Advertisement
ಪ್ರಾದೇಶಿಕ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಸರ್ಕಾರ ರಚಿಸಲು ಬಿಜೆಪಿಗೆ ಬೆಂಬಲ ನೀಡಿದೆ. ಎಂಜಿಪಿ ಎರಡು ಸ್ಥಾನಗಳಲ್ಲಿ ಜಯ ಸಾಧಿಸಿದೆ. ಆಂಟೋನಿಯೊ ವಾಸ್, ಚಂದ್ರಕಾಂತ್ ಶೆಟ್ಟಿ ಮತ್ತು ಅಲೆಕ್ಸ್ ರೆಜಿನಾಲ್ಡ್ ಎಂಬ ಮೂವರು ಪಕ್ಷೇತರರ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಈಗ 25 ಸ್ಥಾನಗಳನ್ನು ಹೊಂದಿದ್ದು, 40 ಸದಸ್ಯ ಬಲದ ಸದನದಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನವನ್ನು ಪಡೆದಿವೆ.
Related Articles
Advertisement
ಪಂಜಾಬ್ ನಲ್ಲಿ ಭರ್ಜರಿ ಜಯ ಸಾಧಿಸಿದ ಆಮ್ ಆದ್ಮಿ ಪಕ್ಷವು ಗೋವಾದಲ್ಲಿ ಕೇವಲ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ 11ರಲ್ಲಿ ಗೆಲುವು ಸಾಧಿಸಿದೆ.
ಗೋವಾದ ಜನರ ತೀರ್ಪನ್ನು ಪಕ್ಷ ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ. “ನಾವು ಗೋವಾದ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. 11 ಸ್ಥಾನಗಳಲ್ಲಿ ನಮಗೆ ಮತ ಹಾಕಿದ ಗೋವಾದ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ನಮ್ಮ ಕೆಲವು ನಾಯಕರನ್ನು ಗೋವಾದ ಜನರು ಒಪ್ಪಿಕೊಳ್ಳದಿರುವುದು ಬೇಸರದ ಸಂಗತಿ. ಮುಂಬರುವ ಚುನಾವಣೆಯಲ್ಲಿ ಗೋವಾದ ಜನತೆಗಾಗಿ ಇವರು ಉತ್ತಮ ಅಭ್ಯರ್ಥಿಗಳು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನನಗೆ ಖಾತ್ರಿಯಿದೆ.” ಎಂದು ಚಿದಂಬರಂ ಸುದ್ದಿಗಾರರಿಗೆ ತಿಳಿಸಿದರು