Advertisement

ರೆಡ್‌ಮಿ ಗೋ: ಅಗ್ಗದ ಬೆಲೆಯ ಸ್ಮಾರ್ಟ್‌ ಫೋನ್‌

09:46 AM Mar 26, 2019 | Sriram |

ಭಾರತದ ಸಾಮಾನ್ಯ ಜನರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿರುವ ಶಿಯೋಮಿ ಕಂಪೆನಿ 4500 ರೂ. ಗೆ ಒಂದು ಮೊಬೈಲ್‌ ಅನ್ನು ಈಗಷ್ಟೇ ಬಿಡುಗಡೆ ಮಾಡಿದೆ. ಇದರಹೆಸರು ರೆಡ್‌ ಮಿ ಗೋ. ಈ ದೇಶದಲ್ಲಿ ಎಷ್ಟು ದರದ ಮೊಬೈಲುಗಳನ್ನು ಹೊರಬಿಟ್ಟರೆ ಚೆನ್ನಾಗಿ ಮಾರಾಟವಾಗುತ್ತದೆ ಎಂಬುದನ್ನು ಶಿಯೋಮಿ ಕಂಪೆನಿ
ಅರ್ಥಮಾಡಿಕೊಂಡಿದೆ.

Advertisement

15-16 ಸಾವಿರ ರೂ.ಗಳ ಮೇಲೆ ಮೊಬೈಲ್‌ ಬಿಟ್ಟರೆ ಭಾರತದಲ್ಲಿ ಮಿಲಿಯಗಟ್ಟಲೆ ಜನರಿಗೆ ಮಾರಾಟ ಮಾಡಲಾಗುವುದಿಲ್ಲ ಎಂದು ಗೊತ್ತು. ಹಾಗಾಗಿ, 30 ಸಾವಿರ ರೂ.ಗಳಿಗೂ ಮೇಲ್ಪಟ್ಟ ದರದ ಫ್ಲಾಗ್‌ಶಿಪ್‌ ಮೊಬೈಲ್‌ಗ‌ಳನ್ನು ನಮ್ಮ ದೇಶಕ್ಕೆ ಈ ಕಂಪೆನಿ ಬಿಡುಗಡೆ ಮಾಡುವುದೇ ಇಲ್ಲ!

ನಿಮ್ಮ ಜಮೀನಿನಲ್ಲಿ ಕೆಲಸ ಮಾಡುವ ಆಳಿರಬಹುದು, ತಿಂಗಳಿಗೆ 3-4 ಸಾವಿರ ರೂ. ಸಂಪಾದನೆ ಮಾಡುವ ಆಫೀಸ್‌ ಬಾಯ್‌, ಹೂ ಮಾರುವ ಹುಡುಗ, ಗಾರೆ ಕೆಲಸಕ್ಕೆ ಹೋಗುವ ಪರಿಚಯದ ಯುವಕ ಇಂಥವರು ಕೈಯಲ್ಲಿ ಒಂದು ಹಳೆಯ ಅನ್‌ ಬ್ರಾಂಡೆಡ್‌ ಕೀ ಪ್ಯಾಡ್‌ ಮೊಬೈಲ್‌ ಇಟ್ಟುಕೊಂಡಿರುತ್ತಾರೆ. ಇಲ್ಲವೇ ಜಿಯೋದಲ್ಲಿ 1500 ರೂ. ಗೆ ದೊರಕುವ ಇಂಟರ್‌ನೆಟ್‌, ವಾಟ್ಸಪ್‌ ಸೌಲಭ್ಯ ಇರುವ ಕೀ ಪ್ಯಾಡ್‌ ಮೊಬೈಲ್‌ ಇರುತ್ತದೆ. ಇಂಥವರಿಗೆ ಒಂದು ಸ್ಮಾರ್ಟ್‌ ಫೋನ್‌ ತೆಗೆದುಕೊಳ್ಳುವ ಆಸೆ ಇರುತ್ತದೆ. ಕನಿಷ್ಟ 7-8 ಸಾವಿರ ರೂ. ಕೊಡಬೇಕು. ಅಷ್ಟು ದುಡ್ಡು ಕೊಡುವ ಸಾಮರ್ಥ್ಯ ನಮ್ಮಲ್ಲಿಲ್ಲ. ಯಾವುದಾದರೂ 3-4 ಸಾವಿರ ರೂ.ಗೆ ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಇದ್ದರೆ ಕೊಡಿಸಿ ಅಣ್ಣಾ ಎಂದು ಕೇಳುತ್ತಿರುತ್ತಾರೆ. ಇಂಥವರಿಗಾಗಿಯೇ ಶಿಯೋಮಿ ಕಂಪೆನಿ 4500 ರೂ. ಗೆ ಒಂದು ಮೊಬೈಲ್‌ ಅನ್ನು ಈಗಷ್ಟೇ ಬಿಡುಗಡೆ ಮಾಡಿದೆ. ಇದರ ಹೆಸರು ರೆಡ್‌ ಮಿ ಗೋ.

ಭಾರತದ ಸಾಮಾನ್ಯ ಜನರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿರುವ ಈ ಕಂಪೆನಿ, ಈ ದೇಶದಲ್ಲಿ ಎಷ್ಟು ದರದ ಮೊಬೈಲುಗಳನ್ನು ಹೊರಬಿಟ್ಟರೆ ಚೆನ್ನಾಗಿ ಮಾರಾಟವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಂಡಿದೆ. 15-16 ಸಾವಿರ ರೂ.ಗಳ ಮೇಲೆ ಮೊಬೈಲ್‌ ಬಿಟ್ಟರೆ ಭಾರತದಲ್ಲಿ ಮಿಲಿಯಗಟ್ಟಲೆ ಜನರಿಗೆ ಮಾರಾಟ ಮಾಡಲಾಗುವುದಿಲ್ಲ ಎಂದು ಗೊತ್ತು. ಹಾಗಾಗಿ, ರೆಡ್‌ ಮಿ ಅಲ್ಲದೇ ಎಂಐ ಹೆಸರಿನಲ್ಲಿರುವ 30 ಸಾವಿರ ರೂ.ಗಳಿಗೂ ಮೇಲ್ಪಟ್ಟ ದರದ ಫ್ಲಾಗ್‌ಶಿಪ್‌ ಮೊಬೈಲ್‌ಗ‌ಳನ್ನು ನಮ್ಮ ದೇಶಕ್ಕೆ ಈ ಕಂಪೆನಿ ಬಿಡುಗಡೆ ಮಾಡುವುದೇ ಇಲ್ಲ!

4 ಸಾವಿರದಿಂದ 4500 ರೂ. ದರದಲ್ಲಿ ಒಂದು ಫೋನ್‌ ಬಿಟ್ಟರೆ ಬಡವರ್ಗದ ಜನರು ಹೆಚ್ಚು ಸಂಖ್ಯೆಯಲ್ಲಿ ಕೊಳ್ಳುತ್ತಾರೆಂಬುದು ಸಹಜ. ಆದರೆ ಹೆಸರಾಂತ ಕಂಪೆನಿಗಳಾವುವೂ ಈ ದರದಲ್ಲಿ ಫೋನ್‌ ಬಿಟ್ಟಿರಲಿಲ್ಲ. ಶಿಯೋಮಿ ಆ ಕೆಲಸ ಮಾಡಿದೆ. ಪ್ರಸ್ತುತ ರೆಡ್‌ಮಿ ಗೋ ಮೊಬೈಲ್‌ನಲ್ಲಿ ಏನೆಲ್ಲ ತಾಂತ್ರಿಕ ಅಂಶಗಳಿವೆ ಬನ್ನಿ ನೋಡೋಣ.

Advertisement

ಮೊದಲನೆಯದಾಗಿ ಇದು 5 ಇಂಚಿನ ಪರದೆಯುಳ್ಳ ಮೊಬೈಲ್‌. ಇದು ಎಚ್‌ ಡಿ ಡಿಸ್‌ಪ್ಲೇ ಹೊಂದಿದೆ. (1280*720 ಪಿಕ್ಸಲ್‌ಗ‌ಳು) ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ 425, ನಾಲ್ಕು ಕೋರ್‌ಗಳ ಪ್ರೊಸೆಸರ್‌ ಹೊಂದಿದೆ. ಈ ದರಕ್ಕೆ ಈ ಪ್ರೊಸೆಸರ್‌ ನೀಡಿರುವ ಶಿಯೋಮಿಯನ್ನು ಮೆಚ್ಚಲೇಬೇಕು. ಹಲವಾರು ಹೆಸರಾಂತ ಬ್ರಾಂಡ್‌ಗಳು 10-12 ಸಾವಿರ ರೂ.ಗಳ ಮೊಬೈಲ್‌ಗೆ ಈ ಪ್ರೊಸೆಸರ್‌ ಹಾಕುತ್ತವೆ. ಇದರಲ್ಲಿರುವ ಪ್ರೊಸೆಸರ್‌ನಲ್ಲಿ ಈ ಮೊಬೈಲ್‌ ಅಡೆತಡೆಯಿಲ್ಲದೇ ಕೆಲಸ ಮಾಡುತ್ತದೆ. 8 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದೆ. ಎರಡು ಸಿಮ್‌ ಹಾಕಿಕೊಂಡು ಒಂದು ಮೆಮೊರಿ ಕಾರ್ಡ್‌ (128 ಜಿಬಿವರೆಗೂ) ಕೂಡ ಹಾಕಿಕೊಳ್ಳಬಹುದು. 1 ಜಿಬಿ ರ್ಯಾಮ್‌ ಇದೆ. 3000 ಎಂಎಎಚ್‌ ಬ್ಯಾಟರಿ ಹೊಂದಿದೆ. ಅಂಡ್ರಾಯ್ಡ 8.1 ಆವೃತ್ತಿ ಹೊಂದಿದೆ.

8 ಜಿಬಿ ಇಂಟರ್ನಲ್‌ ಮೆಮೊರಿ, 1 ಜಿಬಿ ರ್ಯಾಮ್‌ ಎಂದರೆ ಇದು ಸಾಕಾ ಮಾರಾಯಾ? ಎಂದು ಹುಬ್ಬೇರಿಸಬೇಡಿ. ಆ ದರಕ್ಕೆ ಇನ್ನೆಷ್ಟು ತಾನೇ ಕೊಡಲು ಸಾಧ್ಯ? ಕೆಲವು ಕಂಪೆನಿಗಳು, 4 ಜಿಬಿ ಆಂತರಿಕ ಸಂಗ್ರಹ, 512 ಎಂಬಿ ರ್ಯಾಮ್‌ ಕೊಡುತ್ತಿದ್ದುದನ್ನು ನೆನಪಿಸಿಕೊಳ್ಳಿ! ಈ ಮೊಬೈಲ್‌ಗೆ ನಾವು ಕೊಡುವ ದರಕ್ಕೆ ಏನಿದೆ ಎಂಬುದನ್ನು ಲೆಕ್ಕ ಹಾಕಬೇಕೇ ಹೊರತು, 4,500 ರೂ. ನೀಡಿ ಕನಿಷ್ಟ 3 ಜಿಬಿ ರ್ಯಾಮ್‌, 32 ಜಿಬಿ ಇಂಟರ್ನಲ್‌ ಮೆಮೊರಿ ಇರಬೇಕಿತ್ತು ಎಂದುಕೊಂಡರೆ ಕಷ್ಟ! 8 ಮೆಗಾಪಿಕ್ಸಲ್‌ ಹಿಂಬದಿ ಕ್ಯಾಮರಾ, 5 ಮೆಗಾ ಪಿಕ್ಸಲ್‌ ಸೆಲ್ಫಿà ಕ್ಯಾಮರಾ ಇದೆ. ಪ್ಲಾಸ್ಟಿಕ್‌ ದೇಹ ಹೊಂದಿದೆ. ಮೊಬೈಲ್‌ನೊಳಗಿನ ಸೆಟ್ಟಿಂಗ್ಸ್‌ ಇತ್ಯಾದಿಗಳು ಕನ್ನಡ ಸೇರಿದಂತೆ 20 ಪ್ರಾದೇಶಿಕ ಭಾಷೆಯಲ್ಲಿ ಲಭ್ಯವಾಗುತ್ತದೆ. ಮೊಬೈಲ್‌ 137 ಗ್ರಾಂ ತೂಕವಿದೆ. ದರ ಮೊದಲೇ ಹೇಳಿದ್ದೇನೆ 4500 ರೂ. ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯ. ಫ್ಲಿಪ್‌ಕಾರ್ಟ್‌ ಮತ್ತು ಮಿ ಸ್ಟೋರ್‌ ನಲ್ಲಿ ಮಾತ್ರ ದೊರಕುತ್ತದೆ.

ಕೆಲವು ದಿನಗಳು ಕಳೆದರೆ ಫ್ಲಿಪ್‌ಕಾರ್ಟ್‌ನಲ್ಲಿ ಯಾವುದಾದರೂ ಹಬ್ಬದ ಮಾರಾಟವೋ, ಮೆಗಾ ಮೇಳವೋ ನಡೆದಾಗ 500 ರೂ. ಕಡಿಮೆ ದರ ಇಟ್ಟು, ಯಾವುದಾದರೂ ಡೆಬಿಟ್‌ ಕಾರ್ಡ್‌ಗೆ ಡಿಸ್‌ಕೌಂಟ್‌ ಕೂಡ ಸೇರಿದರೆ 3500 ರೂ.ಗೇ ಈ ಮೊಬೈಲ್‌ ದೊರಕುವ ಅವಕಾಶವೂ ಇದೆ! ಕೀಪ್ಯಾಡ್‌ ಮೊಬೈಲ್‌ ದರಕ್ಕೆ ಸ್ಮಾರ್ಟ್‌ ಫೋನ್‌ ದೊರಕಿದಂತಾಗುತ್ತದೆ.

– ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next