Advertisement

ನಿಮ್ಮಲ್ಲಿ ಡ್ರೋಣ್ ಇದೆಯೇ? ಹಾಗಾದರೆ ಇದನ್ನು ನೀವು ಓದಲೇಬೇಕು!

09:59 AM Jan 14, 2020 | Hari Prasad |

ನವದೆಹಲಿ: ನಿಮ್ಮಲ್ಲಿ ಡ್ರೋಣ್ ಇದ್ದರೆ ಅದನ್ನು ಇದೇ ಜನವರಿ 31ರ ಒಳಗಾಗಿ ನೋಂದಾವಣೆ ಮಾಡಿಕೊಳ್ಳಿ. ಇದಕ್ಕೆ ತಪ್ಪಿದಲ್ಲಿ ಅಂತಹ ಡ್ರೋಣ್ ಮಾಲಕರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ವಾಯುಯಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಇಂದು ಹೊರಡಿಸಿರುವ ಸಾರ್ವಜನಿಕ ಸೂಚನೆಯಲ್ಲಿ ತಿಳಿಸಿದೆ. ಈ ಮೂಲಕ ದೇಶದಲ್ಲಿರುವ ಡ್ರೋಣ್ ಮಾಲಕರಿಗೆ ಸಚಿವಾಲಯವು ‘ಏಕ ಅವಧಿಯ’ ಅವಕಾಶವನ್ನು ನೀಡಿದೆ.

Advertisement

ಡ್ರೋಣ್ ಮಾಲಕರು ತಮ್ಮಲ್ಲಿರುವ ಡ್ರೋಣ್ ಗಳ ನೋಂದಣಿಯನ್ನು ಪೂರ್ಣಗೊಳಿಸಿದ ಬಳಿಕ ಅವರಿಗೆ ಅಪರೇಟರ್ ಅಕ್ ನಾಲೆಡ್ಜ್ ಮೆಂಟ್ ನಂಬರನ್ನು (OAN) ನೀಡಲಾಗುತ್ತದೆ ಮತ್ತು ಡ್ರೋಣ್ ಬಳಕೆದಾರರ ಪ್ರೊಫೈಲ್ ನಲ್ಲಿ ನೋಂದಣಿಯಾಗುವ ಪ್ರತೀ ಡ್ರೋಣ್ ಗೆ ‘ಡ್ರೋಣ್ ಅಕ್ ನಾಲೆಡ್ಜ್ ಮೆಂಟ್ ನಂಬರ’ನ್ನು (DAN) ನೀಡಲಾಗುತ್ತದೆ.

ಈ ಮೂಲಕ ದೇಶದಲ್ಲಿ ಇರುವ ಒಟ್ಟು ಡ್ರೋಣ್ ಗಳ ಸಂಖ್ಯೆಯ ಕುರಿತಾಗಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಒಂದು ನಿಖರ ಮಾಹಿತಿ ಸಿಗುವ ನಿರೀಕ್ಷೆ ಇದೆ. ಮತ್ತು ಮುಂಬರುವ ದಿನಗಳಲ್ಲಿ ಡ್ರೋಣ್ ಬಳಕೆಗೆ ಸಂಬಂಧಿಸಿದಂತೆ ಸೂಕ್ತ ನೀತಿ ನಿಯಮಗಳನ್ನು ರೂಪಿಸಲು ಸರಕಾರಕ್ಕೆ ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಡ್ರೋಣ್ ಫೆಡರೇಶನ್ ಆಫ್ ಇಂಡಿಯಾದ ಭಾಗೀದಾರಿ ನಿರ್ದೇಶಕ ಸ್ಮಿತ್ ಶಾ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಮಾನವ ರಹಿತ ವಿಮಾನಯಾನ ಉದ್ದಿಮೆಯ ಸುರಕ್ಷಿತ ಮತ್ತು ಮಾಪನಸಾಧ್ಯವಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದಿ ಡ್ರೋಣ್ ಫೆಡರೇಷನ್ ಆಫ್ ಇಂಡಿಯಾ ಒಂದು ಲಾಭ ರಹಿತ ಸಂಸ್ಥೆಯಾಗಿ ತನ್ನನ್ನು ಗುರುತಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next