Advertisement

ಜಿಎಸ್‌ಟಿ ಅಭಿಯಾನದಿಂದ ಹಿಂದೆ ಸರಿಯಿರಿ: ಅಮಿತಾಭ್‌ಗೆ ಕಾಂಗ್ರೆಸ್‌

07:56 PM Jun 21, 2017 | udayavani editorial |

ಮುಂಬಯಿ : ‘ವ್ಯಾಪಾರಿ ವರ್ಗದವರಿಂದ ಮುಂದೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಈಗಲೇ ಜಿಎಸ್‌ಟಿ ಪ್ರಚಾರಾಭಿಯಾನದಿಂದ ದೂರ ಸರಿಯಿರಿ’ ಎಂದು ಬಾಲಿವುಡ್‌ನ‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ಗೆ ಹೇಳುವ ಮೂಲಕ ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.

Advertisement

“ಜಿಎಸ್‌ಟಿ ಮೂಲತಃ ಕಾಂಗ್ರೆಸ್‌ನ ಯೋಜನೆಯಾಗಿತ್ತು. ಬಿಜೆಪಿ ವಿರೋಧ ಪಕ್ಷದಲ್ಲಿದ್ದಷ್ಟು  ಕಾಲವೂ ಅದು ಜಿಎಸ್‌ಟಿ ಯನ್ನು ವಿರೋಧಿಸುತ್ತಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮೂಲ ಜಿಎಸ್‌ಟಿಯನ್ನು ಸಡಿಲುಗೊಳಿಸಿ ಜಾರಿಗೆ ತರಲು ಮುಂದಾಯಿತು; ಇದು ನಮಗೆ ಸ್ವೀಕಾರಾರ್ಹವಾಗಿರಲಿಲ್ಲ’ ಎಂದು ನಿರುಪಮ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

Lಇಡಿಯ ದೇಶಕ್ಕೆ ಏಕರೂಪದ ತೆರಿಗೆಯಾಗಿ ಜಿಎಸ್‌ಟಿಯನ್ನು ತರಲು ಕಾಂಗ್ರೆಸ್‌ ಬಯಸಿತ್ತು. ಆದರೆ ಬಿಜೆಪಿ ಅದನ್ನು ನಾಲ್ಕು ಹಂತಗಳ ತೆರಿಗೆ ಮತ್ತು ಮೂರು ವಿವಿಧ ಬಗೆಯ ಉಪ ನಮೂನೆಯೊಂದಿಗೆ ಜಾರಿಗೆ ತರುತ್ತಿದೆ’ ಎಂದು ನಿರುಪಮ್‌ ಆಕ್ಷೇಪಿಸಿದರು. 

‘ಬಿಜೆಪಿ ಜಾರಿಗೊಳಿಸುತ್ತಿರುವ ರೂಪದಲ್ಲಿ ಜಿಎಸ್‌ಟಿ ಅತ್ಯಂತ ಸಂಕೀರ್ಣವಾಗಿದ್ದು ನಾವದನ್ನು ವಿರೋದಿಸುತ್ತಿದ್ದೆವು; ಆದರೆ ನಮ್ಮ ಮೇಲೆ ದೇಶದ ಆರ್ಥಿಕಾಭಿವೃದ್ಧಿ ಅಡ್ಡಗಾಲು ಇಡುತ್ತಿರುವ ಆರೋಪ ಮಾಡಲಾಯಿತು; ಅಂತಿಮವಾಗಿ ನಾವು ಜಿಎಸ್‌ಟಿ ಪಾಸಾಗುವುದಕ್ಕೆ ಸಹಕರಿಸಿದೆವು’ ಎಂದು ನಿರುಪಮ್‌ ಹೇಳಿದರು. 

‘ಜಿಎಸ್‌ಟಿ ಮುಂಬರುವ ದಿನಗಳಲ್ಲಿ ವಾಪಾರಿ ವರ್ಗದವರ ಆಕ್ರೋಶಕ್ಕೆ ಗುರಿಯಾಗುವುದು ನಿಶ್ಚಿತ; ಹಾಗಾಗಿ ಅವರ ವಿರೋಧವನ್ನು ಕಟ್ಟಿಕೊಳ್ಳದಿರುವುದೇ ಲೇಸು ಮತ್ತು ಬಿಜೆಪಿಯ ಮೂರ್ಖತನದಲ್ಲಿ ನೀವೂ ಭಾಗಿಯಾಗಬಾರದು ಎಂಬ ಕಾರಣಕ್ಕೆ ನಾನು ಹೇಳುತ್ತಿದ್ದೇನೆ – ನೀವು (ಅಮಿತಾಭ್‌ ಬಚ್ಚನ್‌) ಈಗಿಂದಲೇ ಜಿಎಸ್‌ಟಿ ಪ್ರಚಾರಾಭಿಯಾನದಿಂದ ದೂರ ಸರಿಯಿರಿ; ನೀವು ಎಲ್ಲರಿಗೂ ತಿಳಿದಿರುವ ಮತ್ತು ಅತ್ಯಂತ ಘನತೆವೆತ್ತ ವ್ಯಕ್ತಿ; ಮೇಲಾಗಿ ನಾನು ನಿಮ್ಮ ಅಭಿಮಾನಿ; ವ್ಯಾಪಾರಿ ವರ್ಗದವರ ಆಕ್ರೋಶಕ್ಕೆ ಗುರಿಯಾಗಬೇಡಿರೆಂದು ಹೇಳುತ್ತಿದ್ದೇವೆ. ‘ಎಂದು ಸಂಜಯ್‌ ನಿರುಪಮ್‌ ಅಮಿತಾಭ್‌ ಬಚ್ಚನ್‌ಗೆ ಎಚ್ಚರಿಕೆ ನೀಡಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next