ಮಣಿಪಾಲ: ಜಾರ್ಖಂಡ್ ಫಲಿತಾಂಶ:
ದೇಶದಲ್ಲಿ ಮತ್ತೆ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗುತ್ತಿವೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಆಯ್ದ ಕೆಲವು ಇಲ್ಲದೆ.
ಮಹೇಶ ಜಿ ಪಟ್ಟಣಶೆಟ್ಟಿ ಈ ಪ್ರಜಾಪ್ರಭುತ್ವ ಭಾರತ ದೇಶಕ್ಕೆ ಯಾವ ಪಕ್ಷ ಮತ್ತು ಯಾವ ವ್ಯಕ್ತಿಯು ಅನಿವಾರ್ಯ ಅಲ್ಲ ದೇಶದ ಮತದಾರ ಬದಲಾವಣೆ ಬಯಸಿದ್ದರೆ ಬದಲಾವಣೆ ಶತ ಸಿದ್ಧಿ. ಬರುವ ದಿನಗಳಲ್ಲಿ ದೇಶದಲ್ಲಿ ರಾಜಕೀಯ/ಆಡಳಿತ ಬದಲಾವಣೆಯ ಮುನ್ಸೂಚನೆ.
ಹರೀಶ್ ಗೌಡ: ಶೇಕಡಾ 70% ಬುಡಕಟ್ಟು ಜನರನ್ನು ಹೊಂದಿರುವ ಜಾರ್ಖಂಡ್ ರಾಜ್ಯದಲ್ಲಿ ಒಮ್ಮೆ ಬಿಜೆಪಿ ಅಧಿಕಾರ ನೆಡಸಿದ್ ಒಂದು ಸಾಧನೆ ಅಂತ ಹೇಳಬೇಕು.. ಕ್ರೈಸ್ತ ಮಿಷನರಿಗಳು 70% ಜನರನ್ನು ಕ್ರಿಷ್ಟಿಯನ್ ಮಾಡಿವೆ.. ಮತ್ತೆ ಬಿಜೆಪಿ ಬಹುಮತ ಪಡೆಯಲು ಕಷ್ಟ ಸಾಧ್ಯ
ರಾಜೇಶ್ ಅಂಚನ್ ಎಂ ಬಿ: ಖಂಡಿತಾ ಇಲ್ಲ. ಜಾರ್ಖಂಡ್ ನಲ್ಲಿ ಒಂದೇ ಪಕ್ಷ ಸತತವಾಗಿ ಆಡಳಿತ ಮಾಡಿದ್ದು ತುಂಬಾ ಕಡಿಮೆ. ಮತ್ತೆ ವಿಪಕ್ಷಗಳ ಮಿತಿಮೀರಿದ ಅಪಪ್ರಚಾರ ಅಲ್ಲಿನ ಸ್ಥಳೀಯ ಸಮಸ್ಯೆ ಗಳು, ನಕ್ಸಲ್ ಚಟುವಟಿಕೆ ವಿರುದ್ದ ಬಿಜೆಪಿಯ ಕಠಿಣ ಕ್ರಮ ಇವುಗಳಿಂದಾಗಿ ಈ ಬಾರಿ ಬಿಜೆಪಿಗೆ ಸ್ವಲ್ಪ ಹಿನ್ನಡೆ. ಇದು ತಾತ್ಕಾಲಿಕ ಅಷ್ಟೇ.
ಕುಮಾರ ಗೌಡ: ನಿಜವಾಗಿಯೂ ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠ ವಾಗಿವೆ ಉದಾಹರಣೆಗೆ ಕರ್ನಾಟಕವನ್ನು ಹೊರತು ಪಡಿಸಿ ದಕ್ಷಿಣ ಭಾರತದಲ್ಲೀ ಎಲ್ಲೂ ರಾಷ್ಟ್ರೀಯ ಪಕ್ಷಗಳಗೆ ನೆಲೆ ಇಲ್ಲ ಹಾಗೆ ಉತ್ತರ ಭಾರತ ದಲ್ಲು ಮೂರು ನಾಲ್ಕು ರಾಜ್ಯಗಳಲ್ಲಿ ಮಾತ್ರ ಅವುಗಳ ನಿಯಂತ್ರಣ , ಭಾರತ ದೇಶ ಏಕತೆಯನು ವಿವಿಧತೆಯಲ್ಲಿ ಕಂಡಿದೆ ಅದ್ದರಿಂದ ಯಾವೊಂದು ಪಕ್ಷವು ಸರ್ವ ವ್ಯಾಪ್ತಿಯ ಇಲ್ಲ , ಸರ್ವ ವ್ಯಾಪಿ ಆದರೆ ಅದರಿದ ನಿರಂಕುಶಪ್ರ ಭುತ್ವಕ್ಕೆ ದಾರಿ ಹಗಾಬಹುದು .
ವಾದಿರಾಜ ತಂತ್ರಿ: ಹಾಗೇನೂ ಇಲ್ಲ.ಇಲ್ಲಿ ಬಿಜೆಪಿ ಲೋಕಲ್ ವಿಷ್ಯ ಬಿಟ್ಟು ಚುನಾವಣೆ ಎದುರಿಸಿದ್ದು ಸೋಲಿಗೆ ಕಾರಣ ಇರಬಹುದು. ಮತ್ತು ಬಿಜೆಪಿ ಎಲ್ಲಾ ನಾಯಕರು ಅಮಿತ್ ಷಾ ಮತ್ತು ಮೋದಿ ಅವರ ಮೇಲೆ ಅವಲಂಬನೆ ಕಡಿಮೆ ಮಾಡಬೇಕು. ಅವರಿಗೆ ಕೇಂದ್ರದಲ್ಲಿ ತುಂಬಾ ಕೆಲಸ ಇರುತ್ತೆ.ಮತ್ತು ಅಮಿತ್ ಷಾ ಈಗ ಮಂತ್ರಿ ಆಗಿರುವುದರಿಂದ ಫೀಲ್ಡ್ work ಕಡಿಮೆ ಆಗಿರುವ ಸಾಧ್ಯತೆ ಇದೆ.
ನಿತೇಶ್ ಬಿ: “ಅಯೋಧ್ಯೆಯಲ್ಲಿ ಆಕಾಶದೆತ್ತರದ ರಾಮ ಮಂದಿರ ಕಟ್ಟಲಾಗುವುದು, ದಯವಿಟ್ಟು ನಮ್ಮನ್ನು ಗೆಲ್ಲಿಸಿ” ಎಂದು ಬಡವರ ಮುಂದೆ ಶಾ ಗೋಗರೆದಿದ್ದರು. “ಗಲಭೆಕೋರರು ಯಾರು ಎಂಬುದನ್ನು ಅವರ ಉಡುಗೆಯಿಂದಲೇ ಗುರುತಿಸಬಹುದು, NRC ಮೂಲಕ ನಿಮ್ಮ ಉದ್ಧಾರ ಮಾಡುತ್ತೇನೆ, ದಯವಿಟ್ಟು ನಮ್ಮನ್ನು ಗೆಲ್ಲಿಸಿ” ಎಂದು ಆದಿವಾಸಿಗಳಲ್ಲಿ ಮೋದಿ ಬೇಡಿಕೊಂಡಿದ್ದರು. ಜಾರ್ಖಂಡದ ಜನ ನಿಜಕ್ಕೂ ಕೃತಘ್ನರು