ಉಡುಪಿ: ಜೀವ ವಿಮಾ ಪರಿಹಾರ ನೀಡಲು ನಿರಾಕರಿಸಿದ ವಿಮಾ ಸಂಸ್ಥೆಗೆ ಒಟ್ಟು ವಿಮಾ ಹಣ ಮತ್ತು ಖರ್ಚಿನೊಂದಿಗೆ ಗ್ರಾಹಕರಿಗೆ ನೀಡುವಂತೆ ಉಡುಪಿಯ ಗ್ರಾಹಕರ ಆಯೋಗ ಆದೇಶಿಸಿದೆ.
ಕುಂದಾಪುರ ತಾಲೂಕು ಕಾಲೊ¤àಡು ಗ್ರಾಮದ ಪ್ರಶಾಂತ್ ಶೆಟ್ಟಿ ಅವರು ವಿಮೆ ಸಂಸ್ಥೆಯೊಂದರಲ್ಲಿ 2021ರ ಫೆ. 17ರಂದು 12 ವರ್ಷದ ಅವಧಿಗೆ 10 ಲ.ರೂ. ಒಟ್ಟು ಮೌಲ್ಯಕ್ಕೆ ಜೀವವಿಮೆ ಮಾಡಿಸಿದ್ದರು. ವಿಮಾ ಕಂತನ್ನು ವಾರ್ಷಿಕ 94,701ರೂ. ಮತ್ತು ಜಿಎಸ್‌ಟಿಯೊಂದಿಗೆ ಪಾವತಿಸುವ ಷರತ್ತಿನೊಂದಿಗೆ ಪ್ರಥಮ ಕಂತನ್ನು ಪಾವತಿಸಿ ವಿಮಾ ಪಾಲಿಸಿ ಪಡೆದುಕೊಂಡಿದ್ದರು.
ಪಾಲಿಸಿದಾರ ಪ್ರಶಾಂತ್ ಶೆಟ್ಟಿಯವರ ದೇಹಕ್ಕೆ ತಗಲಿದ ತೀವ್ರತರದ ಸಾರ್ ಸೋಂಕಿಗೆ ಸಂಬಂಧಪಟ್ಟಂತೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ 2022ರ ಫೆ. 14ರಂದು ಮೃತಪಟ್ಟರು. ಅನಂತರ ಪತ್ನಿ ಪ್ರಶಾಂತ್‌ಗೆ ಸಂಬಂಧಿಸಿದ ವಿಮಾ ಪಾಲಿಸಿಯ ಮೊತ್ತವನ್ನು ನೀಡಲು ದಾಖಲೆಗಳನ್ನು ಸಂಸ್ಥೆಗೆ ಸಲ್ಲಿಸಿದಾಗ ವಿಮೆ ಮಾಡುವ ಪೂರ್ವದಲ್ಲಿ ಪ್ರಶಾಂತ್ ಅವರಿಗೆ ಬೇರೆ ಆರೋಗ್ಯ ಸಮಸ್ಯೆಗಳಿದ್ದು ಅವುಗಳನ್ನು ಮುಚ್ಚಿಟ್ಟಿರುತ್ತಾರೆಂದು, ಪಾಲಿಸಿದಾರರು ಜೀವಿತಾವಧಿಯಲ್ಲಿ ಕಟ್ಟಿದ ಪ್ರಥಮ ಕಂತಿನ ಹಣ 94,701 ರೂ. ಪಾವತಿಸಿ ವಿಮಾ ಪಾಲಿಸಿಯಲ್ಲಿ ನಮೂದಿಸಿರುವ ಒಟ್ಟು ವಿಮಾ ಮೌಲ್ಯ ಪಾವತಿಸಲು ನಿರಾಕರಿಸಿತು.
ಈ ಬಗ್ಗೆ ಮೃತರ ಪತ್ನಿ ಉಡುಪಿಯ ಗ್ರಾಹಕರ ಆಯೋಗದಲ್ಲಿ ಪರಿಹಾರ ಕೋರಿ ಅರ್ಜಿ ದಾಖಲಿಸಿದರು. ಅರ್ಜಿದಾರರು ಮತ್ತು ವಿಮಾ ಸಂಸ್ಥೆಯವರು ಹಾಜರು ಪಡಿಸಿದ ದಾಖಲೆಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷ ಸುನಿಲ್ ಟಿ. ಮಾಸರೆಡ್ಡಿ ಅವರು ಮತ್ತು ಆಯೋಗದ ಸದಸ್ಯರು ವಿಮೆ ಮಾಡುವ ಪೂರ್ವ
ದಲ್ಲಿ ಪಾಲಿಸಿದಾರರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ ಅನಂತರವೇ ಪಾಲಿಸಿ ನೀಡಬೇಕಿತ್ತು. ಮೃತಪಟ್ಟ ಅನಂತರ ಅವರಿಗೆ ಪಾಲಿಸಿ ಮಾಡುವ ಪೂರ್ವ ದಲ್ಲಿ ಆರೋಗ್ಯ ತೊಂದರೆಗಳಿದೆ ಎಂದು ವಿಮಾ ಸಂಸ್ಥೆ ಹೇಳುವುದು ಸೂಕ್ತ ವಲ್ಲವೆಂದು ಅಭಿಪ್ರಾಯಪಟ್ಟು ಮೃತರ ಪತ್ನಿಗೆ 7,38,420ರೂ.ನೊಂದಿಗೆ 25,000 ರೂ.ಮಾನಸಿಕ ವೇದನೆಗಾಗಿ ಮತ್ತು 10,000ರೂ. ವ್ಯಾಜ್ಯದ ಖರ್ಚಿ ನೊಂದಿಗೆ ನೀಡಬೇಕೆಂದು ಆದೇಶ ನೀಡಿದೆ ಎಂದು ಅರ್ಜಿದಾರರ ಪರ ವಕೀಲ ಎಚ್. ಆನಂದ ಮಡಿವಾಳ ತಿಳಿಸಿದ್ದಾರೆ.