Advertisement

ಜಿಪಂ, ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆ

03:05 PM Jan 09, 2023 | Team Udayavani |

ದೇವನಹಳ್ಳಿ: ಜಿಲ್ಲೆಯ ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆ ಕಾರ್ಯವನ್ನು ಕರ್ನಾ ಟಕ ಪಂಚಾಯತ್‌ ರಾಜ್‌ ಸೀಮಾ ಆಯೋಗ ತನ್ನ ಕರಡು ಅಧಿಸೂಚನೆ ಪ್ರಕಟಿಸಿದ್ದು, ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ 25 ಜಿಪಂ ಹಾಗೂ 72 ತಾಪಂ ಸದಸ್ಯ ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ.

Advertisement

ಕರಡು ಅಧಿಸೂಚನೆ ಪ್ರಕಾರ ಜಿಲ್ಲೆಯಲ್ಲಿ ಹಾಲಿ ಅಸ್ತಿತ್ವದಲ್ಲಿರುವ ಜಿಪಂ ಒಟ್ಟು ಕ್ಷೇತ್ರಗಳ ಪೈಕಿ 4 ಸ್ಥಾನ ಹೆಚ್ಚಾಗಿದ್ದರೆ, ತಾಪಂ ಸದಸ್ಯ ಸ್ಥಾನ ಮುಂದುವರಿದಿದೆ. ಜಿಲ್ಲೆಯಲ್ಲಿ ಹಾಲಿ ಇದ್ದ ಜಿಪಂ 21 ಕ್ಷೇತ್ರ ಈಗ 25ಕ್ಕೆ ಏರಿಕೆಯಾಗಿದ್ದು, ತಾಪಂ ಸದಸ್ಯರ ಸಂಖ್ಯೆ ಯಥಾಸ್ಥಿತಿ ಯಾಗಿದೆ. ಜಿಲ್ಲೆಯ ಜಿಲ್ಲಾ ಮತ್ತು ತಾಪಂ ಕ್ಷೇತ್ರಗಳ ಸಂಖ್ಯೆಯನ್ನು ಈ ಬಾರಿ ಹೆಚ್ಚಿಸುವುದರ ಜೊತೆಗೆ ಗ್ರಾಮಗಳು ಸಹ ಈ ಹಿಂದೆ ಕ್ಷೇತ್ರಗಳ ಸೇರ್ಪಡೆಯಾ ಗಿರುವುದು ಬಿಡುಗಡೆ ಮಾಡಿರುವ ಆಯೋಗದಲ್ಲಿ ಕಾಣಬಹುದಾಗಿದೆ.

ಜನಸಂಖ್ಯೆ ಆಧಾರದ ಮೇಲೆ ಇಂತಹ ಬದಲಾವಣೆ ತಂದಿರುವ ಆಯೋಗ. ಇದಕ್ಕೆ ಸಂಬಂಧಿಸಿದಂತೆ ಆಕ್ಷೇ ಪಣೆಗಳಿದ್ದಲ್ಲಿ ಜಿಲ್ಲಾಡಳಿತಕ್ಕೆ ಜ.15ರೊಳಗ ಸಲ್ಲಿಸ ಬಹುದಾಗಿದೆ. ಈ ಮೊದಲು ಇದ್ದ ಗ್ರಾಮಗಳನ್ನು ಕೆಲವು ಹೊಸ ಕ್ಷೇತ್ರಗಳಿಗೆ ಇನ್ನು ಕೆಲವನ್ನು ಅಕ್ಕಪಕ್ಕದ ಗ್ರಾಮಗಳಿಗೆ ಬದಲಾಯಿಸಿ ಆಯೋಗ ಸೀಮಾ ಗಡಿಯನ್ನು ನಿರ್ಧಿರಿಸಿದೆ. ರಾಜ್ಯ ರಾಜಕಾರಣ ತಿರುಗಿ ನನ್ನತ್ತ ನೋಡುವಂತೆ ರಾಜಕಾರಣದ ಜಿದ್ದಿಗೆ ಹೊಸ ಕೋಟೆ ಕ್ಷೇತ್ರಕ್ಕೆ ಈ ಹಿಂದೆ ಇದ್ದ 22 ತಾಪಂ ಕ್ಷೇತ್ರಗಳು ಉಳಿಸಿಕೊಂಡು ಜಿಪಂ ಕ್ಷೇತ್ರಗಳನ್ನು ಹೆಚ್ಚಿಸಿಕೊಂಡಿದೆ. ಇಲ್ಲೂ ಕೂಡಾ ಜನಸಂಖ್ಯೆ ಆಧರಿಸಿ ಗುರುತಿಸಿದ್ದು, ಇವರ ವ್ಯಾಪ್ತಿಗೆ ಬರುವ ಗಡಿಗಳನ್ನು ಸಾಕಷ್ಟು ಬದಲಾವಣೆಯಾಗಿದೆ.

ದೇವನಹಳ್ಳಿ ಮತ್ತು ನೆಲಮಂಗಲ ಕ್ಷೇತ್ರಗಳಲ್ಲಿ ತಲಾ ನಾಲ್ಕು ಜಿಪಂ ಕ್ಷೇತ್ರಗಳು ಇದ್ದವು. ಇದೀಗ ಒಂದೊಂದು ಸ್ಥಾನಗಳು ಹೆಚ್ಚುವರಿಯಾಗಿದೆ. ದೊಡ್ಡ ಬಳ್ಳಾಪುರದಲ್ಲಿ 6 ಜಿಪಂ ಸ್ಥಾನಗಳಿದ್ದು, ಅದರಲ್ಲಿ ಒಂದು ಸ್ಥಾನ ಹೆಚ್ಚುವರಿಯಾಗಿದೆ. ಹೊಸಕೋಟೆಯಲ್ಲಿ ಸಹ ಒಂದು ಜಿಪಂ ಕ್ಷೇತ್ರ ಹೆಚ್ಚುವರಿಯಾಗಿದೆ. ಈ ಕ್ಷೇತ್ರಗಳಲ್ಲಿ ಮುಂಬರುವ ದಿನಗಳಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದ ಅಭ್ಯರ್ಥಿಗಳ ಲೆಕ್ಕಾಚಾರವನ್ನು ಹೊಸ ಸೀಮಾ ಗಡಿ ಬುಡಮೇಲು ಮಾಡಿದೆ.

ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿರುವ ಜಿಪಂ ಕ್ಷೇತ್ರಗಳು :

Advertisement

ದೇವನಹಳ್ಳಿ ಜಿಪಂ ಕ್ಷೇತ್ರಗಳು:  ಆವತಿ, ಕುಂದಾಣ, ಬೂದಿಗೆರೆ, ಬಿಜ್ಜವಾರ, ಚನ್ನರಾಯಪಟ್ಟಣ

ಹೊಸಕೋಟೆ ಜಿಪಂ ಕ್ಷೇತ್ರಗಳು: ಜಡಿಗೇನಹಳ್ಳಿ, ಅನುಗೊಂಡನಹಳ್ಳಿ, ದೊಡ್ಡಗಟ್ಟಿಗನಬ್ಬಿ, ಚೊಕ್ಕನಹಳ್ಳಿ, ಸೂಲಿಬೆಲೆ, ಮುಗವಾಳ, ನೆಲವಾಗಿಲು, ಶಿವನಾಪುರ.

ದೊಡ್ಡಬಳ್ಳಾಪುರ ಜಿಪಂ ಕ್ಷೇತ್ರಗಳು: ಕನಸವಾಡಿ, ದೊಡ್ಡಬೆಳವಂಗಲ, ಸಾಸಲು, ತೂಬಗೆರೆ, ರಾಜಘಟ್ಟ, ದರ್ಗಾಜೋಗಿಹಳ್ಳಿ, ಕೊಡಿಗೇಹಳ್ಳಿ,

ನೆಲಮಂಗಲ ಜಿಪಂ ಕ್ಷೇತ್ರಗಳು:  ಕಣ್ಣೇನಗೌಡನಹಳ್ಳಿ, ಟಿ.ಬೇಗೂರು, ತ್ಯಾಮಗೊಂಡ್ಲು, ಸೋಂಪುರ, ಶಿವಗಂಗ

ಪ್ರಾದೇಶಿಕ ಕ್ಷೇತ್ರಗಳ ಸೀಮಾ ಗಡಿ ನಿರ್ಣಯದ ಗಡಿ ಆಯೋಗದಿಂದ ಜಿಲ್ಲೆಯ ಜಿಪಂ ಮತ್ತು ತಾಪಂ ಕ್ಷೇತ್ರಗಳ ಗಡಿ ನಿರ್ಣಯ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ಯಾವುದೇ ಆಕ್ಷೇಪಣೆ ಗಳಿದ್ದಲ್ಲಿ ಜ. 15ರ ಸಂಜೆ 5 ಗಂಟೆಯೊಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬಹುದು. – ಆರ್‌.ಲತಾ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next