Advertisement
ಸೋಮವಾರ ಮಾಗಡಿ ರಸ್ತೆಯ ಸುಮ್ಮನಹಳ್ಳಿ ಸಿಗ್ನಲ್ ಬಳಿ ಇರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, 1946ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಕೇಂದ್ರವನ್ನು ಆರಂಭಿಸಿ, 161 ಎಕರೆ ಮೀಸಲಿಟ್ಟಿದ್ದಾರೆ. ಆಸ್ತಿಯನ್ನು ಭೂಗಳ್ಳರು ಒತ್ತುವರಿ ಮಾಡಿಕೊಳ್ಳಲು ಸಂಚು ರೂಪಿಸುತ್ತಿದ್ದು, ಭೂಗಳ್ಳರ ಪಾಲಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
Related Articles
Advertisement
ಇದೇ ವೇಳೆ ಕೇಂದ್ರದಲ್ಲಿರುವ ಅನ್ನಪೂರ್ಣ ಭೋಜನಾಲಯಕ್ಕೆ ಭೇಟಿ ನೀಡಿ ಅನ್ನ, ಸಾರು, ಮಜ್ಜಿಗೆ ಸವಿದರು. ಬಾಳೆ ತೋಟಕ್ಕೆ ಹೋಗಿ ಬೆಳೆಗಳ ಬಗ್ಗೆ ಮಾಹಿತಿ ಪಡೆದರು.
ಡಿಸಿಎಂ ಕೈ ಹಿಡಿದು ಕಣ್ಣೀರಿಟ್ಟ ವೃದ್ಧೆಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಾಲಿನಲ್ಲಿ ಕುಳಿತಿದ್ದ ಪ್ರತಿಯೊಬ್ಬ ನಿರಾಶ್ರಿತರ ಹೆಸರನ್ನು ಕೇಳುತ್ತಿದ್ದರು. ಈ ವೇಳೆ ಕೇಂದ್ರದಲ್ಲಿರುವ ಬೆಳಗಾವಿ ಜಿಲ್ಲೆಯ ಮಮದಾಪುರ ಗ್ರಾಮದ ಪ್ರಭಾವತಿ ಎಂಬ ವೃದ್ಧೆ ಡಿಸಿಎಂ ಕೈ ಹಿಡಿದು ಕಣ್ಣೀರಿಡುತ್ತಾ, ದಯವಿಟ್ಟು ನಮ್ಮ ಊರಿಗೆ ಕಳಿಸಿ, ನಮ್ಮ ಜನರ ಜತೆ ಬದುಕಬೇಕೆಂಬ ಆಸೆ ಇದೆ ಎಂದರು. ಕೂಡಲೇ ನಿರಾಶ್ರಿತರ ಕೇಂದ್ರದ ಅಧಿಕಾರಿಗಳ ಬಳಿ ವೃದ್ಧೆಯ ಮಾಹಿತಿ ಕೇಳಿ ಬೆಳಗಾವಿಯ ಸದಲಗಾ ಪೊಲೀಸ್ ಠಾಣೆಗೆ ಕರೆ ಮಾಡಿ ವೃದ್ಧೆಯ ಸಂಬಂಧಿಕರ ಬಗ್ಗೆ ಮಾಹಿತಿ ಪಡೆದರು. ವೃದ್ಧೆಯನ್ನು ಶೀಘ್ರವೇ ಊರಿಗೆ ಬಿಟ್ಟು ಬನ್ನಿ ಎಂದು ಕೇಂದ್ರದ ಸಿಬ್ಬಂದಿಗೆ ಸೂಚನೆ ನೀಡಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಮಾಡಲ್ಲ ಎಂದು ಯಾವ ವಿಚಾರವಾಗಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಇದೊಂದು ರಾಜಕೀಯದ ಹೇಳಿಕೆ ಅಷ್ಟೇ. ಜೆಡಿಎಸ್ ಪಕ್ಷದ ಶಾಸಕರು ಆಚೀಚೆ ಹೋಗುತ್ತಿರುವುದಕ್ಕೆ ರೀತಿ ಹೇಳಿರಬಹುದು.
– ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ.