ಭಾರತದಲ್ಲಿ ಬಿಡುಗಡೆ ಆಗಲಿರುವ ಶಿಯೋಮಿಯವರ ರೆಡ್‌ಮಿ ನೋಟ್ 7 ಅಂಥದ್ದೊಂದು ಹೈಪ್ ಸೃಷ್ಟಿಸಿರುವ ಫೋನ್. ಗ್ರಾಹಕರ ಕೈಗೆಟುಕುವ ದರಕ್ಕೆ ಉತ್ತಮ ಪ್ರೊಸೆಸರ್, ರ್ಯಾಮ್, ಕ್ಯಾಮರಾ ಇತ್ಯಾದಿ ಸ್ಪೆಸಿಫಿಕೇಷನ್ ನೀಡಿದ್ದರಿಂದ ಶಿಯೋಮಿ ಕಂಪೆನಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಬಹುಬೇಗ ಪ್ರಸಿದ್ಧಿಯಾಗಿ, ನಂ. 1 ಸ್ಥಾನದಲ್ಲಿದ್ದ ಸ್ಯಾಮ್‌ಸಂಗ್ ಅನ್ನು ಹಿಂದೆ ಹಾಕಿ, ತಾನೇ ನಂ. 1 ಆಗಿದೆ. ಅದರ ಹೊಸ ಮಾಡೆಲ್‌ಗಳು ಬಿಡುಗಡೆಯಾದಾಗಲೆಲ್ಲ ಚೆನ್ನಾಗಿ ಮಾರಾಟ ಗುತ್ತವೆ. ನಾವು ದಿನನಿತ್ಯ ನೋಡುವ ಒಬ್ಬರ ಕೈಯಲ್ಲಾದರೂ ರೆಡ್‌ಮಿ ಫೋನ್ ಗಳಿರುತ್ತವೆ. ರಿಂಗ್‌ಟೋನ್ ಮೊಳಗಿದಾಗ ಒಬ್ಬರಿಗೊಬ್ಬರಿಗೆ ಕನ್‌ಫ್ಯೂಸ್ ಕೂಡ ಆಗುತ್ತದೆ!
Advertisement
ಇಂತಿಪ್ಪ ರೆಡ್‌ಮಿ, ಗುರುವಾರ ರಿಲೀಸ್ ಮಾಡಲಿರುವ ಫೋನ್‌ಗಾಗಿ ಅದರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಧಿಕೃತವಾಗಿ ಕಂಪೆನಿ ರೆಡ್‌ಮಿ ನೋಟ್ 7 ನ ಸ್ಪೆಸಿಫಿಕೇಷನ್‌ಗಳನ್ನು ಬಿಡುಗಡೆ ಮಾಡಿಲ್ಲ. ಆದರೆ ಶಿಯೋಮಿಯ ತವರು ನಾಡು ಚೀನಾ ಮಾರುಕಟ್ಟೆಗೆ ಈಗಾಗಲೇ ಇದನ್ನು ಬಿಡುಗಡೆ ಮಾಡಲಾಗಿದೆ. ಅದರ ಆಧಾರದಲ್ಲಿ ಭಾರತದಲ್ಲೂ ಅದೇ ಸ್ಪೆಸಿಫಿಕೇಷನ್ ಇರಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಮಧ್ಯಮ ವರ್ಗದಲ್ಲಿ ಶಕ್ತಿಶಾಲಿಯಾದ ಸ್ನಾಪ್‌ಡ್ರಾಗನ್ 660 ಪ್ರೊಸೆಸರ್ ಇರಲಿದೆ. 6 ಜಿಬಿ ರ್ಯಾಮ್ 64 ಜಿಬಿ ಆಂತರಿಕ ಸಂಗ್ರಹ, 4 ಜಿಬಿ ರ್ಯಾಮ್, 64 ಜಿಬಿ
Related Articles
Advertisement
48 ಮೆಗಾಪಿಕ್ಸಲ್ ಎಂದರೆ ಅದು ಸಂಪೂರ್ಣ ನೈಜ 48 ಮೆಗಾ ಪಿಕ್ಸಲ್ ಅಲ್ಲ. ಈ ಕ್ಯಾಮರಾದಲ್ಲಿರುವುದು ಸ್ಯಾಮ್‌ಸಂಗ್ ಐಸೋಸೆಲ್ ಜಿಎಂ1 ಎಂಬ ಸೆನ್ಸರ್. ಇದು 48 ಮೆಗಾಪಿಕ್ಸಲರ್ ಉಳ್ಳ ಸೋನಿ ಐಎಂಎಕ್ಸ್ 586 ಸೆನ್ಸರ್‌ಗೆ ಸರಿ ಸಮವಲ್ಲ. ಸೋನಿ ಐಎಂಎಕ್ಸ್ 586 ಸೆನ್ಸರ್‌ನಲ್ಲಿ ಪಿಕ್ಸೆಲ್Yಳು ನೈಜ 48 ಮೆಗಾಪಿಕ್ಸಲ್ ರೆಸಲೂಶನ್ ಹೊಂದಿವೆ. ರೆಡ್‌ಮಿ ನೋಟ್ 7 ನಲ್ಲಿರುವ ಸ್ಯಾಮ್‌ಸಂಗ್ ಜಿಎಂ1 ಸೆನ್ಸರ್‌ನಲ್ಲಿ 12 ಮೆಗಾಪಿಕ್ಸಲ್ ಇದ್ದು, ಇದು ಚಿತ್ರಗಳನ್ನು 48 ಮೆಗಾಪಿಕ್ಸಲ್ ಅಗಿ ಪರಿವರ್ತಿಸುತ್ತದೆ ಎಂದು 91 ಮೊಬೈಲ್ಸ್‌ನ ಪ್ರಸಿದ್ಧ ವಿಮರ್ಶಕ ಅಭಿಮಾನ್ ಬಿಸ್ವಾಸ್ ಹೇಳುತ್ತಾರೆ. ಅಲ್ಲದೇ 48 ಮೆಗಾಪಿಕ್ಸಲ್ ಚಿತ್ರದ ರೆಸಲೂಷನ್ ಬರಬೇಕಾದರೆ ಕ್ಯಾಮರಾ ಇಂಟರ್‌ಫೇಸ್‌ನಲ್ಲಿ ಪ್ರೊ ಮೋಡ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
ಈಗ ಮೊಬೈಲ್‌ಗಳಲ್ಲಿ 48 ಮೆಗಾಪಿಕ್ಸಲ್ ರೇಸ್ ಆರಂಭವಾಗಿದೆ. ಸಾಮಾನ್ಯ ಜನರು ಹೆಚ್ಚು ಮೆಗಾಪಿಕ್ಸಲ್ ಇದ್ದಷ್ಟೂ ಫೋಟೋಗಳು ಹೆಚ್ಚು ಚೆನ್ನಾಗಿ ಬರುತ್ತವೆ ಎಂದು ನಂಬಿರುವುದರಿಂದ, ರೇಸ್‌ಗೆ ಬಿದ್ದ ಶಿಯೋಮಿ ತಾನೂ 48 ಮೆಗಾಪಿಕ್ಸಲ್ ಅನ್ನುತಾಂತ್ರಿಕವಾಗಿ ತೋರಿಸಿದೆ!
15 ಸಾವಿರದೊಳಗಿನ ಫೋನ್‌ನಲ್ಲಿ ಈ ಥರದ್ದೊಂದು ಪ್ರಯತ್ನಕ್ಕೆ ಶಿಯೋಮಿ ಮುಂದಾಗಿರುವುದು ಸ್ವಾಗತಾರ್ಹವೇ. ಈ ದರಕ್ಕೆ ಇದು ಒಳ್ಳೆಯ ಕ್ಯಾಮರಾ ಫೋನ್ ಆಗುವುದರಲ್ಲಿ ಸಂದೇಹವಿಲ್ಲ. 4000 ಎಂಎಎಚ್ ಬ್ಯಾಟರಿ, ಲೋಹ ಮತ್ತು ಗಾಜಿನ ಆಕರ್ಷಕ ವಿನ್ಯಾಸ, ಯುಎಸ್‌ಬಿ ಟೈಪ್ ಸಿ ಪೋರ್ಟ್, ವೇಗದ ಚಾರ್ಜಿಂಗ್, ಸ್ನಾಪ್‌ಡ್ರಾಗನ್ 660 ಪ್ರೊಸೆಸರ್, ಉತ್ತಮ ಕ್ಯಾಮರಾ, 15 ಸಾವಿರ ರೂ. ದರ ವಲಯದಲ್ಲಿರುವುದರಿಂದ ಈ ಫೋನ್ ಗ್ರಾಹಕರ ಮನ ಸೆಳೆಯುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
ಇದು ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ದೊರಕಲಿದ್ದು, ಫೋನ್ ಕೊಳ್ಳಲು ಸಾಮಾನ್ಯ ಗ್ರಾಹಕರು ಬಹಳ ಕಷ್ಟಪಡಬೇಕಾಗುತ್ತದೆ. ವಾರಕ್ಕೊಮ್ಮೆ ಫ್ಲಾಶ್ ಸೇಲ್‌ಗಳಿಗೆ ಕಾದು ಕೊಳ್ಳುವುದೆಂದರೆ ಅದೊಂದು ದೊಡ್ಡ ರಗಳೆ. ಮೊದಲ ಸೇಲ್‌ನಲ್ಲಿ 30 ಸೆಕೆಂಡಿನೊಳಗೆ ರೆಡ್‌ಮಿ 7, ಇಷ್ಟು ಲಕ್ಷ ಫೋನ್ ಖಾಲಿಯಾಯಿತೆಂದು ಶಿಯೋಮಿಯ ಭಾರತದ ಮುಖ್ಯಸ್ಥ ಮನುಕುಮಾರ್ ಜೈನ್ ಫೇಸ್‌ಬುಕ್‌ನಲ್ಲಿ, ಟ್ವಿಟರ್‌ನಲ್ಲಿ ಹಾಕಿಕೊಳ್ಳುವುದಂತೂ ಖಚಿತ!
– ಕೆ.ಎಸ್. ಬನಶಂಕರ ಆರಾಧ್ಯ