Advertisement

ಒತ್ತಡ ನಿವಾರಿಸುವ ನೌಕಾಸನ

02:36 PM Aug 05, 2021 | Team Udayavani |

ರಕ್ತದೊತ್ತಡ, ತಲೆ ನೋವು, ನಿದ್ರಾಹೀನತೆ ಸಮಸ್ಯೆಯುಳ್ಳವರು ವಿಪರೀತ ದೈಹಿಕ, ಮಾನಸಿಕ ಒತ್ತಡವನ್ನು ಅನುಭವಿಸುತ್ತಿರುವವರು ರೂಢಿಸಿಕೊಳ್ಳಬೇಕಾದ ಆಸನಗಳಲ್ಲಿ ನೌಕಾಸನ ಪ್ರಮುಖವಾದದ್ದು. ಇದು ಎಲ್ಲ ರೀತಿಯ ಒತ್ತಡಗಳಿಂದ ಮನಸ್ಸನ್ನು ಮುಕ್ತಗೊಳಿಸುತ್ತದೆ.

Advertisement

ನೌಕಾಸನವು ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಹೊಂದಿರುವುದಿಲ್ಲ. ಸುಲಭವಾಗಿ ಯಾರೂ ಬೇಕಾದರೂ ಇದನ್ನು ಮಾಡಬಹುದು. ಆರಂಭದಲ್ಲಿ ಸ್ವಲ್ಪ ಕಷ್ಟವಾದರೂ ನಿತ್ಯದ ಅಭ್ಯಾಸದಿಂದ ಸುಲಭವಾಗುತ್ತದೆ. ಈ ಆಸನಕ್ಕೆ ಸಮತೋಲನತೆ ಬೇಕಾಗುತ್ತದೆ.

ಮಾಡುವ ವಿಧಾನ
ಯೋಗ ಮ್ಯಾಟಿನ ಮೇಲೆ ಕುಳಿತು ಎರಡೂ ತೋಳುಗಳು ದೇಹದ ಎರಡೂ ಬದಿಯಲ್ಲಿರಿ ಪಾದ ಗಳನ್ನು ಒಂದಕ್ಕೊಂದು ಜೋಡಿಸಬೇಕು. ದೀರ್ಘ‌ವಾದ ಉಸಿರೆಳೆದುಕೊಂಡು ನಿಧಾನವಾಗಿ ಎದೆ ಹಾಗೂ ಪಾದವನ್ನು ನೆಲದ ಮೇಲಿಂದ ಎತ್ತಬೇಕು. ಹೀಗೆ ಮಾಡುವಾಗ ಕೈಗಳನ್ನು ಚಾಚಿರಬೇಕು. ಪರಿಣಾಮ ಹೊಟ್ಟೆಯ ಹಿಗ್ಗುವಿಕೆಯ ಅನುಭವವಾಗಬೇಕು.

ಬೆರಳುಗಳು ನೇರವಾಗಿರಲಿ. ಕಣ್ಣುಗಳ ದೃಷ್ಟಿಯೂ ನೇರವಾಗಿರಬೇಕು. ಇದೇ ಭಂಗಿಯಲ್ಲಿ ಕೆಲ ಕಾಲವಿದ್ದು ನಿಧಾನಕ್ಕೆ ಮೊದಲಿನ ಸ್ಥಿತಿಗೆ ತಲುಪ ಬೇಕು. ಈ ರೀತಿ ದಿನಕ್ಕೆ 4- 5 ಬಾರಿ ಅಭ್ಯಾಸ ಮಾಡುವುದರಿಂದ ದೇಹಾರೋಗ್ಯಕ್ಕೆ ಉತ್ತಮ ಲಾಭವಿದೆ.

ನೌಕಾಸನವನ್ನು ನಿತ್ಯ ಮಾಡುವುದರಿಂದ ಕಿಬ್ಬೊಟ್ಟೆ, ತೋಳು, ಭುಜಗಳು ಶಕ್ತಿಯುತವಾಗು ತ್ತದೆ. ತೊಡೆ, ಕಾಲುಗಳು, ಸ್ನಾಯುಗಳಿಗೆ ಸದೃಢತೆ ಸಿಗುವುದು. ಪಚನ ಕ್ರಿಯೆ ಉತ್ತ ಮಗೊಂಡು ಮಲಬದ್ಧತೆ ನಿವಾರಣೆಯಾಗುತ್ತದೆ. ಮನಸ್ಸಿಗೆ ಆರಾಮ ದೊರೆಯುತ್ತದೆ. ಬೆನ್ನು, ತಲೆ ನೋವು, ಮೈಗ್ರೇನ್‌, ಕಡಿಮೆ ರಕ್ತದೊತ್ತಡದ ಸಮಸ್ಯೆ ಇರುವವರು ಈ ಆಸನವನ್ನು ಮಾಡಬಾರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next