Advertisement

ಅಕ್ರಮ ಗೋವು ಸಾಗಾಣಿಕೆಗೆ ಕಡಿವಾಣ ಅಗತ್ಯ: ಸುದರ್ಶನ

12:21 AM Jul 04, 2019 | Team Udayavani |

ಮೂಡುಬಿದಿರೆ: ಅಕ್ರಮವಾಗಿ ನಡೆಯುತ್ತಿರುವ ಗೋವುಗಳ ಹತ್ಯೆ, ಕಳ್ಳತನ, ಅಕ್ರಮ ಸಾಗಾಟ ಪ್ರಕರಣಗಳು ಮತ್ತು ಜಿಲ್ಲೆಯಲ್ಲಿರುವ ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತ್ತಾಯಿಸಿ ವಿಶ್ವಹಿಂದೂ ಪರಿಷತ್‌, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಯಿತು.

Advertisement

ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ. ಮಾತನಾಡಿ, ಅಕ್ರಮ ಗೋವು ಸಾಗಣಿಕೆಯನ್ನು ಪೊಲೀಸರು ತಡೆಯದಿರುವುದರಿಂದ ಯುವಕರು ಈ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಅಕ್ರಮ ಗೋವು ಸಾಗಾಟ, ಹತ್ಯೆ ಮೂಲಕ ಜಿಲ್ಲೆಯ ಶಾಂತಿಯನ್ನು ಕದಡುತ್ತಿದ್ದು ಈ ಅನ್ಯಾಯವನು ತಡಯಬೇಕಿದೆ ಎಂದರು.

ವಿಶ್ವ ಹಿಂದೂ ಪರಿಷತ್‌ ಮೂಡುಬಿದಿರೆ ಪ್ರಖಂಡದ ಕಾರ್ಯಾಧ್ಯಕ್ಷ ಕೆ.ಶ್ಯಾಮ್‌ ಹೆಗ್ಡೆ, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಪ್ರಸಾದ್‌ಕುಮಾರ್‌, ಮಾಜಿ ಸದಸ್ಯ ಲಕ್ಷ್ಮಣ ಪೂಜಾರಿ, ಭಾಸ್ಕರ ಆಚಾರ್ಯ, ಶ್ರೀನಾಥ್‌ ಸುವರ್ಣ, ಶಾಂತರಾಮ ಕುಡ್ವ , ಅಭಿಲಾಷ್‌ ಅರ್ಜುನಾಪುರ, ಸುನಿಲ್ ಇರುವೈಲ್, ಶರತ್‌ ಕುಮಾರ್‌, ಅಮರ್‌ಕೋಟೆ ಹಾಗೂ ಹಿಂದೂ ಕಾರ್ಯಕರ್ತರು ಸಹಿತ ಮೊದಲಾದವರು ಪಾಲ್ಗೊಂಡಿದ್ದರು.

ಮೋಟಾರು ಕಾಯ್ದೆಯಡಿಯಲ್ಲಿ ಯಾವುದೇ ಒಂದು ಪ್ರಾಣಿಯನ್ನು ಸಾಗಾಟ ಮಾಡುವ ಮೊದಲು ಆರ್‌ಟಿಒನಲ್ಲಿ ವಿಶೇಷವಾಗಿ ನೋಂದಾಣಿ ಮಾಡಬೇಕು. ಕಾನೂನುಬಾಹಿರವಾಗಿ ವಾಹನದಲ್ಲಿ ಪ್ರಾಣಿಯನ್ನು ಸಾಗಿಸುವಾಗ ಕಾನೂನು ರೀತಿಯಲ್ಲಿ ಮುಟ್ಟುಗೋಲು ಮಾಡುವ ಅವಕಾಶ ಪೊಲೀಸರಿಗಿದೆ. ಆದರೆ ಜಿಲ್ಲೆಯಲ್ಲಿ ಯಾವುದೇ ವಾಹನವು ಪ್ರಾಣಿಸಾಗಾಟಕ್ಕಾಗಿ ನೋಂದಾಣಿ ಹೊಂದಿಲ್ಲ. ಪೊಲೀಸ್‌ ಇಲಾಖೆಯು ಕೂಡ ಕಾಯ್ದೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸುದರ್ಶನ ಆರೋಪಿಸಿದರು.

ನೋಂದಣಿ ಹೊಂದಿದ ಪ್ರಾಣಿ ಸಾಗಾಟ ವಾಹನಗಳಿಲ್ಲ
ಮೋಟಾರು ಕಾಯ್ದೆಯಡಿಯಲ್ಲಿ ಯಾವುದೇ ಒಂದು ಪ್ರಾಣಿಯನ್ನು ಸಾಗಾಟ ಮಾಡುವ ಮೊದಲು ಆರ್‌ಟಿಒನಲ್ಲಿ ವಿಶೇಷವಾಗಿ ನೋಂದಾಣಿ ಮಾಡಬೇಕು. ಕಾನೂನುಬಾಹಿರವಾಗಿ ವಾಹನದಲ್ಲಿ ಪ್ರಾಣಿಯನ್ನು ಸಾಗಿಸುವಾಗ ಕಾನೂನು ರೀತಿಯಲ್ಲಿ ಮುಟ್ಟುಗೋಲು ಮಾಡುವ ಅವಕಾಶ ಪೊಲೀಸರಿಗಿದೆ. ಆದರೆ ಜಿಲ್ಲೆಯಲ್ಲಿ ಯಾವುದೇ ವಾಹನವು ಪ್ರಾಣಿಸಾಗಾಟಕ್ಕಾಗಿ ನೋಂದಾಣಿ ಹೊಂದಿಲ್ಲ. ಪೊಲೀಸ್‌ ಇಲಾಖೆಯು ಕೂಡ ಕಾಯ್ದೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸುದರ್ಶನ ಆರೋಪಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next