ಮಣಿಪಾಲ: ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನವನ್ನು ನೀಡಲು ನಿರಾಕರಿಸಿರುವ ಕೇಂದ್ರ ಸರಕಾರದ ನಿಲುವಿನ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಕೃಷ್ಣ ಜೋಶಿ: ಮೊದಲು ಬೆಂಗಳೂರು ನಲ್ಲಿ ಲಕ್ಷಾಂತರ ಜನ ಬೀಡು ಬಿಟ್ಟಿರುವ ಕೊಂಗರನ್ನು ಉತ್ತರ ಭಾರತೀಯರನ್ನು ಹೊರ ಹಾಕುವ ತಾಕತ್ತು ತೋರಿಸಿರಿ. ದೇಶದಲ್ಲಿ ಯಾವುದೇ ರಾಜ್ಯದವರು ಯಾವುದೇ ಭಾಷೆ ಕಲಿಯುವ ಸ್ವಾತಂತ್ರ ಇದೆ. ನಿಮಗೆ ಹಿಂದಿ ಬೇಡಾ ಎಂದರೆ ಬಿಡ್ರಿ . ಒತ್ತಾಯವಿಲ್ಲ ತಮಿಳನಾಡಿನಲ್ಲಿ ಪಾಂಡಿಚೇರಿಯಲ್ಲಿನ ಜನ ಹಿಂದಿ ಕಲಿಯುವದಿಲ್ಲ. ಅಲ್ಲಿ ತಮಿಳ ಮತ್ತು ಇಂಗ್ಲಿಷ್ ಮಾತ್ರ
ಮಲ್ಲಿಕಾರ್ಜುನ್ : ನಮ್ಮ ಭಾಷೆಗಳಿಗೆ ಮಾನ್ಯತೆ ಕೊಡಲು ಸಾಧ್ಯವಾಗದಿದ್ದರೆ ಹಿಂದಿ ಸಮರ್ಥನೆ ಮಾಡುವ ಹಿಂದಿವಲಾಗಳು ಸ್ವಂತ ದೇಶ ಮಾಡಿಕೊಳ್ಳಲಿ, ಹಿಂದಿ ಮಾತನಾಡದ ರಾಜ್ಯಗಳಿಂದ ತೊಲಗಲಿ
ನವೀನ್: ಆಯಾ ರಾಜ್ಯದ ಭಾಷೆಗಳಿಗೂ ಗೌರವ ಕೋಡಬೇಕು
ಸುಬ್ರಹ್ಮಣ್ಯ ಬಸ್ರಿ: ನಮ್ಮ ಸರಕಾರ ಏಕ ಮುಖ ಸಂಚಾರವನ್ನು ಅನುಸರಿಸುತ್ತಿದೆ. ನೋ ರೆಪ್ಲೈ ಪಾಲಿಸಿ. ಬೇಡಿಕೆಗೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯಿಲ್ಲ. ಮೌನವಾಗಿ ಮೆಣಸಿನಕಾಯಿ ಅರೆಯುವದು ಇವರ ಹಿಡನ್ ಅಜೆಂಡಾ. ಇಷ್ಟೇ ಬರೆದರೂ ದೇಶದ್ರೋಹದ ಪಟ್ಟ ಹಿಂಬಾಲಕರಿಂದ. ಹಾಗಾಗಿ ಎಲ್ಲರೂ ಮೌನವಾಗಿ ಸಹಿಸುತ್ತಿದ್ದಾರೇನೋ?
ನಾರಾಯಣ ಪ್ರಸಾದ್: ಅವರಿಗೆ ಜಯಕಾರ ಹಾಕುವವರು ಉತ್ತರಿಸಬೇಕು. ಭಾಷೆಯ. ವಿಚಾರದಂದಲೇ ಭಾರತ ಐಕ್ಯತೆಗೆ ಭಂಗ ತರಬಾರದು ಎಂಬ ಜ್ಞಾನ ಭಾರತವನ್ನು ಆಳುತ್ತಿರುವವರಿಗೆ ಇಲ್ಲದಿರುವುದು ನಿಜಕ್ಕೂ ಶೋಚನೀಯ .