿ ಚಿಕ್ಕಣ್ಣ, ಸುಮಾ ಹಡಪದ, ಕೃಷ್ಣಪ್ಪ ಕುಂಬಳೂರು, ಬೀರಪ್ಪ ಬಣಕಾರ, ಹನುಮಂತಪ್ಪ ಕೊರವರ ಹಾಗೂ ಕಾರ್ಮಿಕರು ಇದ್ದರು