Advertisement
ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡ ಪ್ರವೀಣ್ ಸೂದ್ ಅವರು ಸೈಬರ್ ಅಪರಾಧಗಳಿಗೆ ಕಡಿವಾಣ, ಅಕ್ರಮ ವಲಸಿಗರಿಗೆ ಕಡಿವಾಣ, ಭಯೋತ್ಪಾದಕ ಚಟುವಟಿ ಕೆಗಳನ್ನು ಇಲ್ಲದಿರುವುಂತೆ ಮಾಡುವುದು ಸೇರಿದಂತೆ ಹಲವು ತಮ್ಮ ಕಾರ್ಯ ಯೋಜನೆಗಳ ಬಗ್ಗೆ” ಮಾಹಿತಿ ಹಂಚಿಕೊಂಡಿದ್ದಾರೆ.
Related Articles
Advertisement
ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಗೆ ಒಂದು ಲಕ್ಷ ಪೊಲೀಸ್ ಸಿಬ್ಬಂದಿ ಇದ್ದೇವೆ. ಹೀಗಾಗಿ ಇರುವ ಪೊಲೀಸ್ ಬಲವನ್ನು ಬಳಸಿಕೊಂಡು ಅದರ ಜತೆಗೆ ನಾಗರೀಕರಿಗೆ ಪೊಲೀಸ್ ಸೇವೆ ತ್ವರಿತಗತಿಯಲ್ಲಿ, ಪರಿಣಾಮಕಾರಿಯಾಗಿ ಸಿಗುವ ನಿಟ್ಟಿನಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕಿದೆ. ನಾಗರಿಕರು ನೇರವಾಗಿ ಇಲಾಖೆಯ ಜತೆ ಸಂಪರ್ಕವಿರಬಹುದಾದ ಕೆಲವು ತಾಂತ್ರಿಕ ಯೋಜನೆಗಳು ಮನಸ್ಸಿನಲ್ಲಿದ್ದು ಅವುಗಳನ್ನು ಅಧಿಕಾರಿಗಳ ಜತೆ ಚರ್ಚಿಸಿ ಜಾರಿಗೊಳಿಸುತ್ತೇನೆ.
ರಾಜ್ಯದಲ್ಲಿ ಅಕ್ರಮ ವಲಸಿಗರಿಗೆ ಕಡಿವಾಣಕ್ಕೆ ನಿಮ್ಮ ಯೋಜನೆ ಏನು?:
ರಾಜ್ಯ ಹಾಗೂ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಪತ್ತೆ ಹಾಗೂ ಮುಂದಿನ ಕಾನೂನು ಕ್ರಮಗಳ ಕುರಿತು ಕ್ರಮ ವಹಿಸಬೇಕಿದೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಗೃಹಸಚಿವರ ಜತೆ ಸಭೆ ನಡೆಸಿ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇನೆ. ಸೈಬರ್ ಅಪರಾಧ ತಡೆಗೆ ಕ್ರಮ ಏನು? ಪ್ರಸ್ತುತ ನಾಗರಿಕರು ಎದುರಿಸುತ್ರಿರುವ ಕಠಿಣ ಅಪರಾಧ ಇದಾಗಿದೆ. ಈಗಾಗಲೇ ಸಿಐಡಿಯ ಡಿಜಿ ಆಗಿದ್ದಾಗ ಸೈಬರ್ ಕ್ರೈಂ ಕಡಿವಾಣಕ್ಕೆ ಸಿಬ್ಬಂದಿಗೆ ಅಗತ್ಯವಾದ ತರಬೇತಿ, ಮಾರ್ಗದರ್ಶನ ತಾಂತ್ರಿಕತೆಯನ್ನು ಪರಿಚಯಿಸಲಾಗಿದೆ. ಸೈಬರ್ ಅಪರಾಧದ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ. ಸೈಬರ್ ಅಪರಾಧವೇ ನಡೆಯದ ಹಾಗೆ ಜನರನ್ನು ಎಚ್ಚರಿಸಬೇಕಿತ್ತು ಈ ನಿಟ್ಟಿನಲ್ಲಿ ಕ್ರಮ ವಹಿಸುತ್ತೇನೆ.
ರಾಜ್ಯ ಭಯೋತ್ಪಾದನಾ ಚಟುವಟಿಕೆಗಳ ಸ್ಲೀಪರ್ ಸೆಲ್ ಆಗುತ್ತಿದೆ ಎಂಬ ಆರೋಪ ಇದೆಯಲ್ಲ? :
ಈ ಸಮಸ್ಯೆ ಬುಡಸಮೇತ ಕಿತ್ತುಹಾಕುವ ಕ್ರಮ ಆಗಬೇಕಿದೆ. ಇದರ ಕಾರ್ಯನಿರ್ವ ಹಣೆಗೆ ಇಲಾಖೆಯಲ್ಲಿ ಕೆಲವು ವಿಭಾಗಗಳಿದ್ದು ಹೀಗಿರುವ ಕಾರ್ಯಶೈಲಿ ಅವಲೋಕನನಡೆಸಬೇಕಿದೆ. ಇದನ್ನು ಮಟ್ಟ ಹಾಕಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಕ್ರಮ ವಹಿಸಲಾಗುತ್ತದೆ.
ಅಧಿಕಾರಿಗಳು, ಸಿಬ್ಬಂದಿಗೆ ನಿಮ್ಮ ಸಂದೇಶ ಏನು? :
ಪೊಲೀಸ್ ಇಲಾಖೆ ಎಂದರೆ “ಪ್ರವೀಣ್ ಸೂದ್’ ಮಾತ್ರವಲ್ಲ. ಇದೊಂದು ಸಧೃಡ ವ್ಯವಸ್ಥೆ. ಈ ವ್ಯವಸ್ಥೆಯ ಮುಖ್ಯಸ್ಥನಾಗಿ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ಹೆಮ್ಮೆ ಎನಿಸುತ್ತದೆ. ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ನಾನಿದ್ದು ಒಟ್ಟಿಗೆ ಕರೆದೊಯ್ಯುತ್ತೇನೆ. ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡಲಿದ್ದೇನೆ. ಅವರ ಸಮಸ್ಯೆಗಳಿಗೂ ಸ್ಪಂದಿಸಿ ಕಾರ್ಯನಿರ್ವ ಹಿಸುತ್ತೇನೆ. ಆದರೆ, ತಪ್ಪು ಮಾಡಿದರೆ ಶಿಕ್ಷೆಯೂ ಸಿಗಲಿದೆ.
ಇಲಾಖೆಯ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಮುಖ್ಯಮಂತ್ರಿಗಳು, ಗೃಹ ಸಚಿವರಿಗೆ ಧನ್ಯವಾದ. ರಾಜ್ಯದ ಆರೂವರೆ ಕೋಟಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ಪುಣ್ಯ ಎಂದು ಭಾವಿಸುತ್ತೇನೆ -ಪ್ರವೀಣ್ ಸೂದ್, ರಾಜ್ಯ ಪೊಲೀಸ್‌ಮಹಾನಿರ್ದೇಶಕ
–ಮಂಜುನಾಥ ಲಘುಮೇನಹಳ್ಳಿ