Advertisement
ಹೀಗಾಗಿ, ಜಿಲ್ಲೆಯ ವಿದ್ಯಾರ್ಥಿಗಳ ವಿಜ್ಞಾನ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ಭವಿಷ್ಯದ ವಿಜ್ಞಾನಿಗಳು ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲಾ ಪ್ರಾದೇಶಿಕ ವಿಜ್ಞಾನ ಕೇಂದ್ರದಕ್ಕೆ 15 ವರ್ಷಗಳ ಹಿಂದೆಯೇ ಸರ್ಕಾರದಿಂದ ಅನುಮೋದನೆ ನೀಡಲಾಗಿತ್ತು.
Related Articles
Advertisement
2006ರಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಬಸವರಾಜ ಹೊರಟ್ಟಿ ಅವರು ಹಾವೇರಿಗೆ ವಿಜ್ಞಾನ ಕೇಂದ್ರ ಮಂಜೂರು ಮಾಡಿದ್ದರು. ಬಳಿಕ ದೇವಗಿರಿಯಲ್ಲಿ 3 ಎಕರೆ ಜಾಗವನ್ನು ಕೇಂದ್ರ ಸ್ಥಾಪನೆಗೆ ಮೀಸಲಾಗಿಡಲಾಗಿತ್ತು. ಬಳಿಕ ಯಾರೂ ಈ ಬಗ್ಗೆ ಆಸಕ್ತಿ ತಾಳದ್ದರಿಂದ ನನೆಗುದಿಗೆ ಬಿದ್ದಿತ್ತು. ಎರಡು ವರ್ಷಗಳ ಹಿಂದೆ ಮತ್ತೆ ಚಾಲನೆ ದೊರೆತು ಕರ್ಜಗಿಯ ಕೇಂದ್ರೀಯ ವಿದ್ಯಾಲಯದ ಪಕ್ಕದಲ್ಲೇ ವಿಜ್ಞಾನ ಕೇಂದ್ರ ಸ್ಥಾಪನೆಗೆ ಜಿಲ್ಲಾಡಳಿತ ಮುಂದಾಗಿತ್ತು. ಬಳಿಕ ದೇವಗಿರಿಗೆ ವಿಜ್ಞಾನ ಕೇಂದ್ರ ಮತ್ತೆ ವರ್ಗಾಯಿಸಿಸಲಾಗಿತ್ತು.
ಹೆಚ್ಚುವರಿ 3.50 ಕೋಟಿ ಅನುದಾನಕ್ಕೆ ಬೇಡಿಕೆ: ವಿಜ್ಞಾನ ಕೇಂದ್ರ ಪೂರ್ಣಗೊಳಿಸಲು ಇನ್ನೂ 3.50 ಕೋಟಿ ರೂ. ಅನುದಾನದ ಅಗತ್ಯವಿದೆ. ಜಮೀನು ಹಂಚಿಕೆ ವಿಳಂಬದಿಂದ 2.60 ಕೋಟಿ ರೂ. ವೆಚ್ಚದ ಕಾಮಗಾರಿ 7 ಕೋಟಿ ರೂ.ಗೆ ಏರಿದೆ. ವಿಜ್ಞಾನ ಕೇಂದ್ರ ಕಾಮಗಾರಿ ವಿಳಂಬದ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ಅಧಿವೇಶನದಲ್ಲಿ ಪ್ರಶ್ನೆ ಎತ್ತಿದ್ದರು. ಇದಕ್ಕೆ ಉತ್ತರಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ|ಅಶ್ವತ್ಥನಾರಾಯಣ ಅವರು, 2021ರಲ್ಲಿ ಹೆಚ್ಚುವರಿ 3.50 ಕೋಟಿ ರೂ. ಅನುದಾನಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ.
ಈ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಸರ್ಕಾರದಿಂದ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆಯ ಅಗತ್ಯವಿದ್ದು, ಆರ್ಥಿಕ ಇಲಾಖೆಯ ಸಮಾಲೋಚನೆಯೊಂದಿಗೆ ಸರ್ಕಾರದ ಗಮನದಲ್ಲಿದೆ ಎಂದು ಉತ್ತರ ನೀಡಿದ್ದರು. ಆದಷ್ಟು ಬೇಗ ಸರ್ಕಾರ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ನನೆಗುದಿಗೆ ಬಿದ್ದಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರ ಪೂರ್ಣಗೊಳಿಸಲು ಮುಂದಾಗಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ವಿಜ್ಞಾನ ಕೇಂದ್ರದ ಸಿವಿಲ್ ಕಾಮಗಾರಿ ಶೇ.90ರಷ್ಟು ಮುಗಿದಿದೆ. ಆದರೆ, ಗ್ಯಾಲರಿ ಕೆಲಸ ಆಗಬೇಕು. ಅನುದಾನ ಇಲ್ಲದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಹೆಚ್ಚುವರಿ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ ಸಿಕ್ಕಿದೆ. ಬಿಡುಗಡೆಯಾದ ತಕ್ಷಣ ಇನ್ನುಳಿದ ಕಾಮಗಾರಿ ಪೂರ್ಣಗೊಳಿಸಲಾಗುವುದು. –ತಿಮ್ಮೇಶಕುಮಾರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು