Advertisement

Doping test ನಕಾರ: ಬಾಕ್ಸರ್‌ ಪರ್ವೀನ್‌ ಹೂಡಾಗೆ ನಿಷೇಧ

01:22 AM May 18, 2024 | Team Udayavani |

ಹೊಸದಿಲ್ಲಿ: ಒಂದು ವರ್ಷದಲ್ಲಿ 3 ಬಾರಿ ಉದ್ದೀಪನಾ ಸೇವನೆ ಪರೀಕ್ಷೆಗೆ ಹಾಜರಾಗದ ಕಾರಣ, ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಬಾಕ್ಸರ್‌ ಪರ್ವೀನ್‌ ಹೂಡಾ ಅವರನ್ನು ವಿಶ್ವ ಉದ್ದೀಪನಾ ವಿರೋಧಿ ಸಂಸ್ಥೆ (ವಾಡಾ) ಒಂದು ವರ್ಷ, 5 ತಿಂಗಳ ಕಾಲ ಅಮಾನತುಗೊಳಿಸಿದೆ. ಹೀಗಾಗಿ, ಅವರ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಕೈತಪ್ಪುವ ಸಾಧ್ಯತೆಯಿದೆ.

Advertisement

ಕಳೆದ ಬಾರಿ ಏಷ್ಯನ್‌ ಗೇಮ್ಸ್‌ನ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಒಲಿಂಪಿಕ್ಸ್‌ ಅರ್ಹತೆ ಪಡೆದಿದ್ದ ಪರ್ವೀನ್‌, 2022 ಎಪ್ರಿಲ್‌ನಿಂದ 2023ರ ಮಾರ್ಚ್‌ ವರೆಗೆ ಮೂರು ಬಾರಿ ಉದ್ದೀಪನ ಪರೀಕ್ಷೆಗೆ ಹಾಜರಾಗಿಲ್ಲ. ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪರ್ವೀನ್‌ ಕೋಚ್‌ ಸುಧೀರ್‌ ಹೂಡಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next