ಬೆಂಗಳೂರು: ಪ್ರಾದೇಶಿಕ ಹಾಗೂ ರಾಜ್ಯ ಭಾಷೆಗಳಲ್ಲಿ ಶಿಕ್ಷಣ ಪಡೆಯುವವರು “ಅಸಮರ್ಥರು’ ಎಂಬಂತೆ ಪರಿಗಣಿಸಬಾರದು ಎಂದು ಹೈಕೋರ್ಟ್ ಸೂಕ್ಷ್ಮ ರೀತಿಯಲ್ಲಿ ಮೌಖೀಕವಾಗಿ ಹೇಳಿದೆ.
ಸಿಬಿಎಸ್ಸಿ ಮತ್ತು ಐಸಿಎಸ್‌ಸಿ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಒಂದು ವಿಷಯವನ್ನಾಗಿ ಬೋಧಿ ಸಬೇಕು ಎಂದು ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಕೆಲವು ವಿದ್ಯಾರ್ಥಿಗಳ ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾ| ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ವಿದ್ಯಾರ್ಥಿಗಳ ಪೋಷಕರ ಪರ ವಕೀಲರು, ನ್ಯಾಯಾಲಯದ ಹಿಂದಿನ ಆದೇಶದಂತೆ ಅರ್ಜಿದಾರರ ಪೋಷಕರ ಮಕ್ಕಳು ಹಾಗೂ ಅವರು ವ್ಯಾಸಂಗ ಮಾಡುತ್ತಿರುವ ಶಾಲೆಗಳ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಮಕ್ಕಳು ಶಾಲೆಗಳಲ್ಲಿ ಕಿರುಕುಳ ಅನುಭವಿಸುವ ಸಾಧ್ಯತೆ ಯಿದೆ. ಅಲ್ಲದೆ ಮಕ್ಕಳು ಅಪ್ರಾಪ್ತ ರಾಗಿದ್ದು, ಈ ಹಂತದಲ್ಲಿ ಅವರನ್ನು ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿ ಮಾಡಲು ಪೋಷಕರು ಒಪ್ಪುತ್ತಿಲ್ಲ. ಆ ಕಾರಣಕ್ಕೆ ಗೌಪ್ಯತೆ ಕಾಯ್ದುಕೊಳ್ಳಲು ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೊಡಲಾಗಿದೆ ಎಂದು ವಕೀಲರು ವಿವರಣೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಇಂತಹ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದ್ದು ಇದೇ ಮೊದಲಲ್ಲ. ಅಂತಹ ಪ್ರಕರಣಗಳಲ್ಲಿ ಮಕ್ಕಳೇ ಕೋರ್ಟ್ ಮೊರೆ ಹೋಗಿದ್ದರೇ ಹೊರತು ಪೋಷಕರಲ್ಲ. ಮಕ್ಕಳಿಗೆ ತೊಂದರೆ ಯಾಗಲಿದೆ ಎಂಬ ಆತಂಕ ಸಮಂಜಸವಾಗಿಲ್ಲ. ನಾನು ಕೂಡ ಪ್ರಾದೇಶಿಕ ಭಾಷೆಯಲ್ಲಿ ಕಲಿತಿ ದ್ದೇನೆ. ಅದು ನನಗೆ ಎಂದಿಗೂ ಅಡ್ಡಿ ಯಾಗಲಿಲ್ಲ. ಭಾಷೆಗೆ ಸಂಬಂಧಿಸಿದ ವಿಚಾರ ಗಳನ್ನು ಅದರ ಕಾನೂನು ಅಂಶಗಳ ಮೇಲೆ ನ್ಯಾಯಾಲಯ ಪರಿಗಣಿಸ ಬೇಕಾಗುತ್ತದೆ ಎಂದರು.