Advertisement

ಪಡಿತರದಾರರು ಮೊಬೈಲ್‌ ಸಂಖ್ಯೆ ನೋಂದಣಿ ಮಾಡಿಸಿ

07:45 AM Oct 31, 2017 | Team Udayavani |

ಬೆಂಗಳೂರು: ಬಯೋಮೆಟ್ರಿಕ್‌ ವ್ಯವಸ್ಥೆಗೆ ತಾಂತ್ರಿಕ ಕಾರಣಗಳನ್ನೊಡ್ಡಿ ನ್ಯಾಯಬೆಲೆ ಅಂಗಡಿಯವರು ಪಡಿತರ ವಿತರಿಸಲು ನಿರಾಕರಿಸುತ್ತಿದ್ದಾರೆಯೇ? ಹಾಗಿದ್ದರೆ ಬಿಪಿಎಲ್‌ ಕಾರ್ಡ್‌ದಾರರು ತಮ್ಮ ಮೊಬೈಲ್‌ ಸಂಖ್ಯೆಗಳನ್ನು ನೋಂದಣಿ ಮಾಡಿಕೊಳ್ಳಿ. ನಿಮ್ಮ ಮೊಬೈಲ್‌ ಸಂಖ್ಯೆಗೆ ಇಲಾಖೆಯಿಂದ ಬಾರ್‌ ಕೋಡ್‌ ಕಳುಹಿಸಲಾಗುತ್ತದೆ. ಅದನ್ನು
ತೋರಿಸಿ ಪಡಿತರ ಪಡೆಯಿರಿ.

Advertisement

– ಹೀಗೆಂದು ಸಚಿವ ಯು.ಟಿ.ಖಾದರ್‌ ರಾಜ್ಯದ ಪಡಿತರ ಚೀಟಿದಾರರಲ್ಲಿ ಮನವಿ ಮಾಡಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ಆಹಾರ ಧಾನ್ಯ ದುರುಪಯೋಗ ಬಾರದು ಎಂಬ ಕಾರಣಕ್ಕೆ
ಸರ್ಕಾರ ನ್ಯಾಯಬೆಲೆ ಅಂಗಡಿಗಳಲ್ಲಿ ಪಾಯಿಂಟ್‌ ಆಫ್ಸೇಲ್‌ ಯಂತ್ರಗಳನ್ನು ಅಳವಡಿಸಿ ಬಯೋಮೆಟ್ರಿಕ್‌ ವ್ಯವಸ್ಥೆ ಕಲ್ಪಿಸುತ್ತಿದೆ. ಒಟ್ಟು 20,372 ನ್ಯಾಯಬೆಲೆ ಅಂಗಡಿಗಳ ಪೈಕಿ 13,150 ನ್ಯಾಯಬೆಲೆ ಅಂಗಡಿಗಳಿಗೆ ಪಾಯಿಂಟ್‌ ಆಫ್ ಸೇಲ್‌ ಮಿಷನ್‌ ಅಳವಡಿಸಲಾಗಿದೆ.

ಕೆಲವೆಡೆ, ಇಂಟರ್‌ನೆಟ್‌ ಸಮಸ್ಯೆ ಮತ್ತಿತರ ಕಾರಣಗಳನ್ನು ಹೇಳಿ ಆಹಾರಧಾನ್ಯ ನೀಡಲು ನಿರಾಕರಿಸುತ್ತಿರುವ
ದೂರುಗಳು ಬಂದಿವೆ. ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಡಿಸೆಂಬರ್‌ ಅಂತ್ಯದ ವೇಳೆಗೆ
ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲೂ ಯಂತ್ರ ಅಳವಡಿಸುವ ಕಾರ್ಯ ಮುಗಿಯಲಿದೆ. ಅಷ್ಟರೊಳಗೆ ಎಲ್ಲಾ ಕಾರ್ಡ್‌ದಾರರು ತಮ್ಮ ಮೊಬೈಲ್‌ ಸಂಖ್ಯೆಗಳನ್ನು ನೋಂದಣಿ ಮಾಡಿಸುವಂತೆ ತಿಳಿಸಿದರು.

ಕಳೆದ 8 ತಿಂಗಳಿ ನಿಂದ ಕಾರ್ಡ್‌ದಾರರಿಗೆ ಗೋಧಿ ವಿತರಣೆ ಸ್ಥಗಿತಗೊಳಿಸಿ ಪ್ರತಿ ವ್ಯಕ್ತಿಗೆ 7 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿತ್ತು. ಆದರೆ, ಉತ್ತರ ಕರ್ನಾಟಕ ಸೇರಿದಂತೆ 13 ಜಿಲ್ಲೆಗಳಿಂದ ಗೋಧಿಗೆ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಷ್ಟು ಗೋಧಿ ಬೇಕಾಗುತ್ತದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಲಾಗಿದ್ದು, ವರದಿ ಬಂದ
ಕೂಡಲೇ ಪ್ರತಿ ವ್ಯಕ್ತಿಗೆ 7 ಕೆ.ಜಿ.ಆಹಾರ ಧಾನ್ಯದಲ್ಲಿ 2 ಕೆ.ಜಿ. ಗೋಧಿ ಮತ್ತು 5 ಕೆ.ಜಿ. ಅಕ್ಕಿ ವಿತರಿಸಲು ಕ್ರಮ
ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next