ಬಾಗೇಪಲ್ಲಿ: ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರಿ ನಿವೇಶನಕ್ಕಾಗಿ ಸಲ್ಲಿಸಿರುವ 3 ಸಾವಿರ ನಿರಾಶ್ರಿತರ ಅರ್ಜಿಗಳು 3 ವರ್ಷಗಳಿಂದ ಪುರಸಭೆ ಕಾರ್ಯಾಲಯದಲ್ಲೇ ಧೂಳು ಹಿಡಿಯುತ್ತಿವೆ.
ಬಾಗೇಪಲ್ಲಿ ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ವಾಸವಿರುವ ನಿರಾಶ್ರಿತರಿಗೆ ಉಚಿತ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸುವುದಾಗಿ ಕಳೆದ 5 ವರ್ಷಗಳಿಂದ ಪುರಸಭೆ ಸದಸ್ಯರು ಮತದಾರರಿಗೆ ಭರವಸೆ ನೀಡಿ ಪ್ರತಿ ಬಾರಿಯ ಪುರಸಭೆ ಚುನಾವಣೆ ವೇಳೆ ಪಕ್ಷಗಳ ಅಭ್ಯರ್ಥಿಗಳು ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸುವುದು ಸಾಮಾನ್ಯ ಸಂಗತಿಯಾಗಿದೆ. ಚುನಾವಣೆ ಮುಗಿದ ನಂತರ ಭರವಸೆಗಳನ್ನು ಈಡೇರಿಸಬೇಕೆಂಬ ಸೌಜನ್ಯವೂ ಇಲ್ಲ.
ಅನುಮೋದನೆಗೆ ರವಾನೆ: ಸೂರಿಲ್ಲದೆ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಪಟ್ಟಣ ಹೊರ ವಲಯದ ಯಗಬಂಡ್ಲಕೆರೆ ಗ್ರಾಮದ ಬಳಿಯ ಸರ್ವೇ ನಂ.667 ರಲ್ಲಿ 3.33 ಗುಂಟೆ, ಸರ್ವೆ ನಂ. 102 ರಲ್ಲಿ 4.30 ಗುಂಟೆ ಸೇರಿ ಒಟ್ಟು 8 ಎಕರೆ 23 ಗುಂಟೆ ಸರ್ಕಾರಿ ಜಮೀನನ್ನು 2016-17 ನೇ ಸಾಲಿ ನಲ್ಲಿ ಪುರಸಭೆ ಆಡಳಿತ ಮಂಡಳಿ ಗುರುತಿಸಿದೆ. ಆಶ್ರಯ ಯೋಜನೆ ಅಧ್ಯಕ್ಷ ಶಾಸಕ ಎಸ್.ಎನ್. ಸುಬ್ಟಾರೆಡ್ಡಿ ಅಧ್ಯಕ್ಷತೆಯಲ್ಲಿ ನಗರ ಯೋಜನಾ ಪ್ರಾಧಿಕಾರ ಉಪನಿರ್ದೇಶಕ, ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿಗಳ ಸಭೆ ನಡೆಸಿ ಟೌನ್ ಪ್ಲಾನಿಂಗ್ ನಕ್ಷೆಗಾಗಿ ನಗರ ಯೋಜನಾ ಪ್ರಾಧಿಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಆದರೆ ಇದುವರೆಗೂ ಅರ್ಜಿ ಸಲ್ಲಿಸಿರುವ ಒಬ್ಬ ನಿರಾಶ್ರಿತ ನಿಗೂ ನಿವೇಶನ ನೀಡಲು ಯಾರಿಂದಲೂ ಸಾಧ್ಯವಾಗಿಲ್ಲ.
260 ನಿವೇಶನ ಮಾತ್ರ ನಿರ್ಮಿಸಬಹುದು: ಟೌನ್ ಪ್ಲಾನಿಂಗ್ ನಕ್ಷೆಗೆ ನಗರ ಯೋಜನಾ ಪ್ರಾಧಿಕಾರದ ಅನುಮೋದನೆ ದೊರೆತರೆ 8 ಎಕರೆ 23 ಗುಂಟೆ ಜಮೀನಿನಲ್ಲಿ ಆಟದ ಮೈದಾನ, ರಸ್ತೆ, ಚರಂಡಿ ಹಾಗೂ ಪಾರ್ಕ್‌ಗೆ ಮೀಸಲಿಡುವ ಜಮೀನು ಹೊರತುಪಡಿಸಿದರೆ 260 ನಿವೇಶನ ಮಾತ್ರ ನಿರ್ಮಿಸಬಹುದು.
3 ಸಾವಿರ ಅರ್ಜಿದಾರರು ಈಗಾಗಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಉಳಿದ 2740 ಅರ್ಜಿದಾರರಿಗೆ ಎಲ್ಲಿಂದ ನಿವೇಶನ ಮಂಜೂರು ಮಾಡಲಾಗುತ್ತದೆ ಎನ್ನುವುದೇ ಅಧಿಕಾರಿಗಳಿಗೆ ಬಹು ದೊಡ್ಡ ಸವಾಲು ಆಗಿದೆ. ನಿವೇಶನಗಳ ಸಂಖ್ಯೆ ಕಡಿಮೆ ಇರುವುದರಿಂದ ನಿವೇಶನ ಕೊಡಿಸುವ ಜವಾಬ್ದಾರಿ ನನ್ನದು ಎಂದು ಹೇಳಿ ಅರ್ಜಿದಾರರ ಬಳಿ ಕೆಲ ಚುನಾಯಿತ ಜನಪ್ರತಿನಿಧಿಗಳು ಹಾಗೂ ಏಜೆಂಟರು ಹಣಕಾಸಿನ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಆಶ್ರಯ ಯೋಜನೆ ನಿವೇಶನಕ್ಕಾಗಿ 3 ಸಾವಿರ ಅರ್ಜಿ ಬಂದಿದ್ದು, ಎಲ್ಲಾ ಅರ್ಜಿಗಳನ್ನು ಆಶ್ರಯ ಯೋಜನೆ ಸಾಮಾನ್ಯ ಸಭೆಯಲ್ಲಿ ಸಮಿತಿ ಸದಸ್ಯರು ಪರಿಶೀಲಿಸಿ 1360 ಅರ್ಜಿದಾರರರನ್ನು ಅಯ್ಕೆ ಮಾಡಿ ಅನುಮೋದಿ ಸಲಾಗಿದೆ
.- ವಿ.ಪಂಕಜಾರೆಡ್ಡಿ,ಪುರಸಭೆ ಮುಖ್ಯಾಕಾರಿ, ಬಾಗೇಪಲ್ಲಿ