Advertisement

ಕಂದಾಯ ಬಾಕಿ ವಸೂಲಿಗೆ ಕ್ರಮಕ್ಕೆ ಸೂಚನೆ

12:05 PM Sep 20, 2017 | Team Udayavani |

ಹುಣಸೂರು: ನಗರ ವ್ಯಾಪ್ತಿಯಲ್ಲಿನ ಸರ್ಕಾರಿ ಜಾಗದ ಸರ್ವೆ, ಅಕ್ರಮ ಸಕ್ರಮಕ್ಕೆ ತನಿಕೆ, ಲೇಜೌಟ್‌ ನಿರ್ಮಾಣಕ್ಕೆ ಲಂಚ, ಕಂದಾಯ ವಸೂಲಿ ಸೇರಿದಂತೆ ಅನೇಕ ಸಂಗತಿಗಳ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಲ್ಲಿ ಪರಸ್ಪರ ಚರ್ಚೆ, ವಾಗ್ವಾದ ನಡೆಯಿತು.

Advertisement

ಸೋಮವಾರದಂದು ಅಧ್ಯಕ್ಷ ಕೆ.ಲಕ್ಷ್ಮಣ್‌ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಮಹದೇವ್‌ ಮಾತನಾಡಿ ನಗರದಲ್ಲಿ ಸಾಕಷ್ಟು ಕಂದಾಯ ಬಾಕಿ ಬರಬೇಕಿದ್ದು ವಸೂಲಾತಿಗೇಕೆ ಕ್ರಮವಹಿಸಿಲ್ಲ, ಮಳಿಗೆಗಳನ್ನು ಮರು ಹರಾಜು ಹಾಕಲು ಹಿಂದಿನ ಸಭೆಯಲ್ಲಿ ತೀರ್ಮಾನಿಸಿದ್ದರೂ ಹರಾಜು ಹಾಕಲು ಹಿಂದೇಟು ಹಾಕುತ್ತಿದ್ದೀರಾ, ಹಾಲಿ ಇರುವವರನ್ನು ಮುಂದುವರಿಸುವುದಾದಲ್ಲಿ ಮಾಲಿಕರುಗಳನ್ನು ಸಭೆಗೆ ಕರೆಸಿ, ಹೆಚ್ಚಿನ ಬಾಡಿಗೆ ವಿಧಿಸಿ ಎಂದರು.

ಈ ಪ್ರಶ್ನೆಗೆ ಕಂದಾಯಾಧಿಕಾರಿ ಜಯಶೀಲ ಪ್ರತಿಕ್ರಯಿಸಿ, ಹೊಸಮಳಿಗೆಗಳಲ್ಲಿ ಮೂರು ಮಾತ್ರ ಹರಾಜಾಗಿದೆ, ಹಳೇ ಮಳಿಗೆದಾರರಿಗೆ ಈಗಾಗಲೆ ನೋಟಿಸ್‌ ನೀಡಲಾಗಿದೆ, ಮಳಿಗೆದಾರರ ಸಭೆ ಕರೆಯಲಾಗುವುದು ಕ್ರಮ ಜರುಗಿಸಲಾಗುವುದು ಎಂದರು.

ಲಂಚ ಆರೋಪ: ಸದಸ್ಯ ವೆಂಕಟೇಶ್‌, ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಫಾರಂ 3 ನೀಡಲು ಗುಮಾಸ್ತ ಮೋಹನ್‌ ಎಂಬಾತ ಸತಾಯಿಸುತ್ತಿದ್ದು ಬದಲಾಯಿಸಿ, ಅಕ್ರಮವಾಗಿ ಮನೆ ನಿರ್ಮಾಣದಲ್ಲಿ ತೊಡಗಿರುವವರಿಗೆ ಲಕ್ಷದವರೆಗೆ ಲಂಚ ಪಡೆದು ಖಾತೆ ಮಾಡಿಕೊಟ್ಟಿದ್ದೀರಲ್ಲ ಇದು ಸರಿಯಾ? ಎಂದು ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದರು.

ಸರ್ಕಾರಿ ಜಾಗ ಮಾರಾಟ ತಡೆಯಿರಿ: 22ನೇ ವಾರ್ಡ್‌ ಸದಸ್ಯ ಶ್ರೀನಿವಾಸ್‌ ಸಣ್ಣ ಒಳಚರಂಡಿ ಸಂಪರ್ಕ ಕಲ್ಪಿಸಲು ಸಾಧ್ಯವಾಗದಿದ್ದ ಮೇಲೆ ಇಲ್ಲೇಕಿರಬೇಕು, ಕಳೆದ ಮೂರು ತಿಂಗಳಿಂದ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕೆಲಸವಾಗುತ್ತಿಲ್ಲ, ಈ ಬಗ್ಗೆ ತಕ್ಷಣವೇ ಕ್ರಮ ಕೆಗೊಳ್ಳಬೇಕೆಂದು ತಾಕೀತು ಮಾಡಿದರೆ, ಸದಸ್ಯ ಸತೀಶ್‌ ಕುಮಾರ್‌ ನಗರಸಭೆ ವ್ಯಾಪ್ತಿಯ ಸರಕಾರಿ ಜಾಗ ಸರ್ವೆ ಮಾಡಿ ಫ‌ಲಕಳವಡಿಸಿ, ಅಕ್ರಮ ಖಾತೆ ಪತ್ತೆಮಾಡಿ, ಕೆಲವರು ಸರ್ಕಾರಿ ನಿವೇಶನವನ್ನೇ ಖಾತೆ ಮಾಡಿಸಿ ಮಾರಾಟ ಮಾಡುತ್ತಿದ್ದಾರೆ, ಸರ್ಕಾರಿ ಓಣಿ, ನಗರ ವ್ಯಾಪ್ತಿಯ ಕೆರೆ, ಪಾರ್ಕ್‌ ಉಳಿಸಲು ಕ್ರಮ ಕೆಗೊಳ್ಳಿರೆಂದರು.

Advertisement

ನನಗೂ ಸಾಕಾಗಿದೆ: ಹಜರತ್‌ಜಾನ್‌ ಮಾತನಾಡಿ ಯಾರದೋ ಮರ್ಜಿಗೆ ಕೆಲಸ ಮಾಡಬೇಡಿ, ಶುಕ್ರವಾರ ಕೋರಂ ಇಲ್ಲವೆಂದು ಸಭೆ ಮುಂದೂಡಿದ್ದೀರಾ, ಕೆಲವರೊಂದಿಗೆ ಸೇರಿ ಹೊರಗೆ ಸಭೆ ನಡೆಸಿದ್ದೀರಾ, ಅಧಿಕಾರಿಗಳು ಭಯದ ವಾತಾವರಣದಲಿ ಕೆಲಸ ಮಾಡುವಂತಾಗಿದೆ. ನನಗೂ ಸಾಕಾಗಿದೆ ಇನ್ನು ಮುಂದೆ ನಾನು ಸಭೆಗೆ ಬರುವುದಿಲ್ಲ ಎಂದರು. ಎಲ್ಲರೂ ಸಭೆ ಬರುವಂತೆ ಒತ್ತಾಯಿಸಿ ಸಮಾಧಾನಪಡಿಸಿದರು.

ನಗರಸಭೆಯಲ್ಲಿ 27 ಸದಸ್ಯರು ಹಾಗೂ 5 ಮಂದಿ ನಾಮನಿರ್ದೇಶಿತ ಸದಸ್ಯರುಗಳಿದ್ದು, ಇತ್ತೀಚೆಗೆ ಪûಾಂತರ ನಿಷೇಧ ಕಾಯ್ದೆಯಡಿಯಲ್ಲಿ ಐವರ ಸದಸ್ಯತ್ವ ಅನರ್ಹಗೊಂಡಿದ್ದರೆ, ಐವರು ಸದಸ್ಯರು ಬಹಿಷ್ಕರಿಸಿ ಹೊರನಡೆದಿದ್ದರಿಂದಾಗಿ ಮೂವರು ನಾಮನಿರ್ದೇಶಿತರು ಸೇರಿ 17 ಮಂದಿ ಹಾಜರಿದ್ದರು. ಐವರು ಗೈರುಹಾಜರಾಗಿದ್ದರು.

ಸದಸ್ಯರಾದ ಕ್ಸೇವಿಯರ್‌, ಮಂಜುಳ, ಸೌರಭ, ಜಾಕೀರ್‌ ಹುಸೇನ್‌, ಕೆ.ನರಸಯ್ಯ, ಷಣ್ಮುಖ, ಛಾಯಾದೇವಿ, ವಹಿದಾಬಾನು, ದೇವರಾಜ್‌, ಪಿ.ಕೆ.ಗುಲಾ°ಜ್‌, ಆರ್‌. ವೆಂಕಟೇಶ್‌, ನಗರಸಭೆ ವ್ಯವಸ್ಥಾಪಕ ಪ್ರಕಾಶ್‌, ಲೆಕ್ಕಾಧಿಕಾರಿ ಶ್ರೀನಿವಾಸ್‌ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next