ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
Advertisement
ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಮಕ್ಕಳಿಗಾಗಿ ನಡೆಯುವ 7 ದಿನಗಳ ಹಿಂದೂ ಸಂಸ್ಕಾರ ಶಿಕ್ಷಣ ಶಿಬಿರವನ್ನು ರವಿವಾರ ಶ್ರೀಕೃಷ್ಣ ಮಠದ ಅನ್ನಬ್ರಹ್ಮ ಸಭಾಂಗಣದಲ್ಲಿ ಉದ್ಘಾಟಿಸಿ ಶ್ರೀಗಳು ಮಾತನಾಡಿದರು. ಮಕ್ಕಳು ನಮ್ಮ ದೇಶದ ಪ್ರಾಚೀನ ಕಾಲದ ಮಹಾತ್ಮರಾದ ರಾಮಕೃಷ್ಣರ ಕಥೆಗಳನ್ನು ತಿಳಿದು ನೀತಿವಂತರಾಗಿ ಬದುಕಬೇಕು. ಪ್ರಾಚೀನ ಕಾಲದ ಅನೇಕ ಮಹಾತ್ಮರ ವಿಚಾರಗಳನ್ನು ನಮ್ಮ ಶಾಲೆಗಳಲ್ಲಿ ತಿಳಿಸುವುದಿಲ್ಲ. ಮಕ್ಕಳಿಗೆ ಶಾಲೆಯ ಶಿಕ್ಷಣದ ಜತೆಗೆ ಮಹಾತ್ಮರ ಕಥೆಗಳ ಸಾರವು ಆದರ್ಶ ಜೀವನ ರೂಪಿಸಲು ಅಗತ್ಯವಿದೆ. ದೇವರು ಇದ್ದಲ್ಲಿ ಕೆಟ್ಟ ಕೆಲಸಗಳು ನಡೆಯುದಿಲ್ಲ ಎಂದಿರುವ ಪ್ರಹ್ಲಾದನ ವಿಚಾರಗಳನ್ನು ಮಕ್ಕಳು ತಿಳಿದುಕೊಳ್ಳಬೇಕು ಎಂದರು.
ಮಕ್ಕಳು ಪ್ರತಿನಿತ್ಯ ಶ್ಲೋಕಗಳು ಮತ್ತು ದೇವರ ಕೀರ್ತನೆಗಳನ್ನು ಹಾಡಬೇಕು. ದಿನಕ್ಕೆರಡು ಬಾರಿ ಪ್ರಾರ್ಥಿಸಬೇಕು. ಈ ಮೂಲಕ ದಿನನಿತ್ಯ ದೇವರ ಸ್ಮರಣೆಯನ್ನು ಮಾಡಬೇಕು. ಆಧ್ಯಾತ್ಮಿಕ, ಧಾರ್ಮಿಕ ವಿಚಾರಗಳನ್ನು ಹಿಂದೂ ಧರ್ಮದಿಂದ ಕಲಿತವರೇ ಇಂದು ನಮಗಿಂತ ಉತ್ತಮ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮಸ್ಲಿಂ ಧರ್ಮದಲ್ಲಿ ದಿನಕ್ಕೆ 5 ಬಾರಿ ನಮಾಜ್ ಮಾಡುತ್ತಾರೆ. ಹಾಗೆಯೇ ಕ್ರಿಶ್ಚಿಯನ್ ಧರ್ಮದಲ್ಲೂ ಪ್ರತಿದಿನ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಶ್ರೀಗಳು ಹೇಳಿದರು.