ಚನ್ನಪಟ್ಟಣ: ಪ್ರವಾಸೋದ್ಯಮದಲ್ಲಿ ಅತಿ ಹೆಚ್ಚು ಉದ್ಯೋಗ ನಿರ್ಮಾಣ ಸಾಧ್ಯ ಎಂಬ ಕಲ್ಪನೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗಿದ್ದು ಈ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಪಟ್ಟಣದಲ್ಲಿ ಗೊಂಬೆ ಕಾರ್ಖಾನೆಗಳಿಗೆ ಸೋಮವಾರ ಭೇಟಿ ನೀಡಿ ಮಾಲೀಕರು ಮತ್ತು ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ವೀಸಾ ವ್ಯವಸ್ಥೆಯಲ್ಲಿ ಸುಧಾರಣೆ ಆದ ನಂತರ ಪ್ರವಾಸಿಗರ ಸಂಖ್ಯೆಶೇ.50 ಹೆಚ್ಚಿದೆ. ಕೌಶಲ್ಯ ಇರುವ ಜನರು ಹಾಗೂ ಪ್ರವಾಸಿಗರ ನಡುವೆ ಒಂದು ವೇದಿಕೆ ಸೃಷ್ಟಿಸಲಾಗುವುದು ಎಂದರು.
ಇಲ್ಲಿ ಕರಕುಶಲ ಗ್ರಾಮ ನಿರ್ಮಾಣವಾಗಿದೆ. ಉತ್ಪಾದನೆಯೂ ನಡೆಯುತ್ತಿದೆ ಪ್ರದರ್ಶನ ಹಾಗೂ ಮಾರಾಟ ಹೆಚ್ಚಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಒತ್ತು ನೀಡಲಿದೆ. ಮುಖ್ಯವಾಗಿ ನಮ್ಮ ಸಂಸ್ಕ ತಿಯನ್ನು ಮನೆಮನೆಗೆ ತಲುಪಿಸಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಸಂಸ್ಕ ೃತಿ ಉಳಿಸುವುದು ನಮ್ಮ ಕರ್ತವ್ಯ ಎಂದರು.
ಜಿಎಸ್ಟಿಯಿಂದ ತೊಂದರೆ ಆಗಿಲ್ಲ: ಜಿಎಸ್‌ಟಿ ಜಾರಿ ನಂತರ ಹಲವು ಸಣ್ಣ ಗೊಂಬೆಕಾರ್ಖಾನೆಗಳು ಮುಚ್ಚಿವೆ ಎಂಬ ಆರೋಪದಬಗ್ಗೆ ಪ್ರತಿಕ್ರಿಯಿಸಿದ ಅವರು, ವ್ಯಾಟ್ ವ್ಯವಸ್ಥೆ ಇದ್ದಾಗ ಶೇ.35- 80 ತೆರಿಗೆ ಇತ್ತು. ಈಗನೇರವಾಗಿ ತೆರಿಗೆ ಪಾವತಿ ಆಗುತ್ತಿದೆ. ಇದು ಸರಳ ದೇಶದುದ್ದಕ್ಕೂ ಈಗ ಮಾರುಕಟ್ಟೆ ಸೃಷ್ಟಿಯಾಗಿದೆ. ಹಿಂದೆ ಕರ್ನಾಟಕದ ವ್ಯಾಪ್ತಿಯಿಂದ ಹೊರಗೆ ಬಂದ ಕೂಡಲೇ ತೆರಿಗೆಪಾವತಿಸಬೇಕಿತ್ತು. ಈಗ ಅಂಥ ವಾತಾವರಣ ಇಲ್ಲ. ಇದು ಕ್ರಾಂತಿಕಾರಿ ತೆರಿಗೆ ಸುಧಾರಣೆ.ಬದಲಾವಣೆ. ಪ್ರಸ್ತುತ ಒಂದು ದೇಶ ಒಂದು ತೆರಿಗೆ ವ್ಯವಸ್ಥೆ ಇದೆ ಎಂದರು.
ಸಮಾಜ ಒಡೆಯುವವರು ನಾವಲ್ಲ: ಕಾಂಗ್ರೆಸ್ ಈಗ ಯಾರಿಗೂ ಬೇಡವಾದ ಪಕ್ಷ. ಸಂಪೂರ್ಣ ತಿರಸ್ಕಾರಕ್ಕೊಳಗಾಗಿದೆ. ಪ್ರಗತಿಪರ ಆಡಳಿತವನ್ನು ಅದು ಮಾಡಿಯೇ ಇಲ್ಲ. ಸಮಾಜ ಒಡೆಯುವುದು, ವಿಭಾಗ ಮಾಡೋದು, ಧರ್ಮದ ಮೇಲೆ, ಜಾತಿಯ ಮೇಲೆ ತುಷ್ಟೀಕರಣ ಮಾಡುವುದು, ಒಬ್ಬರ ಮೇಲೊಬ್ಬರನ್ನ ಎತ್ತಿಕಟ್ಟುವಂತಹ ಕೆಲಸಗಳನ್ನೇ ಮಾಡಿಕೊಂಡು ಬಂದಿದೆ. ಸಾಧನೆ ಮತ್ತು ಆಡಳಿತದ ಆಧಾರದ ಮೇಲೆ ಮತ ಕೇಳುವುದನ್ನು ಬಿಟ್ಟು ಬರೀ ಸಮಾಜ ಒಡೆಯುವ ಕೆಲಸದಲ್ಲೇ ಆ ಪಕ್ಷ ತೊಡಗಿದೆ ಎಂದು ಟೀಕಿಸಿದರು.
ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ಅವರಿಗೆ ಬಿಜೆಪಿ ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ಇದೆ. ಅವರು ನಮ್ಮ ಪಕ್ಷದಲ್ಲೇ ಉನ್ನತ ಸ್ಥಾನದಲ್ಲಿರುತ್ತಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗಲ್ಲ ಎಂದು ಪ್ರತಿಕ್ರಿಯಿಸಿದರು. ಯೋಗೇಶ್ವರ್ ಯಾವತ್ತೂ ಹಿಂದೆ ಸರಿಯುವ ವ್ಯಕ್ತಿಯಲ್ಲ, ಅವರು ಯಾವಾಗಲೂ ಮುಂದೆ ಇರುವಂಥವರು. ಅವರಿಗೆ ಒಳ್ಳೆಯ ಭವಿಷ್ಯವಿದೆ. ಮುಂದೆ ಒಳ್ಳೆಯ ನಾಯಕ ರಾಗುತ್ತಾರೆ, ದೊಡ್ಡ ಮಟ್ಟಕ್ಕೆ ಹೋಗುತ್ತಾರೆ ಎಂದು ಹೇಳಿದರು. ಜಿಲ್ಲಾ ಹಾಗೂ ತಾಲೂಕು ಬಿಜೆಪಿಯ ವಿವಿಧ ಘಟಕಗಳ ಅಧ್ಯಕ್ಷರು, ಪದಾಕಾರಿಗಳು, ಬೊಂಬೆ ಕಾರ್ಖಾನೆಗಳ ಮಾಲೀಕರು, ಸಿಬ್ಬಂದಿ ಹಾಜರಿದ್ದರು.