Advertisement

ಸಾಮೂಹಿಕ ವಿವಾಹ ದಿಂದ ದುಂದುವೆಚ್ಚಕ್ಕೆ ಕಡಿವಾಣ

03:59 PM Mar 06, 2018 | Team Udayavani |

ಜಾಲಹಳ್ಳಿ: ಸಾಮೂಹಿಕ ಮದುವೆಗಳನ್ನು ಹಮ್ಮಿಕೊಳ್ಳುವುದರಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು. ದೇವದುರ್ಗದ ಅನ್ನಪೂರ್ಣೇಶ್ವರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಬ್ಯಾಂಕ್‌ನಿಂದ ಸಮೀಪದ ಲಿಂಗದಳ್ಳಿಯ ಪರಮಾನಂದ ದೇವಸ್ಥಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ನಮ್ಮ ಹಳ್ಳಿಗಳಲ್ಲಿ ಜನರು ದುಂದುವೆಚ್ಚ ಮಾಡಿ ಮದುವೆ ಮಾಡುವುದು ಪ್ರತಿಷ್ಠೆ ಎಂದು ಭಾವಿಸುತ್ತಾರೆ. ಸಾಮೂಹಿಕ
ಮದುವೆಗಳು ಕೇವಲ ಬಡವರಿಗೆ ಮಾತ್ರ ಎನ್ನುವ ಭಾವನೆ ಇನ್ನೂ ಇದೆ. ಇದು ಬದಲಾಗಬೇಕು. ದುಂದು ವೆಚ್ಚದಲ್ಲಿ ಮದುವೆ ಮಾಡಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ, ಮಾಡಿದ ಸಾಲ ತೀರಿಸಲು ಒದ್ದಾಡುವ ಬದಲು ಸರಳ ಹಾಗೂ ಸಾಮೂಹಿಕ ಮದುವೆಗಳಲ್ಲಿ ಮದುವೆ ಮಾಡಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.

ಅನ್ನಪೂರ್ಣೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘ ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದು ಶ್ಲಾಘನೀಯ. ಇಂತಹ ಮದುವೆಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದ ಅವರು ನವದಂಪತಿಗಳಿಗೆ ಶುಭ ಕೋರಿದರು.

ಆರ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ರಾಜಶೇಖರ ನಾಯಕ, ಜಿಪಂ ಮಾಜಿ ಸದಸ್ಯ, ಜೆಡಿಎಸ್‌ ಮುಖಂಡ ವೆಂಕಟೇಶ ಪೂಜಾರಿ ಮಾತನಾಡಿದರು. ಜಾಲಹಳ್ಳಿ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರಗೋಟ ಅಡವಿಲಿಂಗ ಮಹಾರಾಜರು, ದೇವಪುರ ಶಿವಮೂರ್ತಿ ಸ್ವಾಮೀಜಿ, ದೇವದುರ್ಗ ಕಪಿಲ ಸಿದ್ದರಾಮೇಶ್ವರ ಸ್ವಾಮೀಜಿ, ಸುಲ್ತಾನಪುರು ಶಂಭುನಾಥ ಸ್ವಾಮೀಜಿ, ಕೆಂಬಾವಿ ಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. 

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ನಾಡಗೌಡ, ತಾಪಂ ಸದಸ್ಯರಾದ ಗೋವಿಂದರಾಜ ನಾಯಕ, ಯಂಕಪ್ಪ ಮುರಾಳ, ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ಆದನಗೌಡ ಪಾಟೀಲ, ಜೆಡಿಎಸ್‌ ತಾಲೂಕು ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕೋಲ್ಕಾರ ಇತರರು ಇದ್ದರು. ಅನ್ನಪೂರ್ಣೇಶ್ವರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ ಗಿರಿಜಮ್ಮ ಪತ್ತಾರ ಪ್ರಾಸ್ತವಿಕ ಮಾತನಾಡಿದರು. ಶರಣು ಹುಣಸಗಿ ನಿರೂಪಿಸಿದರು.

Advertisement

ಸಾಮೂಹಿಕ ವಿವಾಹದಲ್ಲಿ 22 ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next