Advertisement

ಆ್ಯಂಬುಲೆನ್ಸ್‌ ಚಾಲಕನಿಗೆ ನೀರು ನೀಡಲು ನಿರಾಕರಣೆ: ದೂರು

09:59 AM Jun 10, 2020 | mahesh |

ಮಂಗಳೂರು: ಆ್ಯಂಬುಲೆನ್ಸ್‌ ಚಾಲಕರೊಬ್ಬರಿಗೆ ಅಂಗಡಿಯೊಂದರ ಮಾಲಕ ನೀರಿನ ಬಾಟಲ್‌ ನೀಡಲು ನಿರಾಕರಿಸಿ, ನಿಂದಿಸಿದ ಆರೋಪ ವ್ಯಕ್ತವಾಗಿದ್ದು, ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ. ಸುಳ್ಯದ ಆ್ಯಂಬುಲೆನ್ಸ್‌ ಚಾಲಕ ಅಭಿಲಾಷ್‌ ಅವರು ಅಸೌಖ್ಯಕ್ಕೊಳಗಾಗಿದ್ದ ರೋಗಿಯೋ ರ್ವವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಬಂದಿದ್ದರು. ಬೆಳಗ್ಗಿನ ಜಾವ ಯಾವುದೇ ಅಂಗಡಿಗಳು ತೆರೆದಿರಲಿಲ್ಲ. ಕುಡಿಯಲು ನೀರು ಅವಶ್ಯ ವಿದ್ದುದರಿಂದ ಅಭಿಲಾಷ್‌ ಫ‌ಳ್ನೀರ್‌ನಲ್ಲಿರುವ ಅಂಗಡಿಯೊಂದಕ್ಕೆ ತೆರಳಿ ಹಣ ನೀಡಿ ನೀರು ಕೇಳಿದಾಗ ಅಂಗಡಿಯಲ್ಲಿದ್ದಾತ ಕೋವಿಡ್ ರೋಗಿಗಳನ್ನು ಸಾಗಿಸುವ ಆ್ಯಂಬುಲೆನ್ಸ್‌ ಚಾಲಕರಿಗೆ ನೀರಿನ ಬಾಟಲಿ ಕೊಡುವುದಿಲ್ಲ. ನೀವು ಊರಿಗೆ ಕೋವಿಡ್ ವೈರಸ್‌ ಹರಡುತ್ತಿದ್ದೀರಿ ಎಂದು ನಿಂದಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ರೀತಿಯ ವರ್ತನೆ ನೋವು ತಂದಿದೆ ಎಂದು ಚಾಲಕ ಬೇಸರ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next