Advertisement
ಕಿವಿಯಿಂದ ಇಯರ್‌ಬಡ್ ತೆಗೆಯುತ್ತಿದ್ದಂತೆಯೇ ಮ್ಯೂಸಿಕ್ ನಿಲ್ಲುವುದಕ್ಕಾಗಿ ಇನ್‌ಫ್ರಾ ರೆಡ್ ಸೆನ್ಸಾರ್ ಬಳಸಲಾಗಿದೆ. ಸದ್ಯ ಬಿಳಿ, ನೀಲಿ ಮತ್ತು ಪಿಂಕ್ ಬಣ್ಣದಲ್ಲಿ ಈ ಇಯರ್‌ಬಡ್ ಲಭ್ಯವಿದೆ. ಇದರ ಬೆಲೆ2,999 ರೂಪಾಯಿ. ಅಮೆಜಾನ್, ಎಂಐ ಸ್ಟೋರ್ ಮತ್ತು ಶಿಯೊಮಿ ಅಧಿಕೃತ ವೆಬ್‌ಸೈಟ್‌ನಲ್ಲೂ ಲಭ್ಯವಿದೆ. ಉಳಿದಂತೆ ಎಲ್ಲ ಅಂಗಡಿಗಳಲ್ಲಿ ಸೆ.9ರಿಂದ ಲಭ್ಯವಾಗಲಿದೆ.
ಜಗತ್ತಿನಾದ್ಯಂತ ಕ್ರಿಪ್ಟೋಕರೆನ್ಸಿ ಬಳಕೆ ಹೆಚ್ಚಾದಂತೆಯೇ ಟ್ವಿಟರ್ ಸಂಸ್ಥೆಯೂ ಅದನ್ನು ಒಳಪಡಿಸಿಕೊಳ್ಳಲು ಮುಂದಾಗಿದೆ. ಟ್ವಿಟರ್ ಬಳಕೆದಾರರಿಗೆ ಇನ್ನು ಮುಂದೆ ತಮ್ಮ ಪ್ರೊಫೈಲ್‌ನಲ್ಲಿ ಬಿಟ್‌ಕಾಯಿನ್ ಮತ್ತು ಎಥೆರೆಮ್ ಅಡ್ರೆಸ್‌ನ್ನು ಹಾಕಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಟ್ವಿಟರ್ ಇತ್ತೀಚೆಗೆ ಪರಿಚಯಿಸಿದ ಟಿಪ್ ಜಾರ್ ಬಳಸಿಕೊಂಡು ನೀವು ಕ್ರಿಫ್ಟೋಕರೆನ್ಸಿಯ ಟಿಪ್ ನ್ನೂ ಪಡೆಯಬಹುದು. ಈ ಅಪ್ ಡೇಟ್ ಕುರಿತಾಗಿ ಟ್ವಿಟರ್ ಸಂಸ್ಥೆಯ ಸಿಬ್ಬಂದಿಯೊಬ್ಬರು. ಪ್ರತಿಕ್ರಿಯಿಸಿದ್ದು ಆದಷ್ಟು ಬೇಗ ಈ ಅಪ್‌ಡೇಟ್ ಬರುವುದಾಗಿ ತಿಳಿಸಿದ್ದಾರೆ.