Advertisement

ರೆಫ್ರಿಜರೇಟರ್‌ ನಿರ್ವಹಣೆ ಅತೀ ಮುಖ್ಯ

11:12 PM Jul 19, 2019 | mahesh |

ಮನೆ ಸುಂದರವಾಗಿದ್ದರಷ್ಟೆ ಸಾಲದು. ಮನೆಯೊಳಗಿರುವ ವಸ್ತುಗಳನ್ನು ಅಷ್ಟೇ ಸುಂದರವಾಗಿರುವಂತೆ ನೋಡಿಕೊಳ್ಳವುದು ಅಗತ್ಯ. ಪ್ರತಿಯೊಂದು ವಸ್ತುಗಳ ನಿರ್ವಹಣೆಯತ್ತಲೂ ಗಮನ ಹರಿಸಬೇಕು. ಮನೆಯೊಳಗಿರುವ ವಸ್ತುಗಳ ಉತ್ತಮ ನಿರ್ವಹಣೆಯಿಂದ ಅದು ಹೆಚ್ಚು ಬಾಳಿಕೆ ಬರುತ್ತದೆ.

Advertisement

ಎಲ್ಲರ ಮನೆಗಳಲ್ಲಿ ರೆಫ್ರಿಜರೇಟರ್‌ಗಳು ಸಾಮಾನ್ಯವಾಗಿದ್ದು, ಅವುಗಳ ನಿರ್ವಹಣೆ ಹೆಚ್ಚು ಮಹತ್ವದ್ದಾಗಿದೆ. ಸರಿಯಾದ ನಿರ್ವಹಣೆಯಿಲ್ಲದ ರೆಫ್ರಿಜರೇಟರ್‌ಗಳು ಬಹು ಬೇಗನೆ ಬಾಳಿಕೆ ಕಳೆದುಕೊಳ್ಳುತ್ತದೆ.

ಒಳಗಿನ ಸ್ವಚ್ಛತೆ ಹೀಗೆ ಮಾಡಿ
ರೆಫ್ರಿಜರೇಟರ್‌ನ ಒಳಗಡೆಯ ಸ್ವಚ್ಛತೆ ಹೆಚ್ಚು ಮಹತ್ವದ್ದಾಗಿದೆ. ಇಲ್ಲದೇ ಹೋದರೆ ನೀರು ತುಂಬಿ ರೆಫ್ರಿಜರೇಟರ್‌ ಬೇಗ ಹಾಳಾಗುವ ಸಾಧ್ಯತೆಗಳಿವೆ. ರೆಫ್ರಿಜರೇಟರ್‌ನಲ್ಲಿ ಹೆಚ್ಚು ತುಂಬಿರುವಂತೆ ನೋಡಿಕೊಳ್ಳುವುದು ಅಗತ್ಯ. ಇದರಿಂದ ಕೋಲ್ಡ್ ಟೆಂಪರೇಚರ್‌ ಹೆಚ್ಚು ಉಳಿದುಕೊಳ್ಳುತ್ತದೆ. ಆದಷ್ಟು ಕೂಲಿಂಗ್‌ ವೆಂಟ್‌ಗಳನ್ನು ತೆರೆದಿರುವಂತೆ ನೋಡಿಕೊಳ್ಳುವುದರ ಜತೆಗೆ ರೆಫ್ರಿಜರೇಟರ್‌ನೊಳಗಡೆ ಕಡಿಮೆ ತರಕಾರಿ ಹಣ್ಣುಗಳಿದ್ದರೆ ನೀರನ್ನು ತುಂಬಿಡುವುದು ಉತ್ತಮ. ರೆಫ್ರಿಜರೇಟರ್‌ ಅನ್ನು ಖಾಲಿಯಾಗಿ ಇಡುವುದರಿಂದ ಅದು ಬೇಗ ಹಾಳಾಗುವ ಸಾಧ್ಯತೆ ಇದೆ. ಸಾಧ್ಯವಾದಷ್ಟು ರೆಫ್ರಿಜರೇಟರ್‌ ತುಂಬಿರುವಂತೆ ನೋಡಿಕೊಳ್ಳಿ.

ರೆಫ್ರಿಜರೇಟರ್‌ ಅನ್ನು ಸಾಧ್ಯವಾದಷ್ಟು 2 ದಿನಗಳಿಗೊಮ್ಮೆ ಸ್ವಚ್ಛಗೊಳಿಸುವುದು ಉತ್ತಮ. ಕೊಳೆತ ತರಕಾರಿ, ಹಣ್ಣುಗಳನ್ನು ರೆಫ್ರಿಜರೇಟರ್‌ನಲ್ಲಿಡುವುದರಿಂದ ಒಳಗಡೆ ನೀರು ತುಂಬಿ ಹಾಳಾಗುತ್ತದೆ. ಆದ್ದರಿಂದ ಸ್ವಚ್ಛಗೊಳಿಸುವ ಅಗತ್ಯ ಇದೆ.

ಅಗತ್ಯಕ್ಕಿಂತ ಹೆಚ್ಚು ಟೆಂಪರೇಚರ್‌ ಕೋಲ್ಡ್ ಇಡುವುದು ಕೆಟ್ಟ ಯೋಚನೆ. ಸರಿಯಾದ ಟೆಂಪರೇಚರ್‌ ಸೆಟ್ ಮಾಡಬೇಕು. ಜತೆಗೆ ರೆಫ್ರಿಜರೇಟರ್‌ನ ಬಾಗಿಲು ತೆರೆದಿಡುವುದರಿಂದಲೂ ತೊಂದರೆಯಿದೆ.

Advertisement

ನೀರು, ಜ್ಯೂಸ್‌ಗಳನ್ನು ಇನ್ನರ್‌ ಡೋರ್‌ನಲ್ಲಿಡುವುದು ಉತ್ತಮ.

ಜತೆಗೆ ಅತಿ ಬಿಸಿಯಾದ ಆಹಾರವನ್ನು ರೆಫ್ರಿಜರೇಟರ್‌ನಲ್ಲಿಡುವುದು ಒಳ್ಳೆಯದಲ್ಲ.

ರೆಫ್ರಿಜರೇಟರ್‌ಗಳು ಹೆಚ್ಚು ಕಾಲ ಬಾಳಿಕೆ ಬರಬೇಕಿದ್ದರೆ ಅದರ ಉತ್ತಮ ನಿರ್ವಹಣೆ ಮಾಡುವುದು ಅಗತ್ಯ. ಎರಡು ದಿನಗಳಿಗೊಮ್ಮೆಯಾದರೂ ಫ್ರಿಡ್ಜ್ನೊಳಗಿರುವ ವಸ್ತಗಳನ್ನು ಸ್ವಚ್ಛಗೊಳಿಸುತ್ತಿರುವುದು ಉತ್ತಮ.

•ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next